ಗದಗ: ಬಡ್ಡಿ, ಹಣಕಾಸು ವ್ಯವಹಾರಕ್ಕೆ (Financial Business) ಸಂಬಂಧಿಸಿದಂತೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ (Hospital) ಸೇರಿದ್ದ ಯುವಕ ಚಿಕಿತ್ಸೆ (Traetment) ಫಲಿಸದೆ ಮೃತ (Death) ಪಟ್ಟಿದ್ದಾನೆ. ಗದಗ (Gadag) ಜಿಮ್ಸ್ ಆಸ್ಪತ್ರೆಯಲ್ಲಿ (GIMS Hospital) ಚಿಕಿತ್ಸೆ ಪಡೀತಿದ್ದ 26 ವರ್ಷದ ಮೃತ್ಯುಂಜಯ್ ಬರಮಗೌಡರ್ ಎಂಬಾತನೇ ಮೃತ ಯುವಕ. ಮಾರ್ಚ್ 26 ನೇ ತಾರೀಕು ನಿತ್ರಾಣ ಸ್ಥಿತಿಯಲ್ಲಿದ್ದ ಮೃತ್ಯುಂಜಯನನ್ನ ಸಂಬಂಧಿಕರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. 28 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಮೃತ್ಯುಂಜಯ ಮೃತಪಟ್ಟಿದ್ದಾನೆ. ಸ್ನೇಹಿತರಿಂದಲೇ ಬಡ್ಡಿ ವ್ಯವಹಾರದ ಕಿರುಕುಳಕ್ಕೆ ಒಳಗಾಗಿದ್ದ ಯುವಕ, ಕೊನೆಗೂ ಅದೇ ಸ್ನೇಹಿತರ ಚಿತ್ರಹಿಂಸೆಯಿಂದಾಗಿ ಪ್ರಾಣ ಬಿಟ್ಟಿದ್ದಾನೆ.
ಕೋವಿಡ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಯುವಕ
ಗದಗ ನಗರದ ಕೆ ಸಿ ರಾಣಿ ರಸ್ತೆಯ ಸಂಜೀವಿನಿ ಆಸ್ಪತ್ರೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೃತ್ಯುಂಜಯ, ಫೋಟೋಗ್ರಾಫರ್ ಆಗಿದ್ದ. ಸಹೋದರ ಸಂತೋಷ ಜೊತೆ ಸೇರ್ಕೊಂಡು ಪುಟ್ಟದೊಂದು ಲ್ಯಾಬ್ ಇಡ್ಕೊಂಡು ಜೀವನ ನಡೆಸ್ತಿದ್ದ.ಆರಂಭದಲ್ಲಿ ಫೋಟಗ್ರಫಿ ಕೈ ಹಿಡಿದಿತ್ತು.ದುಡುಮೆ, ದುಡ್ಡು ಎರಡೂ ಸರಿಯಾಗೇ ನಡೆದಿತ್ತು. ಆದ್ರೆ ಎರಡ್ಮೂರು ವರ್ಷದಿಂದ ಲಾಕ್ ಡೌನ್ ನಿಂದಾಗಿ ಫೋಟೋಗ್ರಫಿ ಕೆಲಸ ಸಿಕ್ಕಲಿಲ್ಲ.. ಕ್ರಮೇಣ ಲ್ಯಾಬ್ ಬಂದ್ ಮಾಡುವ ಪರಿಸ್ಥಿತಿ ಎದುರಾಯ್ತು.. ಆರ್ಥಿಕ ಸಂಕಷ್ಟದಿಂದ ಮೃತ್ಯುಂಜಯ ಕುಗ್ಗಿ ಹೋಗಿದ್ದ..
ಸ್ನೇಹಿತನ ಬಳಿ ಶೇ. 10ರ ಬಡ್ಡಿಗೆ 2 ಲಕ್ಷ ಸಾಲ
ಜೀವನ ನಿರ್ವಹಣೆ ಕಷ್ಟವಾಗಿದ್ರಿಂದ ಸಾಲ ಪಡೆಯೋದಕ್ಕೆ ಮುಂದಾಗಿದ್ದ
ಮೃತ್ಯುಂಜಯ ಬರಮಗೌಡರ್ ಸ್ನೇಹಿತ ಉಮೇಶ್ ಸುಂಕದ್ ಬಳಿ 2 ಲಕ್ಷ ಸಾಲ ಇಸ್ಕೊಂಡಿದ್ದ.. ವಾರಕ್ಕೆ ಶೇಕಡ 10 ಬಡ್ಡಿ ದರದ ಲೆಕ್ಕದಲ್ಲಿ ಸಾಲ ಮಾಡಿದ್ದ ಅಂತಾ ಕುಟುಂಬ ತಿಳಿಸಿದೆ.. ಒಂದು ಲಕ್ಷ ರೂಪಾಯಿ ಹಿಂತಿರುಗಿಸಿದ್ದ ಮೃತ್ಯುಂಜಯ ಉಳಿದ 1 ಲಕ್ಷ ರೂಪಾಯಿ ಹಣ ಕೊಡೋದಾಗಿ ಹೇಳಿದ್ದ.. ಆದ್ರೆ, 1 ಲಕ್ಷ ರೂಪಾಯಿ ಬಡ್ಡಿಗೆ ಸರಿ ಹೋಯ್ತು.. ಉಳಿದ 2 ಲಕ್ಷ ಹಣ ಕೊಡುವಂತೆ ದುಂಬಾಲು ಬಿದ್ದಿದ್ದ.
ಇದನ್ನೂ ಓದಿ: Tumkur: ಒಂದೇ ರಾತ್ರಿಯಲ್ಲಿ ಬಿದ್ದಿತ್ತು ಎರಡು ಹೆಣ! ಬಟ್ಟೆ ಬಿಚ್ಚಿಸಿ, ಥಳಿಸಿ ಸ್ನೇಹಿತರನ್ನು ಕೊಂದವರು ಯಾರು?
2 ದಿನ ಮೃತ್ಯುಂಜಯಗೆ ಚಿತ್ರಹಿಂಸೆ ಕೊಟ್ಟಿದ್ದ ಸ್ನೇಹಿತ
ಹಣ ವಾಪಾಸ್ ಕೊಡದ ಹಿನ್ನೆಲೆ ಮಾರ್ಚ್ 24 ನೇ ತಾರೀಕು ಮನೆ ಬಳಿ ಬಂದಿದ್ದ ಉಮೇಶ್, ಮೃತ್ಯುಂಜಯನನ್ನ ಕರೆದುಕೊಂಡು ಹೋಗಿದ್ದ.. ಬೆಟಗೇರಿಯ ಉಮೇಶ್ ಮನೆಯಲ್ಲೇ ಇಟ್ಕೊಂಡು ಬರೋಬ್ಬರು ಎರಡು ದಿನ ಚಿತ್ರ ಹಿಂಸೆ ನೀಡಿದ್ರಂತೆ.. ಅಲ್ದೆ, ನರಸಾಪುರ ರಸ್ತೆ ಜಮೀನಿಗೆ ಹರೆದುಕೊಂಡು ಹೋಗಿ ರಾತ್ರಿ ಮನಬಂದಂತೆ ಹೊಡೆದಿದ್ರಂತೆ..
ಮರ್ಮಾಂಗಕ್ಕೆ ಹೊಡೆದು ವಿಕೃತಿ ಮೆರೆದಿದ್ದ ಪಾಪಿಗಳು
ಕುತ್ತಿಗೆ, ಎದೆ, ಮರ್ಮಾಂಗ ಗುರಿಯಾಗಿಸಿಕೊಂಡು ಹೊಡೆದು ವಿಕೃತಿ ಮೆರೆದಿದ್ದಾರೆ.. ಕುಡಿದ ಅಮಲಿನಲ್ಲಿ ಉಮೇಶ್ ಆ್ಯಂಡ್ ಟೀಮ್ ಮೃತ್ಯುಂಜಯನ ಮೇಲೆ ಮನಬಂದಂತೆ ಹಲ್ಲೆ ಮಾಡಿತ್ತು. ಉಮೇಶ್ ಸಹೋದರ ಉದಯ್, ಸ್ನೇಹಿತ ವಿಕ್ರಮ ಮೂವರು ಮೃತ್ಯುಂಜಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ರು.. ಮೃತ್ಯುಂಜಯ ಅದೇಗೋ ಅಲ್ಲಿಂದ ಬಿಡಿಸಿಕೊಂಡು ಬಂದಿದ್ದ.. ನಂತ್ರದಲ್ಲಿ ಪ್ರಕರಣ ಬೆಳಕಿಗೆ ಬಂದು ಆರೋಪಿ ಉಮೇಶ್, ಉದಯ್, ವಿಕ್ರಮ್ ನನ್ನ ಬಂಧಿಸಲಾಗಿತ್ತು.
28 ದಿನಗಳ ಕಾಲ ಜೀವನ್ಮರಣದ ಹೋರಾಟ
ಬರೋಬ್ವರಿ 28 ದಿನಗಳ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಮೃತ್ಯುಂಜಯ ಮೃತಪಟ್ಟಿದ್ದಾನೆ.. ನಗರದಲ್ಲಿದ್ದ ಏಕೈಕ ಮನೆಯನ್ನ ಮೃತ್ಯುಂಜಯ ಕುಟುಂಬ ಮಾರಿಕೊಂಡಿದೆ.. ಮೃತ್ಯುಂಜಯ ಹಾಗೂ ಸಹೋದರ ಸಂತೋಷನನ್ನ ಮದ್ವೆ ಮಾಡ್ಬೇಕು ಅನ್ಕೊಂಡಿದ್ದ ತಾಯಿಗೆ ಬರಸಿಡಿಲ ಆಘಾತ ನೀಡಿದಂತಾಗಿದೆ.
ಇದನ್ನೂ ಓದಿ: Belagavi: 250 ರೂ ಹಣ ವಾಪಸ್ ಕೊಡದಿದ್ದಕ್ಕೆ ಯುವಕನ ಹತ್ಯೆ; ಸ್ನೇಹಿತನ ಬಂಧನ
ಮೃತ್ಯುಂಜಯ ನರಳು ಸತ್ತಿದಾನೆ ಅಪರಾಧಿಗಳಿಗೆ ಗಲ್ಲು ಸಿಕ್ಷೆಯಾಗ್ಬೇಕು ಅಂತಾ ಮೃತ್ಯುಂಜಯ ಕುಟುಂಬ ಆಗ್ರಹಿಸ್ತಿದೆ ಕುಟುಂಬದ ಆಧಾರವಾಗಿದ್ದ ಮೃತ್ಯುಂಜಯನ ಸಾವು ತಾಯಿ, ಸಹೋದರನಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಆರೋಪಿಗಳಿಗೆ ಜಾಮೀನು ಸಿಗಕೂಡ್ದು, ಆದಷ್ಟು ಕಠಿಣ ಶಿಕ್ಷೆಯನ್ನ ಆರೋಪಿಗಳಿಗೆ ಕೊಡ್ಬೇಕು. ಆರ್ಥಿಕ ಸಂಕಷ್ಟಕ್ಕೆ ಸಿಕುಕಿರುವ ಕುಟುಂಬಕ್ಕೆ ಪರಿಹಾರ ನೀಡ್ಬೇಕು ಅಂತಾ ಮೃತ್ಯುಂಜಯನ ಸ್ನೇಹಿತರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ