Student Suicide: ಎಲ್​ಎಲ್​ಬಿ ಮಾಡಲು ಸೀಟ್ ಸಿಗದ್ದಕ್ಕೆ ಯುವಕ ಸೂಸೈಡ್!

ಇತ್ತೀಚಿನ ದಿನಗಳಲ್ಲಿ ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆ ಎದುರಾದರೂ ಎದುರಿಸದೇ ನೇಣಿಗೆ ಶರಣಾಗುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಹಾಸನದ ಯುವಕನೊಬ್ಬ ಎಲ್​ಎಲ್​ಬಿ ಸೀಟ್​ ಸಿಗದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆ ಬಂದರೂ ಸಾಕು ಇತ್ತೀಚೆಗೆ ಆತ್ಮಹತ್ಯೆಗೆ (Suicide) ಶರಣಾಗುವವರ ಸಂಖ್ಯೆ ಹೆಚ್ಚಾಗಿದೆ. ಜೀವನದಲ್ಲಿ (Life) ಎಲ್ಲವನ್ನೂ ಎದುರಿಸಿ ನಿಲ್ಲುವ ಅನ್ನೋ ಯೋಚನೆಯೇ ಈಗಿನ ಯುವಕರಲ್ಲಿ (Youths) ಕಡಿಮೆಯಾಗಿದೆ. ಇಲ್ಲೊಬ್ಬ ಯುವಕ ಎಲ್​ಎಲ್​ಬಿ (LLB) ಮಾಡಲು ಸೀಟ್ (Seat) ಸಿಗದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಪಾಲ್ (22) ಎಂಬಾತನೇ ನೇಣಿಗೆ ಶರಣಾದ ಯುವಕ. ಈತ ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ನಿವಾಸಿ. ಈತ ಪಿಯುಸಿ ಹಾಗೂ ಐಟಿಐ ಮುಗಿಸಿ ವಕೀಲನಾಗುವ (Lawyer) ಕನಸು ಕಟ್ಟಿಕೊಂಡಿದ್ದ. ಇನ್ನು ಆತ್ಮಹತ್ಯೆಗೂ ಮುನ್ನ ಯುವಕ ಗೋಪಾಲ್ ತನ್ನ ಮೊಬೈಲ್​ನಲ್ಲಿ ಜೀವನದಲ್ಲಿ ಬೇಸರ ಬಗ್ಗೆ  ತಾನೇ ಚಿತ್ರೀಕರಣ ಮಾಡಿದ್ದ.

ಇತ್ತೀಚಿನ ದಿನಗಳಲ್ಲಿ ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆ ಎದುರಾದರೂ ಎದುರಿಸದೇ ನೇಣಿಗೆ ಶರಣಾಗುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಹಾಸನದ ಯುವಕನೊಬ್ಬ ಎಲ್​ಎಲ್​ಬಿ ಸೀಟ್​ ಸಿಗದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

PUCಯಲ್ಲಿ ಕಡಿಮೆ ಅಂಕ ಬಂದಿತ್ತು

ಆತ್ಮಹತ್ಯೆಗೆ ಶರಣಾದ ಗೋಪಾಲ್​ಗೆ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿತ್ತು. ಈ ಕಾರಣದಿಂದ ಗೋಪಾಲ್​ಗೆ LLBಗೆ ಸೀಟ್ ದೊರೆತಿರಲಿಲ್ಲ. ಇದರಿಂದ ಮನನೊಂದಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 22 ವರ್ಷದ ಗೋಪಾಲ್​ ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ಯುವಕ. ಕುದೂರು ಪೋಲಿಸ್ ಠಾಣೆ ವ್ಯಾಪ್ತಿಯ ನೆಲಮಂಗಲ - ಕುಣಿಗಲ್ ಹೆದ್ದಾರಿಯ ಪಕ್ಕದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: ವಾಟ್ಸಾಪ್​​ನಲ್ಲಿ ಬಾಸ್​ ಅಂತಾ ಸ್ಟೇಟಸ್ ಹಾಕದ್ದಕ್ಕೆ ಹೀಗಾ ಮಾಡೋದು?

ವಕೀಲನಾಗುವ ಕನಸು ಕಂಡಿದ್ದ ಗೋಪಾಲ್

ಮೃತ ಗೋಪಾಲ್, ಪಿಯುಸಿ ಹಾಗೂ ಐಟಿಐ ಮುಗಿಸಿ ವಕೀಲನಾಗುವ ಕನಸು ಕಟ್ಟಿಕೊಂಡಿದ್ದ. ಆದರೆ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿತ್ತು. ಇದರಿಂದ ಗೋಪಾಲ್ ಸಾಕಷ್ಟು ನೊಂದಿದ್ದ. ಇದೇ ಚಿಂತೆಗೀಡಾಗಿ ಇಂದು ಸೂಸೈಡ್ ಮಾಡಿಕೊಂಡಿದ್ದಾನೆ.

ಮೊಬೈಲ್​ನಲ್ಲಿ ವಿಡಿಯೋ ಮಾಡಿ ನೇಣಿಗೆ ಶರಣು

ಆತ್ಮಹತ್ಯೆಗೂ ಮುನ್ನ ಗೋಪಾಲ್​, ಮೊಬೈಲ್​​ನಲ್ಲಿ ವಿಡಿಯೋ ಮಾಡಿದ್ದ. ಜೀವನದಲ್ಲಿನ ಬೇಸರ ಬಗ್ಗೆ ತಾನೇ ಸ್ವತಃ ಚಿತ್ರೀಕರಣ ಮಾಡಿಕೊಂಡಿದ್ದ. ಬಳಿಕ ವಿಡಿಯೋವನ್ನು ತನ್ನ ಅಣ್ಣ ಹಾಗೂ ಸ್ನೇಹಿತರಿಗೆ ರವಾನೆ ಮಾಡಿದ್ದ. ಅದಾದ ಬಳಿಕ ನೇಣಿಗೆ ಕೊರಳೊಡ್ಡಿದ್ದಾನೆ. ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಬಗ್ಗೆ  ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ

ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಮಡ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ. ಚಂದು (19) ಆತ್ಮಹತ್ಯೆ ‌ಮಾಡಿಕೊಂಡಿರುವ ಯುವಕ. ಚಂದು ತಂದೆಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಪ್ರತಿದಿನ ಅಪ್ಪ- ಮಗನ ಮಧ್ಯೆ ಗಲಾಟೆ ನಡೀತಿತ್ತು. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ನಂತರ ಮಗ ಚಂದು ರೂಮ್ ಬಾಗಿಲು ಹಾಕಿಕೊಂಡಿದ್ದಾನೆ. ಬೆಳಗ್ಗೆ ರೂಮ್ ಬಾಗಿಲು ತೆಗೆದ ವೇಳೆ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪರಿಚಯ ಅಂತ ಮನೆಗೆ ಬರ್ತಿದ್ದ, ಸ್ಪೈ ಕ್ಯಾಮೆರಾ ಇರಿಸಿ ನಗ್ನ ವಿಡಿಯೋ ರೆಕಾರ್ಡ್; ವಿಕೃತ ಕಾಮಿ ಅರೆಸ್ಟ್

ಆಸ್ತಿಗಾಗಿ ತಾತನನ್ನೇ ಕೊಂದ ಮೊಮ್ಮಗನ ಬಂಧನ!

ಬೆಂಗಳೂರಿನಲ್ಲಿ ಆಸ್ತಿಗಾಗಿ ತಾತನನ್ನೇ ಕೊಲೆಗೈದ ಮೊಮ್ಮಗನನ್ನು ಬಂಧಿಸಲಾಗಿದೆ. ಕಳೆದ 17ರಂದು ತಾತನನ್ನು ಯಲಹಂಕದಲ್ಲಿ ಕೊಲೆಗೈದು ಮೊಮ್ಮಗ ಎಸ್ಕೇಪ್ ಆಗಿದ್ದ. ಇಂದು ಯಲಹಂಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೊಮ್ಮಗ ಜಯಂತ್ (20), ಯಾಸೀನ್ (22) ಬಂಧಿತ ಆರೋಪಿಗಳು.

ಆಸ್ತಿಗಾಗಿ ತಾತನ ಜೊತೆ ಮೊಮ್ಮಗ ಜಯಂತ್ ಪದೇಪದೇ ಜಗಳವಾಡ್ತಿದ್ದ. ಅಲ್ಲದೇ ಲೋನ್ ಕೊಡಿಸುವಂತೆ ಪೀಡಿಸ್ತಿದ್ದ. ಆದ್ರೆ ತಾತ ಪುಟ್ಟಯ್ಯ, ಮೊಮ್ಮಗನಿಗೆ ಸಹಕರಿಸದೆ ಆಗಲ್ಲ ಅಂತಾ ಹೇಳಿದ್ದರು. ಹೀಗಾಗಿ ಕೊಲೆ ಮಾಡಿಯಾದರೂ ಆಸ್ತಿ ಪಾಲು ಪಡೆದುಕೊಂಡರಾಯ್ತು ಎಂದು‌ ಡಿಸೈಡ್ ಮಾಡಿ ಗೆಳೆಯ ಯಾಸೀನ್‌ಗೆ ಕರೆ‌ ಮಾಡಿ ಕೊಲೆ ಮಾಡಿದ್ದ.
Published by:Thara Kemmara
First published: