Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ! ಆಡಿಯೋದಲ್ಲಿ ನೋವು ತೋಡಿಕೊಂಡು ಸೂಸೈಡ್

ಯುವಕ ಮಣಿಕಂಠ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದರಲ್ಲಿ ತನ್ನ ಪ್ರೀತಿಯ ಬಗ್ಗೆ, ಪ್ರೇಮ ವೈಫಲ್ಯದ ಬಗ್ಗೆ ಹೇಳಿ ಕೊಂಡಿದ್ದ ಎನ್ನಲಾಗುತ್ತಿದೆ.

ಆತ್ಮಹತ್ಯೆಗೆ ಶರಣಾದ ಮಣಿಕಂಠ

ಆತ್ಮಹತ್ಯೆಗೆ ಶರಣಾದ ಮಣಿಕಂಠ

  • Share this:
ಬೆಂಗಳೂರು: ಪ್ರೀತಿಸಿದ ಯುವತಿ (Girl) ಕೈಕೊಟ್ಟಳು, ಮೋಸ ಮಾಡಿದಳು ಅಂತ ನೊಂದು ಯುವಕನೋರ್ವ (Boy) ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿವಾಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Madiwala Station Limit) ನಡೆದಿದೆ. ಮಣಿಕಂಠ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾ ಇದ್ದು, ಇತ್ತೀಚಿಗೆ ಆಕೆ ಈತನನ್ನು ತೊರೆದು ಹೋಗಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ನೊಂದಿದ್ದ ಮಣಿಕಂಠ ತನ್ನ ರೂಮ್‌ನಲ್ಲೇ ನೇಣಿಗೆ (Hanging) ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ (Audio) ಮಾಡಿದ್ದು, ಅದರಲ್ಲಿ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.

ಮನೆಯ ಕೋಣೆಯಲ್ಲೇ ನೇಣಿಗೆ ಏರಿದ ಯುವಕ

ಮಡಿವಾಳದ ಮಾರುತಿನಗರ ನಿವಾಸಿ ಮಣಿಕಂಠ ಎಂಬ ಯುವಕ ತನ್ನ ಮನೆಯ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಎಂದಿನಂತೆ ಮನೆಗೆ ಬಂದ ಮಣಿಕಂಠ, ಮಲಗುವುದಾಗಿ ರೂಮ್​ಗೆ ಹೋಗಿದ್ದ. ಬಳಿಕ ಎಷ್ಟು ಹೊತ್ತಾದರೂ ರೂಮಿಂದ ಆಚೆ ಬರಲಿಲ್ಲ. ಮನೆಯವರು ಬಾಗಿಲು ತಟ್ಟಿದರೂ‌ ಕದ ತೆರೆಯದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಬಳಿಕ ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಮಣಿಕಂಠ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

ಪ್ರೇಮವೈಫಲ್ಯದಿಂದ ಮನನೊಂದಿದ್ದ ಮಣಿಕಂಠ

ಯುವಕ ಮಣಿಕಂಠ ಕಳೆದ‌ ಆರು ತಿಂಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ‌.ಈ ಪ್ರೀತಿಗೆ ಯುವತಿಯಿಂದಲೂ‌ ಒಪ್ಪಿಗೆಯಿತ್ತು. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು‌ ಮೂಡಿ, ಇಬ್ಬರೂ ದೂರವಾಗಿದ್ದರು ಎನ್ನಲಾಗ್ತಿದೆ. ಇದೇ ಕಾರಣಕ್ಕೆ ನೊಂದಿದ್ದ. ಇದೇ ನೋವಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

 ಇದನ್ನೂ ಓದಿ: PSI Death: ಪಂಚಮಿ ಹಬ್ಬಕ್ಕೆ ಬರುತ್ತೀನಿ ಎಂದಿದ್ದ ಅಣ್ಣ ಬರಲೇ ಇಲ್ಲ! ಪಿಎಸ್ಐ ಅವಿನಾಶ್ ಮನೆಯಲ್ಲಿ ಆಕ್ರಂದನ

ಸಾಯುವ ಮುನ್ನ ಆಡಿಯೋ ಮಾಡಿದ್ದನಾ ಯುವಕ?

ಇನ್ನು ಯುವಕ ಮಣಿಕಂಠ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದರಲ್ಲಿ ತನ್ನ ಪ್ರೀತಿಯ ಬಗ್ಗೆ, ಪ್ರೇಮ ವೈಫಲ್ಯದ ಬಗ್ಗೆ ಹೇಳಿ ಕೊಂಡಿದ್ದ ಎನ್ನಲಾಗುತ್ತಿದೆ. ಇನ್ನು ಮಣಿಕಂಠ ಆತ್ಮಹತ್ಯೆ ಸಂಬಂಧ ಮಡಿವಾಳ‌ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರೇಮ ವೈಫಲ್ಯದಿಂದ ನೊಂದು ಯುವಕ ಆತ್ಮಹತ್ಯೆ

ಇನ್ನೊಂದು ಪ್ರಕರಣದಲ್ಲಿ ಪ್ರೇಮ ವೈಫಲ್ಯದಿಂದಾಗಿ 26 ವರ್ಷದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮನಗರದ ಅರ್ಚಕರ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸೋಮಶೇಖರ್ ಆತ್ಮಹತ್ಯೆಗೆ ಶರಣಾದ ಯುವಕ.

RIP ಅಂತ ವಾಟ್ಸಾಪ್ ಸ್ಟೇಟಸ್ ಹಾಕಿ ಸೂಸೈಡ್

ಆತ್ಮಹತ್ಯೆಗೂ ಮುನ್ನ ಸೋಮಶೇಖರ್ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ RIP ಎಂದು ಬರೆದುಕೊಂಡಿದ್ದನು. ಇದನ್ನು ನೋಡಿದ ಬಹುತೇಕರು ಯಾರೋ ಆಪ್ತರು ಅಥವಾ ಸಂಬಂಧಿಕರು ಸಾವನ್ನಪ್ಪಿರಬೇಕು. ಹಾಗಾಗಿ ಸೋಮಶೇಖರ್ ಸಂತಾಪ ಸೂಚಿಸಿ ಸ್ಟೇಟಸ್ ಹಾಕಿರಬಹುದು ಎಂದು ತಿಳಿದುಕೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಸ್ಟೇಟಸ್ ಹಾಕಿದ್ದ ಸೋಮಶೇಖರ್ ಸಂಜೆ 5 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲೊಂದು ಬಂಟಿ ಔರ್ ಬಬ್ಲಿ ಜೋಡಿ! ಈ ಕಳ್ಳ ಪ್ರೇಮಿಗಳ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಐಜೂರು ಠಾಣೆ ಪೊಲೀಸರಿಂದ ತನಿಖೆ

ಅರ್ಚಕರಹಳ್ಳಿಯ ನಿವಾಸಿಗಳು ತಮಗೆ ಮಕ್ಕಳಿಲ್ಲದ ಕಾರಣ ಸೋಮಶೇಖರ್ ನನ್ನು ದತ್ತು ಮಗನಂತೆ ಸಾಕುತ್ತಿದ್ದರು. ಸೋಮಶೇಖರ್ ಚನ್ನಪಟ್ಟಣದ ಮೂಲದವನು ಎಂದು ವರದಿಯಾಗಿದೆ. ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Annappa Achari
First published: