ಬೆಂಗಳೂರು: ಆತನ ಕುಟುಂಬ (Family) ಬದುಕು ಕಟ್ಟಿಕೊಳ್ಳೋಕೆ ಅಂತ ನೆರೆ ರಾಜ್ಯ ಆಂಧ್ರದಿಂದ (Andhra Pradesh) ಬಂದು ಬೆಂಗಳೂರಲ್ಲಿ (Bengaluru) ನೆಲೆಸಿತ್ತು. ಜೀವನ (Life) ಏನೋ ಸಾಗ್ತಾ ಇತ್ತು, ಆದ್ರೆ ಇವನಿಗೆ ಮದ್ವೆ (Marriage) ಆಗೋಕೆ ಹೆಣ್ಣು (Girl) ಸಿಗಲೇ ಇಲ್ಲ. ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಬೇಸತ್ತಿದ್ದ ಯುವಕ ನವೀನ್ ಎಂಬಾತ ಆತ್ಮಹತ್ಯೆ (Suicide) ಮಾಡಿಕೊಂಡು ಸಾವನ್ನಪ್ಪಿದ್ದಾನೆ. 31 ವರ್ಷ ವಯಸ್ಸಿನ ನವೀನ್ ಹಾಗೂ ಕುಟುಂಬ ನೆರೆ ರಾಜ್ಯ ಆಂಧ್ರದ ಮಡಕಶಿರಾ ಜಿಲ್ಲೆಯಿಂದ ಜೀವನ ಕಟ್ಟಿಕೊಳ್ಳೋಕೆ ಅಂತ ಬೆಂಗಳೂರಿಗೆ ಬಂದು ನೆಲೆಸಿದ್ರು. ಆದ್ರೆ ಬದುಕು ಹೇಗೋ ನಡೆಯುತ್ತಿತ್ತು, ನವೀನ್ ಸಹ ಪೀಣ್ಯದ (Peenya) ಐಟಿಐ ಕಾಲೇಜಿನ (ITI College) ಬಳಿ ಗಾರ್ಮೆಂಟ್ಸ್ನಲ್ಲಿ (Garments) ಕ್ವಾಲಿಟಿ ಚೆಕರ್ (Quality Checker) ಆಗಿ ಕೆಲಸ ಮಾಡಿಕೊಂಡು ಬದುಕು ನಡೆಸ್ತಾ ಇದ್ದ, ಆದ್ರೆ ಆತನ ಜೀವನಕ್ಕೆ ಒಂದು ಜೋಡಿ ಸಿಕ್ಕಿರಲಿಲ್ಲ.
ಯುವಕನ ಎಡಗೈ ಸ್ವಾದೀನ ಕಡಿಮೆ
ಇನ್ನೂ ಮೃತ ನವೀನ್ಗೆ ಮದುವೆ ಆಗಲು ವಧು ಹುಡುಕಲು ಆರಂಭಿಸಿದ್ರು, ಹುಡುಗೀರು ಸಿಗ್ತಾ ಇದ್ರು ಆದ್ರೆ ಈತನ ಎಡಗೈ ಶಕ್ತಿ ಸ್ವಲ್ಪ ಕಡಿಮೆ ಇತ್ತಂತೆ. ಈಗಾಗಿ ಫಿಕ್ಸ್ ಆಗಿದ್ದ ಮದುವೆಗಳು ರಿಜೆಜ್ಟ್ ಆಗುತ್ತಿದ್ದ ಹಿನ್ನೆಲೆ ಮೃತ ನವೀನ್ ಸಾಕಷ್ಟು ನೊಂದಿದ್ದ, ಮದುವೆಗೆ ಹುಡುಗಿ ಸಿಗಲಿಲ್ಲ ಎಂದು ಮನನೊಂದ ತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕಂಪನಿ ಮೇಲೆ ನವೀನ್ ಪೋಷಕರ ಆರೋಪ
ನವೀನ್ ಕೆಲಸ ಮಾಡುತ್ತಿದ್ದ ಕಂಪನಿಯವರು ಕೆಲಸ ವಿಚಾರವಾಗಿ ಕಿರುಕುಳ ಕೊಟ್ಟಿರಬೇಕು, ಅಥವಾ ಯಾವುದೋ ವಿದ್ಯುತ್ ಅವಘಡದಿಂದ ಏನೋ ಸಮಸ್ಯೆ ಆಗಿದೆ. ಆಗ ಆತನ ಮೃತ ದೇಹ ಗಾರ್ಮೆಂಟ್ಸ್ನಿಂದ ಹೊರತಂದು ಆಚೆ ಬಿಸಾಕಿದ್ದಾರೆ, ನಮಗೆ ಫೋನ್ ಮಾಡಿ ನಿಮ್ಮ ಮಗ ಆಸಿಡ್ ಹಾಕಿಕೊಂಡಿದ್ದಾನೆ ಎಂದು ತಿಳಿಸಿದರು. ಹೀಗಾಗಿ ನಮ್ಮ ಮಗನ ಸಾವಿನಲ್ಲಿ ಅನುಮಾನವಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: Medicine Side Effect: ಯಾವುದೋ ರೋಗಕ್ಕೆ ಇನ್ಯಾವುದೋ ಔಷಧಿ! ಒಂದೆಡೆ ಮಗು, ಮತ್ತೊಂದೆಡೆ ವೃದ್ಧ ಸಾವು
ಅನಾರೋಗ್ಯದಿಂದ ಬಳಲುತ್ತಿರುವ ಮೃತನ ತಂದೆ
ಇನ್ನೂ ಮೃತ ನವೀನ್ ತಂದೆ ಪುರೋಹಿತ ವೃತ್ತಿ ಮಾಡುತ್ತಿದ್ದರು, ಇತ್ತೀಚೆಗೆ ತಂದೆಗೂ ಸಹ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು ಎನ್ನಲಾಗಿದೆ. ತಂದೆಯ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಹ ಖರ್ಚಾಗಿತ್ತು ಈ ವಿಚಾರದಲ್ಲಿಯೂ ಸಹ ನವೀನ್ ನೊಂದಿದ್ದ ಎಂದು ವಿಷಯ ತಿಳಿದು ಬಂದಿದೆ.
ಮೊದಲೇ ಪೆಟ್ರೋಲ್ ಖರೀದಿಸಿದ್ದ ನವೀನ್
ಇನ್ನೂ ಮದುವೆಗೆ ಹುಡುಗಿ ಸಿಗಲಿಲ್ಲ ಹಾಗೂ ತಂದೆಯ ಅನಾರೋಗ್ಯದಿಂದ ಬೇಸತ್ತಿದ್ದ ಮೃತ ನವೀನ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು, ಈಗಾಗಿ ಪೂರ್ವ ನಿಗದಿಯಂತೆ ಪೆಟ್ರೋಲ್ ಬಂಕ್ನಲ್ಲಿ ಒಂದು ಲೀಟರ್ ಪೆಟ್ರೋಲ್ ಖರೀದಿಸಿ ಫ್ಯಾಕ್ಟರಿಗೆ ಕೆಲಸಕ್ಕೂ ಹೋಗದೇ ಮಧ್ಯಾಹ್ನವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪೀಣ್ಯ ಐಟಿಐ ಕಾಲೇಜು ಕಾಂಪೌಂಡ್ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣ ಸ್ಥಳೀಯರು ಆತನನ್ನ ಇಎಸ್ಐ ಆಸ್ಪತ್ರೆಗೆ ಸೇರಿಸಿದ್ದರು, ಇಎಸ್ಐ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ವೇಳೆ ನವೀನ್ ಪೊಲೀಸರ ಬಳಿ ತನ್ನ ಸಾವಿಗೆ ಕಾರಣ ಏನೆಂದು ತಿಳಿಸಿದ್ದನಂತೆ, ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ನವೀನ್ ಕೊನೆಯುಸಿರು ಎಳೆದಿದ್ದಾನೆ.
ಇದನ್ನೂ ಓದಿ: MLC ಚುನಾವಣೆಗೆ ಸ್ಪರ್ಧಿಸಿದ್ದೇ ದೊಡ್ಡ ಅಪರಾಧ: ED ದಾಳಿ ಬಳಿಕ ಕೆಜಿಎಫ್ ಬಾಬು ಹೇಳಿಕೆ
ಸದ್ಯ ಘಟನೆಗೆ ಸಂಬಂಧಿಸಿದಂತೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರ ಆರೋಪದ ಹಿನ್ನೆಲೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ