ಮಧ್ಯರಾತ್ರಿ ಬೆತ್ತಲಾಗಿ ಬೈಕ್​ ಓಡಿಸಿದ ಯುವತಿಯ ವಿಡಿಯೋ ವೈರಲ್​

ಯುವತಿ ನಗ್ನವಾಗಿ ಬೈಕ್​ ರೈಡ್​ ಮಾಡುತ್ತಿರುವ ವಿಡಿಯೋ ಕುರಿತಂತೆ ಪೋಲಿಸರು ತೀರ್ವವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ವಿವಿಧ ಪ್ರದೇಶದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಈ ವಿಡಿಯೋ ಬೆಳಗಾವಿಯಲ್ಲಿ ನಡೆದಿದೆಯೋ ಅಥವಾ ಬೇರೆ ಪ್ರದೇಶದಲ್ಲಿ ನಡೆದ ವಿಡಿಯೋವನ್ನು ಬೆಳಗಾವಿಯಲ್ಲಿ ನಗರದಲ್ಲಿಯೇ ನಡೆದಿದೆ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆಯೋ ಎಂದು ಪೋಲಿಸರು ಪರೀಶೀಲನೆ ಮಾಡುತ್ತಿದ್ದಾರೆ.

news18
Updated:August 22, 2019, 10:57 AM IST
ಮಧ್ಯರಾತ್ರಿ ಬೆತ್ತಲಾಗಿ ಬೈಕ್​ ಓಡಿಸಿದ ಯುವತಿಯ ವಿಡಿಯೋ ವೈರಲ್​
ಬೆಳಗಾವಿ
  • News18
  • Last Updated: August 22, 2019, 10:57 AM IST
  • Share this:
ಬೆಂಗಳೂರು(ಆಗಸ್ಟ್​​.18): ಯುವತಿಯೊಬ್ಬಳು ನಗ್ನವಾಗಿ ಬೈಕ್​ ಓಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಜನ ನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ನಗ್ನವಾಗಿ ಬೈಕ್​ ಓಡಿಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ ಮೂಲಕ  ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಎರಡು ದಿನಗಳ ಹಿಂದೆ ರಾತ್ರಿ 8 ಗಂಟೆಗೆ  ಬೆಳಗಾವಿಯಲ್ಲಿ ನಡೆದಿದೆ ಎನ್ನಲಾಗಿದೆ. ಹೀಗಾಗಿ ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು, ಈಕೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಒತ್ತಾಯಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ತನಿಖೆಯನ್ನು ಶುರು ಮಾಡಿರುವ ಪೋಲಿಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಯುವತಿ ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ನಂತರ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ರೈಡ್​ ಮಾಡಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡದ ಮೇಲಿದ್ದ ಕೆಲ ಸಾರ್ವಜನಿಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದು, ಬಳಿಕ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ಗಮನಿಸಿದರೆ, ಡ್ರಗ್ಸ್​ ಅಮಲಿನಲ್ಲಿ ಬೆಟ್ಟಿಂಗ್​ ಕಟ್ಟಿದ ಯುವತಿ ಮತ್ತು ಗೆಳೆಯರ ಗುಂಪೊಂದು ಈ ರೀತಿ ವರ್ತಿಸಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತನಿಖೆ ತೀವ್ರಗೊಳಿಸಿದ ಪೊಲೀಸರು: ಯುವತಿ ನಗ್ನವಾಗಿ ಬೈಕ್​ ರೈಡ್​ ಮಾಡುತ್ತಿರುವ ವಿಡಿಯೋ ಕುರಿತಂತೆ ಪೋಲಿಸರು ತೀರ್ವವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ವಿವಿಧ ಪ್ರದೇಶದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಈ ವಿಡಿಯೋ ಬೆಳಗಾವಿಯಲ್ಲಿ ನಡೆದಿದೆಯೋ ಅಥವಾ ಬೇರೆ ಪ್ರದೇಶದಲ್ಲಿ ನಡೆದ ವಿಡಿಯೋವನ್ನು ಬೆಳಗಾವಿಯಲ್ಲಿ ನಗರದಲ್ಲಿಯೇ ನಡೆದಿದೆ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆಯೋ ಎಂದು ಪೋಲಿಸರು ಪರೀಶೀಲನೆ ಮಾಡುತ್ತಿದ್ದಾರೆ.ಇನ್ನು ವಿಡಿಯೋದಲ್ಲಿರುವ ಪ್ರದೇಶ ಹಾಗೂ ರಸ್ತೆ ಬೆಳಗಾವಿ ನಗರದಲ್ಲಿನ ರಸ್ತೆಗಳಿಗೆ ಹೋಲಿಕೆಯಾಗುತ್ತಿಲ್ಲ. ಅಲ್ಲದೆ, ವಿಡಿಯೋ ಮಾಡಿದ ವ್ಯಕ್ತಿಯ ಭಾಷೆ ಕೂಡ ಹೋಲಿಕೆಯಾಗುತ್ತಿಲ್ಲ. ಆದರೂ ನಗರ ಪೋಲಿಸರು​ ಹೆಚ್ಚಿನ ನಿಗಾ ವಹಿಸಿ, ಸತ್ಯಾಂಸವನ್ನು ಬೆಳಕಿಗೆ ತರುವಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
First published: August 18, 2019, 7:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading