ಮೊಬೈಲ್‌ ಸಿಗ್ನಲ್‌ಗಾಗಿ ಮರ ಏರಿದ ಯುವಕ; ಪ್ರಾಣಿ ಎಂದು ಬೇಟೆಗಾಗಿ ಗುಂಡು ಹಾರಿಸಿದ ಭೂಪ ಅಂದರ್‌

ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (19) ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ. ಈತ ನೆಟ್‌ವರ್ಕ್ ಸಂಪರ್ಕ ಅರಸಿ ಮರವನ್ನು ಏರಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ.

news18-kannada
Updated:May 24, 2020, 7:11 AM IST
ಮೊಬೈಲ್‌ ಸಿಗ್ನಲ್‌ಗಾಗಿ ಮರ ಏರಿದ ಯುವಕ; ಪ್ರಾಣಿ ಎಂದು ಬೇಟೆಗಾಗಿ ಗುಂಡು ಹಾರಿಸಿದ ಭೂಪ ಅಂದರ್‌
ಸಾಂದರ್ಭಿಕ ಚಿತ್ರ
  • Share this:
ಕಾರವಾರ: ಮೊಬೈಲ್ ಸಿಗ್ನಲ್ ಗಾಗಿ  ಮರ ಏರಿ ಮೊಬೈಲ್ ನೋಡುತ್ತಿದ್ದ ಯುವಕನೋರ್ವನನ್ನು ಕಾಡು ಪ್ರಾಣಿ ಎಂದು ತಿಳಿದು ಬೇಟೆಗಾರನೊಬ್ಬ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸಿದ್ದಾಪುರ ತಾಲೂಕಿನ ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ನಡೆದಿದೆ.

ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (19) ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ. ಈತ ನೆಟ್‌ವರ್ಕ್ ಸಂಪರ್ಕ ಅರಸಿ ಮರವನ್ನು ಏರಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ.

ಇದೇ ವೇಳೆ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಚಟವುಳ್ಳ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ ಈತನನ್ನು ಪ್ರಾಣಿ ಎಂದು ತಿಳಿದು ಗುಂಡು ಹಾರಿಸಿದ್ದಾನೆ. ಇದರಿಂದ ಯುವಕನ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Corona Virus: ಮಹಾರಾಷ್ಟ್ರದಲ್ಲಿ ಅಂಕೆಗೆ ಸಿಗದ ಕೊರೋನಾ ಅಟ್ಟಹಾಸ; ಏರುತ್ತಲೇ ಇದೆ ಸಾವಿನ ಸಂಖ್ಯೆ
First published:May 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading