ಉತ್ತರ ಕನ್ನಡ: ವರ್ಕ್ ಫ್ರಂ ಹೋಂ (Work Form Home) ಅಂತ ಊರಿಗೆ ಬಂದಿದ್ದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಚಂದಾವರ ಗ್ರಾಮದ (Chandavara village) ಯುವಕನೋರ್ವ ಮಾಡಬಾರದ್ದು ಮಾಡಿ ಇದೀಗ ಹರಿಯಾಣ ಪೊಲೀಸರ (Haryana police) ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಚಂದಾವರ ಗ್ರಾಮದ ಇಮಾದ್ ಮುಲ್ಲಾ ಎಂಬಾತನೇ ಹರಿಯಾಣ ಪೊಲೀಸರಿಂದ ಬಂಧನಕ್ಕೆ ಒಳಗಾದ ಯುವಕ. ಈತ ಬೆಂಗಳೂರಿನ (Bengaluru) ಖಾಸಗಿ ಕಂಪನಿಯಲ್ಲಿ (Private Company) ಕೆಲಸ ಮಾಡುತ್ತಿದ್ದು, ವರ್ಕ್ ಫ್ರಂ ಹೋಂ ಅಂತ ಊರಿಗೆ ಬಂದಿದ್ದ. ಆದರೆ ಇಲ್ಲಿ ಕುಳಿತೇ ಹರಿಯಾಣ ಮೂಲದ ಮಹಿಳೆಯ ಮೊಬೈಲ್ ಹ್ಯಾಕ್ (Mobile Hack) ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಮೊಬೈಲ್ನಲ್ಲಿದ್ದ ನಗ್ನ ಚಿತ್ರ ಸೇವ್ ಮಾಡಿಕೊಂಡು ಕಿರುಕುಳ ಕೊಡುತ್ತಾ, ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾನೆ. ಆಕೆ ನೀಡಿದ ದೂರಿನ ಮೇಲೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮಕ್ಕೆ ಬಂದ ಹರಿಯಾಣ ಪೊಲೀಸರು, ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡದ ಯುವಕನಿಂದ ಹರಿಯಾಣ ಮಹಿಳೆಗೆ ಕಿರುಕುಳ
ಹರಿಯಾಣದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಚಂದಾವರ ನಿವಾಸಿ ಇಮಾದ್ ಮುಲ್ಲಾ ಅಂತ ಗುರುತಿಸಲಾಗಿದೆ. ಈತ ಹರಿಯಾಣ ಮೂಲದ ಮಹಿಳೆಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಹರಿಯಾಣ ಮಹಿಳೆ ಮೊಬೈಲ್ ಹ್ಯಾಕ್ ಮಾಡಿ ಕಿರುಕುಳ
ಆರೋಪಿ ಇಮಾದ್ ಮುಲ್ಲಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆದರೆ ವರ್ಕ್ ಫ್ರಮ್ ಹೋಂ ಇರೋದ್ರಿಂದ ಚಂದಾವರ ಗ್ರಾಮದಲ್ಲೇ ಉಳಿದುಕೊಂಡು ಕೆಲಸ ಮಾಡುತ್ತಿದ್ದ. ಈತ ಹರಿಯಾಣ ಮೂಲದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿದ್ದ. ಬಳಿಕ ಆಕೆ ಮೊಬೈಲ್ನಲ್ಲಿದ್ದ ಫೋಟೋ ಎಡಿಟ್ ಮಾಡಿ, ಅಶ್ಲೀಲವಾಗುವಂತೆ ಮಾಡಿದ್ದ. ಬಳಿಕ ಆಕೆಯ ನಂಬರ್ಗೆ ಈ ಫೋಟೋ ಕಳುಹಿಸುತ್ತಿದ್ದ.
ಇದನ್ನೂ ಓದಿ: Mixer Blast Case: ಮಿಕ್ಸಿ ಬ್ಲಾಸ್ಟ್ ಹಿಂದೆ ಇರೋರು ಯಾರು? ಮಹಿಳೆ ಸೇರಿ ಇಬ್ಬರ ವಿಚಾರಣೆ
ಹ್ಯಾಕ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದ ಆರೋಪಿ
ಆರೋಪಿ ಇಮಾದ್ ಮುಲ್ಲಾ ಆನ್ಲೈನ್ಮೂಲಕ ಎಲ್ಲವನ್ನು ಹ್ಯಾಕ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದ. ಯಾರದೇ ಮೊಬೈಲ್ ನಂಬರ್ ಸಿಕ್ಕಿದರೂ ಅವರ ಮಾಹಿತಿ ಕಳ್ಳತನ ಮಾಡುತ್ತಿದ್ದ. ಮಹಿಳೆಯರ, ಯುವತಿಯರ ಪೊಟೋ ಸಿಕ್ಕರೆ ಅವರ ಮುಖವನ್ನ ಬೆತ್ತಲೆ ದೇಹಕ್ಕೆ ಜೋಡಿಸಿ, ಬೆದರಿಸಿ, ಹಣ ಮಾಡುತ್ತಿದ್ದ ಎನ್ನಲಾಗಿದೆ.
ಹೆದರಿಸಿ ಹಣ ಮಾಡಿ, ಐಶಾರಾಮಿ ಜೀವನ
ಹೀಗೆ ಮೊಬೈಲ್ ಹ್ಯಾಕ್ ಮಾಡಿ, ಅವರನ್ನು ಬೆದರಿಸಿ ಹಣ ಪಿಕುತ್ತಿದ್ದ. ಇದೇ ರೀತಿ ಈತ ಈ ಕೆಲಸದ ಮೂಲಕ ಗಂಟೆಗೆ 50 ಸಾವಿರ ರೂಪಾಯಿ ಗಳಿಸುತ್ತಿದ್ದ. ಈತ 28 ಲಕ್ಷದ ಬಿ ಎಂ ಡಬ್ಲ್ಯೂ ಕಾರು ಖರೀದಿಸಿದ್ದ. ದುಬಾರಿ ಬೈಕ್ ಖರೀದಿಸಿ, ಶೋಕಿ ಜೀವನ ಮಾಡುತ್ತಿದ್ದ.
ಇದನ್ನೂ ಓದಿ: Narendra Modi's Brother: ನರೇಂದ್ರ ಮೋದಿ ಸಹೋದರನ ಕಾರು ಅಪಘಾತ; ಪ್ರಹ್ಲಾದ ಮೋದಿ, ಪುತ್ರ, ಸೊಸೆಗೆ ಗಾಯ
ಹರಿಯಾಣ ಮೂಲದ ಮಹಿಳೆಗೆ ಕಿರುಕುಳ
ಇದೇ ರೀತಿ ಹರಿಯಾಣದ ಶ್ರೀಮಂತ ಮಹಿಳೆಯೋರ್ವಳ ಮೊಬೈಲ್ ಹ್ಯಾಕ್ ಮಾಡಿದ್ದ. ಅವರ ಫೋಟೋವನ್ನು ನಗ್ನ ಚಿತ್ರದ ಜೊತೆ ಎಡಿಟ್ ಮಾಡಿ, ಅವರ ಕಾಲ್ ಹಿಸ್ಟರಿಯಲ್ಲಿರುವ ಎಲ್ಲರಿಗೂ ಈತನೇ ಕಳುಹಿಸುತ್ತಿದ್ದ. ಈ ಬಗ್ಗೆ ಸಂತ್ರಸ್ತೆ ಹರಿಯಾಣದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಇದರ ಆಧಾರದ ಮೇಲೆ ಹೊನ್ನಾವರ ಸಿಪಿಐ ಶ್ರೀಧರ ಅವರ ಸಹಾಯದಿಂದ ಹರಿಯಾಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ