• Home
  • »
  • News
  • »
  • state
  • »
  • Murder: ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು; ಹಸೆಮಣೆ ಏರಬೇಕಾದವನು ಮಸಣಕ್ಕೆ!

Murder: ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು; ಹಸೆಮಣೆ ಏರಬೇಕಾದವನು ಮಸಣಕ್ಕೆ!

ಮೃತ ನವೀನ್​

ಮೃತ ನವೀನ್​

ವಾಣಿಜ್ಯ ನಗರಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಸೆಮಣೆ ಏರಬೇಕಾದವರು ಮಸಣಕ್ಕೆ ಹೋಗಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ಅ.17): ವಾಣಿಜ್ಯ ನಗರಿಯಲ್ಲಿ (Commercial City) ಪೋಲಿಸರು ಎಷ್ಟೇ ಕಾನೂನು ಬಿಗಿಗೊಳಿಸಿದ್ರು, ಕ್ರೈಂ ರೇಟ್ (Crime Rate) ಮಾತ್ರ ನಿಯಂತ್ರಣಕ್ಕೆ ಬರ್ತಿಲ್ಲಾ. ದಿನ ಕಳೆದಂತೆ ಪುಡಿ ರೌಡಿಗಳ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಕ್ಷುಲ್ಲಕ ಕಾರಣಕ್ಕೂ ನೆತ್ತರು ಹರಿಸಲು ಹಾತೊರೆಯುತ್ತಿರುವ ಗೂಂಡಾ ಗ್ಯಾಂಗ್‌ಗಳು (Goonda Gang) ಯಾರ ಕಂಟ್ರೋಲ್‌ ಗೂ ಸಿಗುತ್ತಿಲ್ಲಾ. ಹುಬ್ಬಳ್ಳಿಯಲ್ಲಿ (Hubballi) ಬಿದ್ದಿರುವ ಮತ್ತೊಂದು ಹೆಣ ನಾಗರಿಕರ ನೆಮ್ಮದಿ ಕದಡಿದೆ. 
ಇವ್ನ ಹೆಸರು ನವೀನ. ವಯಸ್ಸು 27 ವರ್ಷ. ಹುಬ್ಬಳ್ಳಿಯ ಬಂಕಾಪುರ ಚೌಕ್ ನಿವಾಸಿ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೇ ನವೀನ ಹಸೆಮಣೆ ಏರಬೇಕಿತ್ತು. ಇತ್ತೀಚಿಗಷ್ಟೇ ಬದುಕಿಗೊಂದು ಉದ್ಯೋಗ ಅಂತ ಹುಡುಕಿಕೊಂಡು ನೆಮ್ಮದಿಯ ಜೀವನ (Life) ನಡೆಸುತ್ತಿದ್ದಾಗ ನಡೆಯಬಾರದ ದುರ್ಘಟನೆಯೊಂದು ನಡೆದುಹೊಗಿದೆ.


ಮೂವರು ಪುಡಿ ರೌಡಿಗಳ ಗ್ಯಾಂಗ್‌


ಮೂವರು ಪುಡಿ ರೌಡಿಗಳ ಗ್ಯಾಂಗ್‌ ನವೀನನ ಮೇಲೆ ಮದ್ಯರಾತ್ರಿ ಅಟ್ಯಾಕ್ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ನವೀನ್​ನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾನೆ. ಮನೆಯ ಕುಡಿಯನ್ನು ಕಳ್ಕೋಂಡು ಹೆತ್ತ ಕರುಳ ರೋಧನೆ ಹೇಳತೀರದು. ಈ ಸಾವಿನ ಹಿಂದಿನ ಕಾರಣ ಮಾತ್ರ ಇನ್ನೂ ಪೋಲಿಸರಿಗೆ ಗೊತ್ತಾಗಿಲ್ಲಾ. ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಾಗಿದ್ದು, ತನಿಖೆ ಆರಂಭಗೊಂಡಿದೆ.


ಆಟೋದಲ್ಲಿ ಕಿಡ್ನ್ಯಾಪ್ ಸಂಚು ರೂಪಿದ್ರು


ಎಂದಿನಂತೆ ಘಂಟಿಕೇರಿಯ ಬಾರ್‌ ವೊಂದರಲ್ಲಿ ಕುಡಿಬೇಕಂತಾ ನವೀನ ತೆರಳಿದ್ದಾನೆ. ಪ್ರತಿ ದಿನಾ ನವೀನ, ಮದ್ಯಪಾನ ಮಾಡಲು ಅದೇ ಬಾರ್‌ಗೆ ಬರೋದನ್ನು ಖಚಿತಪಡಿಸಿಕೊಂಡಿದ್ದಾರೆ. ನವೀನ ಕುಡಿದು ಇನ್ನೇನು ಬಾರ್‌ ಇಳಿದು ಮನೆ ಕಡೆಗೆ ಹೋಗಲು ಹೋರ ಬಂದಿದ್ದಾನಷ್ಟೇ. ಆಟೋದಲ್ಲಿ ಕಿಡ್ನ್ಯಾಪ್ ಸಂಚು ರೂಪಿಸಿ  ಬಂದಿದ್ದ ಮೂವರ ರೌಡಿಗಳ ಗ್ಯಾಂಗ್, ಅಟ್ಯಾಕ್ ಮಾಡಿದೆ.


ಇದನ್ನೂ ಓದಿ: Vokkaliga Community: ಒಕ್ಕಲಿಗರಿಗೂ ಬೇಕು ಮೀಸಲಾತಿ; ಹೋರಾಟದ ಸುಳಿವು ಕೊಟ್ರು ನಿರ್ಮಲಾನಂದನಾಥ ಸ್ವಾಮೀಜಿ!


ಸಿಮೆಂಟ್ ಇಟ್ಟಿಗೆಯಿಂದ  ಮಾರಾಣಾಂತಿಕ ಹಲ್ಲೆ


ನವೀನ ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಓರ್ವ ರೌಡಿ ನವೀನ ಮೇಲೆ ಹಿಂದಿನಿಂದ ಬಂದು ಫುಟ್‌ಪಾತ್‌ ಮೇಲಿದ್ದ ಸಿಮೆಂಟ್ ಇಟ್ಟಿಗೆ ತಗೆದುಕೊಂಡು ತಲೆ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೆ ತುತ್ತಾದ ನವೀನ್ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದು, ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟುವಂತೆ ಮಾಡಿದೆ. ಕುಟುಂಬದ ಆದಾರ ಸ್ತಂಬವೇ ಕಳಚಿದಂತಾಗಿದೆ ಎಂದು ಮೃತ ನವೀನ್ ತಾಯಿ ಗಿರಿಜಾ ಕಣ್ಣೀರು ಹಾಕಿದ್ದಾರೆ.


ಪೊಲೀಸರಿಂದ ರೌಡಿಗಳ ಬಂಧನ


ರಾತ್ರೋರಾತ್ರಿ ನವೀನನ ಮುಗಿಸಲು ಬಂದಿದ್ದ ರೌಡಿಗಳನ್ನೇನು ಪೋಲಿಸರು ವಶಕ್ಕೆ ಪಡಿದಿದ್ದಾರೆ. ಹುಬ್ಬಳ್ಳಿಯ ಇಂದಿರಾ ನಗರದ ಶೇಖರ್, ಆನಂದ್ ಮತ್ತು ಅಭಿಶೇಕ್ ನನ್ನು ಘಂಟಿಕೇರಿ ಪೋಲಿಸರು ಬಂದಿಸಿ, ಡ್ರಿಲ್ಲಿಂಗ್ ಶುರು ಮಾಡಿದ್ದಾರೆ. ಹಳೇ ವೈಷಮ್ಯ ಅಥವಾ ಯುವತಿ ವಿಚಾರ ಇರಬಹುದು ಅಂತ ಶಂಕಿಸಲಾಗಿದೆ.


ಇದನ್ನೂ  ಓದಿ: Firecrackers: ರಾಜ್ಯದಲ್ಲಿ ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅವಕಾಶ! ಮಾಲಿನ್ಯ ನಿಯಂತ್ರಣಕ್ಕೆ ಕ್ರಮ


ಇದೆಲ್ಲಾ ಏನೇ ಇರಲಿ, ಮೊನ್ನೆಯಷ್ಟೇ ಆಪ್ಟಿಕಲ್ ಶಾಪ್ ತೆರೆದು, ಮದುವೆ ಮಾಡಿಕೊಂಡು ಲೈಫ್‌ನಲ್ಲಿ ಇನ್ನೇನು ಸೆಟಲ್ ಆಗಿಬಿಡ್ಬೇಕು ಅನ್ನೋವಷ್ಟರಲ್ಲಿ ಈ ಘೋರ ದುರಂತ ನಡೆದು ಹೋಗಿದೆ.
ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿರುವ ಅಪರಾಧಗಳನ್ನು ಹತ್ತಿಕ್ಕಲು ಪೋಲಿಸರು ಮತ್ತಷ್ಟು ಕಠಿಣ ನಿಲುವು  ಕೈಗೊಂಡಿದ್ದಾರೆ. ಜನಸಾಮಾನ್ಯರು ನೀರ್ಭಿತಿಯಿಂದ ಸಂಚಾರ ಮಾಡೋದೇ ಕಷ್ಟವಾಗುತ್ತದೆ.

Published by:ಪಾವನ ಎಚ್ ಎಸ್
First published: