• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: ಗಂಡ ಜೈಲಿಗೆ ಹೋಗ್ತಿದ್ದಂತೆ ಫೀಲ್ಡ್​ಗಿಳಿದ ಹೆಂಡ್ತಿ; ಮಕ್ಕಳಿಂದಲೇ ಗಾಂಜಾ ಡೀಲ್ ಮಾಡ್ತಿದ್ದ ಮಹಿಳೆ ಅರೆಸ್ಟ್

Bengaluru: ಗಂಡ ಜೈಲಿಗೆ ಹೋಗ್ತಿದ್ದಂತೆ ಫೀಲ್ಡ್​ಗಿಳಿದ ಹೆಂಡ್ತಿ; ಮಕ್ಕಳಿಂದಲೇ ಗಾಂಜಾ ಡೀಲ್ ಮಾಡ್ತಿದ್ದ ಮಹಿಳೆ ಅರೆಸ್ಟ್

ಬಂಧಿತ ಮಹಿಳೆ

ಬಂಧಿತ ಮಹಿಳೆ

Woman Arrested: ಜೊತೆಯಲ್ಲಿ ಮಕ್ಕಳು ಮತ್ತು ತಾಯಿ ಇದ್ರೆ ಕುಟುಂಬ ಪ್ರಯಾಣ ಮಾಡುತ್ತಿದೆ ಎಂದು ಪೊಲೀಸರು ತಿಳಿದುಕೊಳ್ಳುತ್ತಾರೆ. ಆದ್ದರಿಂದಲೇ ಮಕ್ಕಳು ಮತ್ತು ತಾಯಿ ಜೊತೆ ನಗ್ಮಾ ಪ್ರಯಾಣಿಸುತ್ತಿದ್ದಳು.

 • News18 Kannada
 • 4-MIN READ
 • Last Updated :
 • Bangalore, India
 • Share this:

ಬೆಂಗಳೂರು: ಗಾಂಜಾ ಡೀಲ್ (Ganja Selling) ಮಾಡುತ್ತಿದ್ದ ಪತಿ (Husband) ಜೈಲುಪಾಲಾಗುತ್ತಿದ್ದಂತೆ ಫೀಲ್ಡ್​ಗೆ ಇಳಿದಿದ್ದ ಪತ್ನಿ (Wife) ಸಹ ಅರೆಸ್ಟ್ ಆಗಿದ್ದಾಳೆ. ಈಕೆಯ ಗಂಡ ಜೈಲಿನಲ್ಲಿದ್ದುಕೊಂಡೇ (Prison) ಪತ್ನಿ ಹಾಗೂ ಮಕ್ಕಳ ಮೂಲಕ ಗಾಂಜಾ ವ್ಯವಹಾರ ನಡೆಸುತ್ತಿದ್ದನು. ಇದೀಗ ಪತಿ-ಪತ್ನಿ ಕತ್ತಲು ಮನೆ ಸೇರಿದ್ದು, ಮೂವರು ಮಕ್ಕಳು ಅನಾಥವಾಗಿವೆ ಮುಜ್ಮು ಮತ್ತು ನಗ್ಮಾ ಜೈಲುಪಾಲಾದ ಗಂಡ ಹೆಂಡತಿ. ಮುಜ್ಮು ವಿಶಾಖಪಟ್ಟಣದಿಂದ (Visakhapatnam) ಗಾಂಜಾ ತಂದು ಬೆಂಗಳೂರಿನಲ್ಲಿ (Bengaluru) ಮಾರಾಟ ಮಾಡುತ್ತಿದ್ದನು. ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಮುಜ್ಮು ಪರಪ್ಪನ ಅಗ್ರಹಾರ (Parappana Agrahara) ಸೇರಿದ್ದನು. ಜೆಜೆ ಠಾಣೆ ಪೊಲೀಸರು ಮುಜ್ಮುನನ್ನು ಬಂಧಿಸಿದ್ದರು.


ಪತಿ ಜೈಲು ಸೇರುತ್ತಿದ್ದಂತೆ ನಗ್ಮಾ ಗಾಂಜಾ ಮಾರಾಟಕ್ಕೆ ಮುಂದಾಗಿದ್ದಳು. ತಾನೇ ವಿಶಾಖಪಟ್ಟಣಕ್ಕೆ ಹೋಗಿ ಗಾಂಜಾ ತಂದು ಬೆಂಗಳೂರಿನಲ್ಲಿ ಪರಿಚಯಸ್ಥರ ಮೂಲಕ ಮಾರಾಟ ನಡೆಸುತ್ತಿದ್ದಳು.


ಈ ಕೃತ್ಯಕ್ಕೆ ಏನು ಅರಿಯದ ಮಕ್ಕಳನ್ನು ನಗ್ಮಾ ಬಳಸಿಕೊಳ್ಳುತ್ತಿದ್ದಳು. ವಿಶಾಖಪಟ್ಟಣದಿಂದ ತಂದಿದ್ದ 13 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ಸಹಿತ ನಗ್ಮಾಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.


ಮೂರು ಮಕ್ಕಳೇ ಈಕೆಗೆ ಅಸ್ತ್ರ!


ಹೌದು, ಆರೋಪಿ ನಗ್ಮಾಗೆ ಆಕೆಯ ಒಂದು, ಮೂರು ಮತ್ತು ಏಳು ವರ್ಷದ ಮಕ್ಕಳೇ ಅಸ್ತ್ರವಾಗಿದ್ದರು. ಯಾವುದೇ ಡೀಲ್​ಗೂ ಹೋದ್ರು ಮಕ್ಕಳನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಿದ್ದಳು. ಯಾರೋ ಮಹಿಳೆ ಮಕ್ಕಳೊಂದಿಗೆ ಹೋಗ್ತಿದ್ದಾಳೆ ಎಂದು ಪೊಲೀಸರು ಪರಿಶೀಲನೆ ಮಾಡಲ್ಲ ಅನ್ನೋದು ನಗ್ಮಾಳ ನಂಬಿಕೆಯಾಗಿತ್ತು. ಆದ್ರೆ ಈ ಬಾರಿ ನಗ್ಮಾಳ ನಂಬಿಕೆ ಹುಸಿಯಾಗಿತ್ತು.
ಗಾಂಜಾ ಹೇಗೆ ತರುತ್ತಿದ್ದಳು?


ನಗ್ಮಾ ಗಾಂಜಾ ತರಲು ತಾಯಿ ಹಾಗೂ ಮೂವರು ಮಕ್ಕಳ ಜೊತೆಯಲ್ಲಿ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದಳು. ಅಲ್ಲಿಯೇ ಒಂದು ದಿನ ರೂಮ್ ಬುಕ್ ಮಾಡಿಕೊಂಡು ಉಳಿದುಕೊಳ್ಳುತ್ತಿದ್ದಳು. ಗಾಂಜಾ ಖರೀದಿ ಬಳಿಕ ಕುಟುಂಬದ ಜೊತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಕೆಲ ಬಾರಿ ಬಸ್​ನಲ್ಲಿಯೂ ಗಾಂಜಾ ತಂದಿದ್ದಾಳೆ.


ಇದನ್ನೂ ಓದಿ:  Chamarajangara: ತನ್ನ ರಹಸ್ಯ ಬಯಲಾಗ್ತಿದ್ದಂತೆ ಪತ್ನಿಯ ಉಸಿರು ನಿಲ್ಲಿಸಿದ ಗಂಡ

top videos


  ಜೊತೆಯಲ್ಲಿ ಮಕ್ಕಳು ಮತ್ತು ತಾಯಿ ಇದ್ರೆ ಕುಟುಂಬ ಪ್ರಯಾಣ ಮಾಡುತ್ತಿದೆ ಎಂದು ಪೊಲೀಸರು ತಿಳಿದುಕೊಳ್ಳುತ್ತಾರೆ. ಆದ್ದರಿಂದಲೇ ಮಕ್ಕಳು ಮತ್ತು ತಾಯಿ ಜೊತೆ ನಗ್ಮಾ ಪ್ರಯಾಣಿಸುತ್ತಿದ್ದಳು.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು