• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: ಹೆದರಿಸೋಕೆ ನೇಣು ಹಾಕ್ಕೊಳ್ತಿದ್ದ ಆಂಟಿಯ ಕುರ್ಚಿ ಒದ್ದು ಕೊಂದ ಯುವ ಪ್ರಿಯತಮ!

Bengaluru: ಹೆದರಿಸೋಕೆ ನೇಣು ಹಾಕ್ಕೊಳ್ತಿದ್ದ ಆಂಟಿಯ ಕುರ್ಚಿ ಒದ್ದು ಕೊಂದ ಯುವ ಪ್ರಿಯತಮ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರವಣ (35) ಮೃತ ಮಹಿಳೆ. ಗಣೇಶ್ (22) ಯುವಕನ ಜೊತೆ ಸರವಣ ಅನೈತಿಕ ಸಂಬಂಧ ಹೊಂದಿದ್ದಳು. ಇದಲ್ಲದೆ 50 ಸಾವಿರ ಹಣವನ್ನ ಯುವಕನಿಗೆ ನೀಡಿ ಮನೆ ಕೂಡ ಮಾಡಿಕೊಟ್ಟಿದ್ದಳು.

 • Share this:

ಬೆಂಗಳೂರು: 22 ವರ್ಷದ ಯುವಕನ (Youth) ಜೊತೆ ಅಕ್ರಮ ಸಂಬಂಧ ಹೊಂದಿದ್ದ 35 ವರ್ಷದ ಮಹಿಳೆಯ (Woman) ಪ್ರಾಣಪಕ್ಷಿ ಹಾರಿ ಹೋಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಲು (Threat) ಹಗ್ಗದ ಕುಣಿಕೆಯನ್ನು ಕುತ್ತಿಗೆಗೆ  ಹಾಕಿಕೊಂಡ ಯುವಕ ಕಾಲಿಗೆ ಆಸರೆಯಾಗಿದ್ದ ಕುರ್ಚಿ (Chair) ತಳ್ಳಿದ್ದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ (Bengaluru) ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಜೆಸಿ ನಗರ ಸ್ಲಂನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಯುವಕನನ್ನು ಬಂಧಿಸಿ (Youth Arrested) ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


ಸರವಣ (35) ಮೃತ ಮಹಿಳೆ. ಗಣೇಶ್ (22) ಯುವಕನ ಜೊತೆ ಸರವಣ ಅನೈತಿಕ ಸಂಬಂಧ ಹೊಂದಿದ್ದಳು. ಇದಲ್ಲದೆ 50 ಸಾವಿರ ಹಣವನ್ನ ಯುವಕನಿಗೆ ನೀಡಿ ಮನೆ ಕೂಡ ಮಾಡಿಕೊಟ್ಟಿದ್ದಳು.


ಇಷ್ಟೆಲ್ಲಾ ಸವಲತ್ತು ಮಾಡಿಕೊಟ್ಟರೂ ಗಣೇಶ್ ಬೇರೆ ಮಹಿಳೆಯ ಜೊತೆ ಸಲುಗೆಯಿಂದ ಇರೋ ವಿಷಯ ಸರವಣಳಿಗೆ ಗೊತ್ತಾಗಿದೆ. ಹೀಗಾಗಿ ನಿನ್ನೆ ಯುವಕನನ್ನು ಮನೆಗೆ ಕರೆಸಿಕೊಂಡಿದ್ದಳು.


ಇಬ್ಬರ ಮಧ್ಯೆ ಮೂರನೇ ಮಹಿಳೆ ಎಂಟ್ರಿ


ಈ ವೇಳೆ ನಾನೇ ಹಣ ಕೊಟ್ಟು, ಮನೆ ಮಾಡಿಕೊಟ್ಟು ನಿನ್ನನ್ನು ನೋಡಿಕೊಳ್ಳುತ್ತಿದ್ದೇನೆ. ಹಣ ವಾಪಸ್ ಕೊಡು ಎಂದು ಕೇಳಿದ್ದಾಳೆ. ನಂತರ ನಿನ್ನ ಜೊತೆಯಲ್ಲಿರುವ ಮಹಿಳೆ ಯಾರು ಎಂದು ಪ್ರಶ್ನಿಸಿದಾಗ ಗಣೇಶ್ ಮತ್ತು ಸವರಣಳ ಮಧ್ಯೆ ಗಲಾಟೆ ಉಂಟಾಗಿದೆ.
ಕುರ್ಚಿ ಒದ್ದು ಹಗ್ಗ ಎಳೆದ!


ಜಗಳ ವಿಕೋಪಕ್ಕಾಗಿ ತಿರುಗಿದಾಗ ಸಾಯುವುದಾಗಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಗಣೇಶ್ ಮುಂದಾಗಿದ್ದನು. ಈ ವೇಳೆ ಸರವಣ ಗಣೇಶ್​ನನ್ನು ತಡೆದಿದ್ದಾಳೆ. ಇದೇ ಸಮಯದಲ್ಲಿ ತಾನು ಸಾಯ್ತೀನಿ ಅಂತ ನೇಣಿನ ಕುಣಿಕೆ ಹಾಕೊಂಡು ಸರವಣ ಕುರ್ಚಿಯ ಮೇಲೆ ನಿಂತಿದ್ದಾಳೆ. ಈ ವೇಳೆ ಹಗ್ಗ ಎಳೆದು ಚೇರ್ ಒದ್ದಿದ್ದರಿಂದ ಸ್ಥಳದಲ್ಲೇ ಸರವಣ ಸಾವನ್ನಪ್ಪಿದ್ದಾಳೆ.


ಇದನ್ನೂ ಓದಿ:  Bengaluru: ನೂರಾರು ಕನಸುಗಳೊಂದಿಗೆ ನಗರಕ್ಕೆ ಬಂದಿದ್ದ ಯುವಕನ ಜೀವ ಪಡೆದ ಲಿಫ್ಟ್; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಕಂದಮ್ಮ?

top videos


  ಮನೆಗೆಲಸ ಮಾಡಿಕೊಂಡಿದ್ದ ಸರವಣಳಿಗೆ ಮದುವೆಯಾಗಿ ಎರಡೂ ಮಕ್ಕಳಿದ್ದರೂ 22 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  First published: