ಶಾಲಾ ಮಕ್ಕಳಿಗೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಕಾಮದ ಪಾಠ ಮಾಡಿ ಪೇಚಿಗೆ ಸಿಲುಕಿದ ವಿಜ್ಞಾನದ ಮೇಷ್ಟ್ರು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನ ಮೇಲೆ ಯಾವುದೇ ಕೇಸ್​ ದಾಖಲಾಗಿಲ್ಲ. ಆದರೆ, ಶಾಲಾ ಮಕ್ಕಳು ಈ ಶಿಕ್ಷಕ ನಮಗೆ ಬೇಡ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಹೀಗಾಗಿ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಆರೋಪಿ ಶಿಕ್ಷಕ ಚಂದ್ರಕಾಂತ್​ನನ್ನು ಅಮಾನತು ಮಾಡಿ ನಾಳೆ ಆದೇಶ ಹೊರಡಿಸಲಿದೆ ಎನ್ನಲಾಗುತ್ತಿದೆ.

ಶಿಕ್ಷಕ ಚಂದ್ರಪಾಲ್.

ಶಿಕ್ಷಕ ಚಂದ್ರಪಾಲ್.

  • Share this:
ಯಾದಗಿರಿ (ಜನವರಿ 22): ಮಕ್ಕಳಿಗೆ ಶಿಕ್ಷಣ ಹಾಗೂ ಮಾರ್ಗದರ್ಶನ ನಿಡಬೇಕಾದ ಶಿಕ್ಷಕ ಇದೀಗ ಶಾಲಾ ಮಕ್ಕಳಿಗೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ತೋರಿಸುವ​ ಮೂಲಕ ಕಾಮದ ಪಾಠ ಮಾಡಿ ಪೇಚಿಗೆ ಸಿಲುಕಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್​ ತಾಲೂಕಿನ ಮಡೇಪಲ್ಲಿಯಲ್ಲಿ ನಡೆದಿದೆ.

ಶಿಕ್ಷಕನ ಹೆಸರು ಚಂದ್ರಪಾಲ್​. ಈತ ಕಳೆದ 4 ವರ್ಷದಿಂದ ಮಡೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಆದರೆ, ಈತ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಪಾಠ ಮಾಡುವ ಬದಲಾಗಿ ಕಳೆದ ಹಲವು ದಿನಗಳಿಂದ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಮಕ್ಕಳಿಗೆ ಕಾಮದ ಪಾಠ ಹೇಳಿಕೊಟ್ಟಿದ್ದಾನೆ.

ಇದರಿಂದ ಬೇಸತ್ತಿರುವ ಮಕ್ಕಳು ಮನೆಯಲ್ಲಿ ಪೋಷಕರ ಬಳಿ ಈ ಕುರಿತು ದೂರು ನೀಡಿದ್ದಾರೆ. ಅಲ್ಲದೆ, ಈ ಶಿಕ್ಷಕ ನಮಗೆ ಬೇಡ ಎಂದು ಒತ್ತಾಯಿಸಿದ್ದಾರೆ. ಕೂಡಲೇ ಇಂದು ಶಾಲೆಗೆ ಮುತ್ತಿಗೆ ಹಾಕಿರುವ ಪೋಷಕರು ಶಿಕ್ಷಕನನ್ನು ಕೂಡಲೇ ಕೆಲಸದಿಂದ ತೆಗೆಯುವಂತೆ ದೊಡ್ಡ ಮಟ್ಟದ ಗಲಾಟೆ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ದಾವಿಸಿ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಅಧಿಕಾರಿಗಳ ಬಳಿ ಮಾತನಾಡಿರುವ ಶಿಕ್ಷಕ ಚಂದ್ರಪಾಲ್, "ನಾನು ಆದಿಮಾನವರ ಜೀವನ ಪದ್ದತಿ ಹಾಗೂ ಸಂತಾನೋತ್ಪತ್ತಿ ಬಗ್ಗೆ ಪಾಠ ಮಾಡಿದ್ದೆನೆ. ಸರಕಾರ ಪುಸ್ತಕ ಪೂರೈಕೆ ಮಾಡಿಲ್ಲ. ಹೀಗಾಗಿ ಪುಸ್ತಕಗಳ ಕೊರತೆ ಹಿನ್ನೆಲೆ ಮೊಬೈಲ್ ಮೂಲಕ ಪಾಠ ಮಾಡಿದ್ದೆನೆಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾನೆ.

ಆದರೆ, ಸರಕಾರ ಪುಸ್ತಕ ಪೂರೈಕೆ ಮಾಡದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪುಸ್ತಕ ಸಮಸ್ಯೆ ನಿಗಿಸಿಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್​ ಮೂಲಕ ಪಾಠ ಮಾಡಿದ್ದು ಎಷ್ಟು ಸರಿ? ಎಂಬುದು ಸ್ಥಳೀಯರ ಪ್ರಶ್ನೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನ ಮೇಲೆ ಯಾವುದೇ ಕೇಸ್​ ದಾಖಲಾಗಿಲ್ಲ. ಆದರೆ, ಶಾಲಾ ಮಕ್ಕಳು ಈ ಶಿಕ್ಷಕ ನಮಗೆ ಬೇಡ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಹೀಗಾಗಿ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಆರೋಪಿ ಶಿಕ್ಷಕ ಚಂದ್ರಕಾಂತ್​ನನ್ನು ಅಮಾನತು ಮಾಡಿ ನಾಳೆ ಆದೇಶ ಹೊರಡಿಸಲಿದೆ ಎನ್ನಲಾಗುತ್ತಿದೆ.

(ವರದಿ-ನಾಗಪ್ಪ ಮಾಲಿಪಾಟೀಲ)

ಇದನ್ನೂ ಓದಿ : ವೈಯಕ್ತಿಕ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲು ಮುಂದಾದ ಕೇಂದ್ರ; 7 ಲಕ್ಷ ರೂ.ಗಳವರೆಗಿನ ಸುಂಕ ಶೇ.5
First published: