Arundhati Movie: ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ! ಈ ಯುವಕ ಹೇಳಿದ್ದು ಕೇಳಿದ್ರೆ ಎದೆ ನಡುಗುತ್ತೆ

ಕೆಲವರು ಸಿನಿಮಾ ನೋಡಿ ಅದರ ಪ್ರಭಾವಕ್ಕೆ ಒಳಗಾಗುತ್ತಾರೆ. ಆ ಸ್ಟಾರ್, ಈ ಸ್ಟಾರ್ ಅಂತ ತಾನೂ ಆ ನಟನನ್ನೇ ಅನುಕರಿಸುತ್ತಾರೆ. ಸಿನಿಮಾ ಬೇರೆ, ಜೀವನವೇ ಬೇರೆ ಎಂದು ತಿಳಿಯದ ಅಂಧಾಭಿಮಾನಿಗಳು ಸಿನಿಮಾ ನಟ, ನಟಿಯರನ್ನು ಅನುಕರಿಸಲು ಹೋಗಿ ಯಡವಟ್ಟು ಮಾಡಿಕೊಳ್ತಾರೆ. ಇದಕ್ಕೊಂದು ಉದಾಹರಣೆ ಎನ್ನುವಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಂಡವಾಡಿ ಗ್ರಾಮದಲ್ಲಿ ಘಟನೆಯೊಂದು ನಡೆದಿದೆ.

ಜನಪ್ರಿಯ 'ಅರುಂಧತಿ' ಸಿನಿಮಾದ ದೃಶ್ಯ

ಜನಪ್ರಿಯ 'ಅರುಂಧತಿ' ಸಿನಿಮಾದ ದೃಶ್ಯ

  • Share this:
ಮಧುಗಿರಿ, ತುಮಕೂರು: ಸಿನಿಮಾ (Cinema) ಎನ್ನುವುದು ಮನರಂಜನೆ (Entertainment) ನೀಡುವ ಮಾಧ್ಯಮ. ಎರಡೂವೆರೆಯಿಂದ 3 ಗಂಟೆಗಳ ಕಾಲ ಸಿನಿಮಾ ನೋಡುವ ವ್ಯಕ್ತಿ ತನ್ನ ವೈಯಕ್ತಿಕ ಕಷ್ಟ ಕೋಟಲೆ ಮರೆಯಲಿ, ನೋಡುವಷ್ಟು ಕಾಲ ಮನರಂಜನೆ ಪಡೆಯಲಿ ಎನ್ನುವುದು ಸಿನಿಮಾದ ಉದ್ದೇಶ. ಆದರೆ ಕೆಲವರು ಸಿನಿಮಾ ನೋಡಿ ಅದರ ಪ್ರಭಾವಕ್ಕೆ ಒಳಗಾಗುತ್ತಾರೆ. ಆ ಸ್ಟಾರ್ (Star), ಈ ಸ್ಟಾರ್ ಅಂತ ತಾನೂ ಆ ನಟನನ್ನೇ (Actor) ಅನುಕರಿಸುತ್ತಾರೆ. ಸಿನಿಮಾ ಬೇರೆ, ಜೀವನವೇ (Life) ಬೇರೆ ಎಂದು ತಿಳಿಯದ ಅಂಧಾಭಿಮಾನಿಗಳು ಸಿನಿಮಾ ನಟ (Hero), ನಟಿಯರನ್ನು (Heroin) ಅನುಕರಿಸಲು ಹೋಗಿ ಯಡವಟ್ಟು ಮಾಡಿಕೊಳ್ತಾರೆ. ಇದಕ್ಕೊಂದು ಉದಾಹರಣೆ ಎನ್ನುವಂತೆ ತುಮಕೂರು (Tumkur) ಜಿಲ್ಲೆಯ ಮಧುಗಿರಿ (Madhugiri) ತಾಲೂಕಿನ ಕೊಂಡವಾಡಿ ಗ್ರಾಮದಲ್ಲಿ ಘಟನೆಯೊಂದು ನಡೆದಿದೆ. ಸಿನಿಮಾ ಒಂದರ ಪ್ರಭಾವಕ್ಕೆ ಒಳಗಾದ 22 ವರ್ಷದ ಯುವಕನೊಬ್ಬ ಮೈಗೆ ಪೆಟ್ರೋಲ್ (Petrol) ಸುರಿದುಕೊಂಡು, ಬೆಂಕಿ (Fire) ಹಚ್ಚಿಕೊಂಡಿದ್ದಾನೆ. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಂಡವಾಡ ಗ್ರಾಮದಲ್ಲಿ ಯುವಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗ್ರಾಮದ 22 ವರ್ಷದ ರೇಣುಕ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಮೈಗೆ ಬೆಂಕಿ ಹಚ್ಚಿಕೊಂಡು, ಉರಿ ತಾಳಲಾರದೇ ಒದ್ದಾಟ

ಮೊದಲಿಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡ ರೇಣುಕಾ, ನಂತರ ಬೆಂಕಿ ಹಚ್ಚಿಕೊಂಡಿದ್ದಾನೆ. ಮೈಯೆಲ್ಲಾ ಬೆಂಕಿ ಹೊತ್ತು ಉರಿಯುತ್ತಿದ್ದಂತೆ ಕಿರುಚಲು ಪ್ರಾರಂಭಿಸಿದ್ದಾನೆ. ನೋವಿಂದ ಒದ್ದಾಡುತ್ತಾ ರಸ್ತೆ ಮೇಲೆಲ್ಲ ಉರುಳಾಡಿದ್ದಾನೆ.

ಇದನ್ನೂ ಓದಿ: Bengaluru: ಪತ್ನಿ ತಲೆ ಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ, ಇವನೆಂಥಾ ಗಂಡ?

ಅರುಂಧತಿ ಸಿನಿಮಾದ ಪ್ರಭಾವದಿಂದ ಯಡವಟ್ಟು

ಹೌದು, ಯುವಕ ರೇಣುಕಾ ಸಿನಿಮಾಕ್ಕೆ ಅಡಿಕ್ಟ್ ಆಗಿದ್ದ ಎನ್ನಲಾಗಿದೆ. ಅದರಲ್ಲೂ 2009ರಲ್ಲಿ ತೆರೆಕಂಡು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ, ಅನುಷ್ಕಾ ಶೆಟ್ಟಿ ಹಾಗೂ ಸೋನು ಸೂದ್ ಅಭಿನಯದ ಸೂಪರ್ ಹಿಟ್ ಅರುಂಧತಿ ಸಿನಿಮಾವನ್ನು ಜಾಸ್ತಿ ಇಷ್ಟಪಟ್ಟು ನೋಡುತ್ತಿದ್ದ ಎನ್ನಲಾಗಿದೆ.

ಸತ್ತು ಮುಕ್ತಿ ಪಡೆಯುತ್ತೇನೆ ಅಂತ ಹೇಳುತ್ತಿದ್ದ ರೇಣುಕಾ

ಅರುಂಧತಿ ಸಿನಿಮಾದಲ್ಲಿ ನಾಯಕಿ ಸತ್ತು, ಆಕೆ ಮೂಳೆಯಿಂದ ಮಾಡಿದ ಆಯುಧದಿಂದ ವಿಲನ್‌ನನ್ನು ಕೊಲ್ಲುವ ದೃಶ್ಯವಿದೆ. ಇದರಿಂದ ಆತ ಪ್ರಭಾವಿತನಾಗಿದ್ದ ಅಂತ ಹೇಳಲಾಗುತ್ತಿದೆ. ಅಲ್ಲಿನ ನಾಯಕಿಯಂತೆ ಸತ್ತು ಮುಕ್ತಿ ಪಡೆಯುತ್ತೇನೆ ಅಂತ ಹೇಳುತ್ತಿದ್ದ.

ಮಗನ ಬಳಿ ಕುಳಿತು ಕಣ್ಣೀರಿಟ್ಟ ತಂದೆ

ಮಗ ರಸ್ತೆಯಲ್ಲಿ ಬೆಂಕಿ ಹಚ್ಚಿಕೊಂಡು, ಬಿದ್ದು ನರಳಾಡುತ್ತಿದ್ದರೆ ತಂದೆ ಆತನ ಬಳಿ ಕುಳಿತು, ಅಸಹಾಯಕರಾಗಿ ಕಣ್ಣೀರಿಟ್ಟಿದ್ದಾರೆ. ಅರುಂಧತಿ ಸಿನೆಮಾವನ್ನ ನೋಡಬೇಡ ಎಂದು ಎಷ್ಟೇ ಬಾರಿ ಹೇಳಿದ್ರೂ ಪದೇ ಪದೇ ನೋಡುತ್ತಿದ್ದ ಅಂತ ತಂದೆ ಕಣ್ಣೀರಿಟ್ಟಿದ್ದಾರೆ.  ಇನ್ನು ಸುಟ್ಟ ಗಾಯಗಳಿಂದ ನರಳುತ್ತಿದ್ದರೂ ಯುವಕ ರೇಣುಕಾ, ನನಗೆ ಮುಕ್ತಿ ಕೊಡಿಸಪ್ಪ ಎಂದು ತಂದೆಯನ್ನು ಬೇಡಿಕೊಂಡಿದ್ದಾನೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯುವಕ ಸಾವು

ಇನ್ನು ಯುವಕ ರೇಣುಕಾ ಬೆಂಕಿ ಹಚ್ಚಿಕೊಂಡು ಒದ್ದಾಡುತ್ತಿದ್ದಂತೆ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಆತನ ಮೈಮೇಲಿನ ಬೆಂಕಿ ಆರಿಸಿ, ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Ramanagara: ಅತ್ತೆ ಜೊತೆ ಅಳಿಯನ ಕಾಮ ಪುರಾಣ; ಆಂಟಿ ಕೊಲೆಯಲ್ಲಿ ಅಂತ್ಯ, ಯುವಕ ಜೈಲುಪಾಲು

ಕಣ್ಣೀರಿಡುತ್ತಿರುವ ಕುಟುಂಬಸ್ಥರು

ಇನ್ನು ಯುವಕ ರೇಣುಕಾ ಆತ್ಮಹತ್ಯೆ ವಿಚಾರ ತಿಳಿದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ತಂದೆ ಸೇರಿದಂತೆ ಮನೆ ಸದಸ್ಯರು ದಿಕ್ಕೇ ತೋಚದಂತೆ ಆಗಿದ್ದಾರೆ. ಇನ್ನು ಘಟನೆ ಬಗ್ಗೆ ತಿಳಿದು ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಹಾಗೂ ಗ್ರಾಮಸ್ಥರೆಲ್ಲ ಶಾಕ್‌ಗೆ ಒಳಗಾಗಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Published by:Annappa Achari
First published: