ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ (Shivamogga DC Office Building) ಮುಂದೆ ನಿಂತು ಯುವಕನೋರ್ವ ಅಜಾನ್ (Azan) ಕೂಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗ್ತಿದೆ. ಯುವಕ ಅಜಾನ್ ಕೂಗುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ (Viral Video) ಸೋಶಿಯಲ್ ಮೀಡಿಯಾದದಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಹೇಳಿಕೆ ಖಂಡಿಸಿ ಮುಸ್ಲಿಂ ಸಮುದಾಯದ (Muslim Community) ಗುಂಪು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಯುವಕ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮುಂದೆ ಅಜಾನ್ ಕೂಗಿದ್ದಾನೆ. ಅಜಾನ್ ಕೂಗುವುದಕ್ಕೆ ಪೊಲೀಸರು ಅಡ್ಡಿಪಡಿಸಿದ್ದಕ್ಕೆ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಭಟನಾನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.
ಅಜಾನ್ ಬಗ್ಗೆ ಮಾತನಾಡಲು ಈಶ್ವರಪ್ಪ ಯಾರು? ಇಂದು ಇಲ್ಲಿ ಕೂಗಿದ್ದೇವೆ, ನಾಳೆ ವಿಧಾನಸೌಧದಲ್ಲಿಯೇ ಕೂಗುತ್ತೇವೆ. ಇದು ತಾಯಿಯ ಬಗ್ಗೆ ಆಡಿದ ಮಾತುಗಳಲ್ಲ. ಈಶ್ವರಪ್ಪ ಅಲ್ಲಾಹನ ಬಗ್ಗೆ ಮಾತನಾಡಿದ್ದು ಎಂದು ಯುವಕನೋರ್ವ ಕಿಡಿಕಾರಿದ್ದಾನೆ.
ಇನ್ನು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ಯುವಕನನ್ನು ಕೆಳಗಿಳಿಸಿ ತಿಳಿಹೇಳಿ ಕಳುಹಿಸಿದ್ದಾರೆ. ಪೊಲೀಸರು ಸಹ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ
ಅಜಾನ್ ಕೂಗಿರುವ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ತಾಲೂಕಿನ ಮಾಚಹಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ್ಯ ಸೂಕ್ಷ್ಮವಾದ ವಿಚಾರವಾಗಿದೆ. ರಾಜ್ಯದಲ್ಲಿ ಈ ರೀತಿಯ ವಿಚಾರಗಳು ಪ್ರಾರಂಭ ಆಗುವುದಕ್ಕೆ ಬಿಜೆಪಿಯವರು ಕಾರಣರಿದ್ದಾರೆ ಎಂದು ಆರೋಪಿಸಿದರು.
ಜೊತೆಗೆ ಇನ್ನೊಂದು ಧರ್ಮದ ಕೆಲ ಕಿಡಿಗೇಡಿಗಳ ಪಾತ್ರವಿದೆ. ಈಶ್ವರಪ್ಪನ ಹೇಳಿಕೆ ಇರಲಿ ಅಥವಾ ಇಲ್ಲಾ ಬಿಜೆಪಿಯವನ ಇನ್ಯಾವನ ಹೇಳಿಕೆಯೇ ಇರಲಿ. ಇವತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಈ ದೇಶ ಈ ರೀತಿಯಾದ ಪ್ರಕರಣದಲ್ಲಿ ಚಿತಾವಣೆ ಮಾಡುವವರೂ ಯಾರೇ ಇರ್ಲಿ ಅಂತವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.
ಈಶ್ವರಪ್ಪ ಹೇಳಿದ್ದೇನು?
ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಕಾವೂರಿನ ಶಾಂತಿನಗರದಲ್ಲಿ ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (Vijaya sankalpa Yatre) ನಡೆಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಮಾತನಾಡುತ್ತಿದ್ದರು. ಆದರೆ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಅಜಾನ್ (Azaan) ಕೇಳಿ ಬಂದಿತ್ತು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ ಅವರು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಸುಪ್ರೀಂ ಕೋರ್ಟ್ (Supreme Court) ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದರು.
ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಹೇಳುತ್ತಾರೆ. ಆದರೆ ಮೈಕ್ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನಗಳಲ್ಲೂ (Temple) ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ.
ಇದನ್ನೂ ಓದಿ: Azaan Dance: ಅಜಾನ್ಗೆ ನೃತ್ಯ, ಇವರಿಗೆ ಬೇರೆ ಹಾಡು ಸಿಗಲಿಲ್ಲವಾ? ಪ್ರಮೋದ್ ಮುತಾಲಿಕ್ ಆಕ್ರೋಶ
ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು (Religion) ಉಳಿಸುವಂಥಹ ದೇಶ ಭಾರತ (India) ಮಾತ್ರ. ಆದರೆ ಮೈಕ್ ಹಿಡಿದುಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ