ಬೆಂಗಳೂರು: ಮೊಬೈಲ್ ಎಲ್ಲರ ಕೈಗೆ ಬಂದ ಮೇಲೆ ಸೆಲ್ಪಿ ಎಂಬ ಗೀಳು (Selfie Craze) ಪ್ರತಿಯೊಬ್ಬರನ್ನು ಆವರಿಸಿದೆ. ಕುಂತಲ್ಲಿ, ನಿಂತಲ್ಲ, ಎಲ್ಲೆಂದರಲ್ಲಿ ಅಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಗೀಳು ಇಂದಿನ ಜನ ಸಮುದಾಯದಲ್ಲಿ ಇದೆ. ಅದರಲ್ಲೂ ಯುವಕ- ಯುವತಿಯರಲ್ಲಿ ಈ ಗೀಳು ಸ್ವಲ್ಪ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಆದರೆ ಸೆಲ್ಫಿ ಹಲವಾರು ಪ್ರಾಣಗಳನ್ನೇ ಕಸಿದುಕೊಂಡಿರುವ (Death Incident) ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿರಾರು ಮಂದಿ ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದರಂತೆ ಇಲ್ಲೊಬ್ಬ ಯುವಕ ರೈಲಿನಲ್ಲಿ ಪ್ರಯಾಣಿಸುವಾಗ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋಗಿ ರೈಲಿನಿಂದ ಕೆಳಗೆ ಬಿದ್ದು, ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಂಡ್ಯ ಮೂಲದ ಅಭಿಷೇಕ್ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟ ನತದೃಷ್ಟ ಯುವಕ. ಬೆಂಗಳೂರಿನ ಗಾಂಧಿನಗರದ ಬಾರ್ & ರೆಸ್ಟೋರೆಂಟ್ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ರೈಲಿನಲ್ಲಿ ಪ್ರಯಾಣಿಸುವಾಗ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಆತನ ಮೃತದೇಹ 5 ದಿನಗಳ ಬಳಿಕ ಶ್ರೀರಂಗಪಟ್ಟಣದ ಬಳಿ ಪತ್ತೆಯಾಗಿದೆ.
ಊರಿಗೆ ಹೋಗಿ ಬರುವುದಾಗಿ ಸ್ನೇಹಿತರ ಜೊತೆ ನವೆಂಬರ್ 6ರಂದು ಮಂಡ್ಯಕ್ಕೆ ಬೆಂಗಳೂರಿನಿಂದ ಹೊರಟಿದ್ದ. ರಾತ್ರಿ 2 ಗಂಟೆಯ ಸಮಯದಲ್ಲಿ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಾಗ ಅಭಿಷೇಕ್ ರೈಲಿನಿಂದ ಕೆಳಗೆ ಬಿದ್ದು, ಲೋಕಪಾವನಿ ನದಿಗೆ ಬಿದ್ದಿದ್ದಾನೆ.
ಸತತ ಮಳೆಯಿಂದಾಗಿ ನದಿಯ ರಭಸ ಹೆಚ್ಚಾಗಿರುವುದರಿಂದ ಅಭಿಷೇಕ್ ಮೃತದೇಹ ಸುಮಾರು 6 ರಿಂದ 7 ಕಿ.ಮೀ ವರೆಗೂ ಕೊಚ್ಚಿ ಹೋಗಿದೆ. ಅಭಿಷೇಕ್ ಮೃತದೇಹಕ್ಕಾಗಿ ಉಪ್ಪಾರಪೇಟೆ, ರೈಲ್ವೆ, ಮಂಡ್ಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಆ ಬಳಿಕ ನ.14 ರಂದು ಶ್ರೀರಂಗಪಟ್ಟಣ ಬಳಿ ಅಭಿಷೇಕ್ ಶವ ಪತ್ತೆ ಪತ್ತೆಯಾಗಿದೆ.
ನ.10 ರಂದು ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ: KRS Dam ನಿಂದ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ; ನದಿ ಪಾತ್ರದ ಜನರ ಎದೆಯಲ್ಲಿ ಡವ ಡವ!
ಸೆಲ್ಫಿ ತೆಗೆದುಕೊಳ್ಳಲು ಹೋದ ಮಹಿಳೆ ನಾಪತ್ತೆ
ಬೆಟ್ಟದ ತುತ್ತತುದಿಯಲ್ಲಿ ನಿಂತು ಫೋಟೋ (Photoshoot) ಕ್ಲಿಕ್ಕಿಸಿಕೊಳ್ಳುತ್ತಿದ್ದ ಮಹಿಳೆ (Woman) ಐದು ಸೆಕೆಂಡ್ ನಲ್ಲಿ ಮಾಯವಾಗಿದ್ದಾರೆ. ಲಕ್ಷಂಬರ್ಗ್ (Luxembourg) ಪ್ರಾಂತ್ಯದ ನದ್ರಿನ್ (Nadrin) ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಝೋ ಸ್ನೊಕ್ಸೆ ನದ್ರಿನ್ ಗೆ ತೆರಳಿದ್ದರು. ಅಲ್ಲಿ ಎತ್ತರವಾದ ಪ್ರದೇಶದಲ್ಲಿ ನಿಂತು ಪತಿಯ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದರು. ಪತಿ ಜೋಯಿರಿ ಜಾನ್ಸೆನ್ ಫೋಟೋ ಕ್ಲಿಕ್ಕಿಸುತ್ತಿರುವಾಗಲೇ ಕ್ಯಾಮೆರಾ ಫ್ಲಾಶ್ ಆಗುವ 5 ಸೆಕೆಂಡ್ ನಲ್ಲಿಯೇ ಮಹಿಳೆ ಮಾಯವಾಗಿದ್ದಾರೆ.
ಝೋ ಸ್ನೊಕ್ಸೆ ಮತ್ತು ಜಾನ್ಸೆನ್ ಪ್ರವಾಸಿ ದಂಪತಿ. ಬಿಡುವಿನ ಸಮಯದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ದಂಪತಿ, ಅಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈ ಬಾರಿಯೂ ಎಂದಿನಂತೆ ದಂಪತಿ ನದ್ರಿನ್ ಪ್ರವಾಸಿ ಸ್ಥಳಕ್ಕೆ ತೆರಳಿದ್ದರು. ಬೆಟ್ಟದ ತುತ್ತತುದಿಯಲ್ಲಿ ಸ್ನೊಕ್ಸೆ ಫೋಟೋಗೆ ಪೋಸ್ ನೀಡುತ್ತಿದ್ದರು. ಮತ್ತೊಂದು ಕಡೆ ಜಾನ್ಸನ್ ಪತ್ನಿಯ ಸುಂದರ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಆದ್ರೆ ನೋಡ ನೋಡುತ್ತಿದ್ದಂತೆ ಮಹಿಳೆ 100 ಅಡಿ ಆಳಕ್ಕೆ ಆಯತಪ್ಪಿ ಬಿದ್ದಿದ್ದಾರೆ. ಪತಿಯ ಕಣ್ಮುಂದೆಯೇ ಈ ಘಟನೆ ನಡೆದಿದೆ.
ಅವಳು ಬೆಟ್ಟದ ತುದಿಯಲ್ಲಿ ನಿಂತಿದ್ದಳು. ನಾನು ಫೋಟೋ ಕ್ಲಿಕ್ ಮಾಡುತ್ತಿದ್ದೆ. ನನ್ನ ಹಿಂದೆ ನಾಯಿ ಬರುತ್ತಿದೆ ಹುಷಾರು ಎಂದು ಹೇಳಿದಳು. ನಾನು ಹಿಂದೆ ತಿರುಗಿ ನಾಯಿ ಓಡಿಸಿ, ತಿರುಗುವಷ್ಟರಲ್ಲಿ ಆಕೆ ಕೆಳಗೆ ಬಿದ್ದಿದ್ದಳು. ಇದೆಲ್ಲ ನಡೆದಿದ್ದು ಕೇವಲ 5 ಸೆಕೆಂಡ್ ನಲ್ಲಿ ಎಂದು ಪತಿ ಜಾನ್ಸನ್ ಕಣ್ಣೀರು ಹಾಕುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ