ಲಾಕ್​ಡೌನ್​ ಎಫೆಕ್ಟ್​; ವಾಹನ ಸಿಗದೆ ತಳ್ಳುವ ಗಾಡಿಯಲ್ಲಿ ಐದು ಕಿ.ಮೀ ನಡೆದು ಪತಿಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆ

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ ಡೌನ್‌ ಆಗಿರುವ ಹಿನ್ನಲೆಯಲ್ಲಿ ಖಾಸಗಿ ವಾಹನದವರು ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದರೆ ಪೋಲಿಸರು ವಾಹನ ಸೀಜ್‌ ಮಾಡುತ್ತಾರೆಂಬ ಭಯದಿಂದ ಯಾವ ವಾಹನವೂ ಬಾಡಗೆಗೆ ಕೂಡ  ಸಿಗುತ್ತಿಲ್ಲ

ಪತಿಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆ

ಪತಿಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆ

 • Share this:
  ಗದಗ (ಮೇ. 26):  ಹೆಮ್ಮಾರಿ ಕೊರೋನಾ ನಿಯಂತ್ರಣ ಮಾಡಲು ಸರ್ಕಾರ ಲಾಕ್‌ ಡೌನ್‌ ಅಸ್ತ್ರ ಪ್ರಯೋಗ ಮಾಡಿದೆ. ಇಂದರಿಂದ ಬಡ ರೋಗಿಗಳು ಖಾಸಗಿ ವಾಹನ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಖಾಸಗಿ ವಾಹನಗಳು ಸಿಕ್ಕರು ಅವರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಕಡು ಬಡ ಕುಟುಂಬದ ಮಹಿಳೆಯೊಬ್ಬರ ಗಂಡನ ಉಳಿಸಿಕೊಳ್ಳಲು ರಣ ಬಿಸಿಲಿನಲ್ಲಿ ಆತನನ್ನು ತಳುವ ನೀರಿನ ಗಾಡಿಯ ಮೂಲಕ ಜಿಲ್ಲಾಸ್ಪತ್ರೆಯವರಿಗೆ ಕರೆದುಕೊಂಡು ಬಂದಿರುವ ಮನಕಲುಕುವ ಘಟನೆ ನಡೆದಿದೆ.  ಡನ ಚಿಕಿತ್ಸೆಗಾಗಿ ತಳುವ ನೀರಿನ ಗಾಡಿಯ ಮೂಲಕ ಐದು ಕಿಲೋಮೀಟರ್ ಹೆಂಡತಿ ನಡೆದು ಬಂದಿದ್ದಾರೆ.  ಗದನಗ ನಗರದ ಸಿದ್ದರಾಮೇಶ್ವರ ನಗರದ ನಿವಾಸಿ ಗೋವಿಂದಪ್ಪ ಹಾಗೂ ಅವನ ಹೆಂಡತಿ ತಳುವ ನೀರಿನ ಗಾಡಿಯಲ್ಲಿ ಕುರಿಸಿ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಸಿದ್ದರಾಮೇಶ್ವರ ನಗರದಿಂದ ಜಿಮ್ಸ್ ಆಸ್ಪತ್ರೆಗೆ ಸುಮಾರು ಐದು ಕಿಲೋಮೀಟರ್ ಇದ್ದು, ಅಲ್ಲಿಯವರಿಗೆ ತಳುವ ನೀರಿನ ಗಾಡಿಯ ಕರೆದುಕೊಂಡು ಹೋಗಿದ್ದಾರೆ.

  ರೋಗಿ ಗೋವಿಂದಪ್ಪನಿಗೆ ಗಂಡು ಮಕ್ಕಳು ಇಲ್ಲ ಇರುವ ಒಬ್ಬಳು ಹೆಣ್ಣು ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಅವನಿಗೆ ಪತ್ನಿಯೇ ಆಸರೆಯಾಗಿದ್ದಾರೆ.  ಹೀಗಾಗಿ ರೋಗಿಯ ಪತ್ನಿಯ ಜೊತೆಗೆ ಪಕ್ಕದ ಮನೆಯ ಹುಡುಗನೊಂದಿಗೆ ತಳುವ ಗಾಡಿಯ ಮೂಲಕ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ.

  ಇನ್ನು ಗೋವಿಂದಪ್ಪನಿಗೆ ಕಳೆದ ಎರಡು ತಿಂಗಳ ಹಿಂದೆ ಸಕ್ಕರೆ ಕಾಯಿಲೆಯಿಂದ ಒಂದು ಕಾಲ ಕಳೆದುಕೊಂಡಿದ್ದಾನೆ. ಜಿಮ್ಸ್ ಆಸ್ಪತ್ರೆಯ ವೈದ್ಯರಿಂದ ಆಪರೇಷನ್ ಮಾಡಿ ಕಾಲ ತಗೆದಿದ್ದಾರೆ. ಚಿಕಿತ್ಸೆಗೆಂದು ಜಿಮ್ಸ್ ಆಸ್ಪತ್ರೆಗೆ ಹೊರಟಿರುವ ವೇಳೆ ಖಾಸಗಿ ವಾಹನ ಮೊರೆ ಹೋಗಿದ್ದಾರೆ ಅವರು 300-400 ರೂಪಾಯಿ ಕೇಳಿದ್ದಾರಂತೆ. ಹೀಗಾಗಿ ನಾವು ಬಡವರು ನಮ್ಮ ಹತ್ತಿರ ಹಣವಿಲ್ಲ ಹೀಗಾಗಿ ತಳುವ ನೀರಿನ ಗಾಡಿಯ ಮೂಲಕ ಆಸ್ಪತ್ರೆ ಹೊರಟ್ಟಿದೇವೆ ಎಂದು ಗೋಳಾಡುತ್ತಿದ್ದಾರೆ.

  ಇದನ್ನು ಓದಿ: ಕೋವಿಡ್​​ ಸಂಕಷ್ಟಕ್ಕೆ ಸಿಲುಕಿದ ನೇಕಾರರ ಸಮುದಾಯ; ಸರ್ಕಾರ ನೀಡಿದ್ದ ಭರವಸೆಯೂ ಮರೀಚಿಕೆ

  ಕೆಳೆದ ಎರಡು ತಿಂಗಳಿಂದ ನಿರಂತರವಾಗಿ ಖಾಸಗಿ ವಾಹನದ ಮೂಲಕ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದರು. ಆದರೆ  ಕೊರೋನಾದಿಂದ ಸದ್ಯ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ ಡೌನ್‌ ಆಗಿರುವ ಹಿನ್ನಲೆಯಲ್ಲಿ ಖಾಸಗಿ ವಾಹನದವರು ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದರೆ ಪೋಲಿಸರು ವಾಹನ ಸೀಜ್‌ ಮಾಡುತ್ತಾರೆಂಬ ಭಯದಿಂದ ಯಾವ ವಾಹನವೂ ಬಾಡಗೆಗೆ ಕೂಡ  ಸಿಗುತ್ತಿಲ್ಲ. ಹೀಗಾಗಿ ಬಡ ರೋಗಿಗಳು ವಾಹನ ಸಿಗದೆ ಕಂಗಾಲಾಗಿದ್ದಾರೆ. ಇನ್ನು ಅಂಬ್ಯುಲೆನ್ಸ್‌ ಕರೆ ಮಾಡಿದರೆ ಅವುಗಳು ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಹೀಗಾಗಿ ಬಡಕುಟುಂಬಗಳು ತಮ್ಮಗೆ ಸಿಗುವ ತಳುವ ನೀರಿನಗಾಡಿಯ ಮೂಲಕ ಸಂಚಾರ ಆರಂಭಿಸಿದ್ದಾರೆ.

  ನೀರಿನಗಾಡಿಯಲ್ಲಿ ಪತಿಯನ್ನು ಕುರಿಸಿ ನಡೆದುಕೊಂಡು ಆಸ್ಪತ್ರೆಯವರಿಗೆ ಹೋಗಿ ಚಿಕಿತ್ಸೆ ಕೊಡಿಸಿದ್ದಾಳೆ. ಪತಿಯೇ ಪರ ದೇವರು ಎಂಬ ಮಾತು ಈ ಮಹಿಳೆ ಸಾಬೀತು ಮಾಡಿದ್ದಾಳೆ. ಖಾಸಗಿ ವಾಹನ ಸಿಗದೆ ಇದ್ರು ಪತಿಗೆ ಚಿಕಿತ್ಸೆ ನೀಡಿಸಬೇಕು ಎಂಬ ಛಲದಿಂದ ಐದು ಕಿಲೋಮೀಟರ್ ನಡೆದು ಚಿಕಿತ್ಸೆ ನೀಡಿಸಿರೋದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋವಿಂದಪ್ಪ ಕಡುಬಡತನ ಕುಟುಂಬಕ್ಕೆ ಸೇರಿದರಿಂದ ಲಾಕ್‌ ಡೌನ್‌ ಎಫೆಕ್ಟ್‌ ನಿಂದ ಆಸ್ಪತ್ರಗೆ ತೆರಳಲು ವಾಹನ ಸಿಗದೆ ಪರದಾಟ ನಡೆಸಿದ್ದಾನೆ. ಇಂತಹ ಬಡವರ ನೆರವಿಗೆ ಖಾಸಗಿ ವಾಹನದವರು ಆಸರೆಯಾಗಬೇಕಿದೆ. ಲಾಕ್ ಡೌನ್ ನಲ್ಲಿ ವಾಹನ ಸಿಗದೆ ರೋಗಿಗಳು ಪರದಾಡುತ್ತಿರೋವರಿಗೆ ಸಹಾಯ ಮಾಡಬೇಕಿದೆ.

  (ವರದಿ: ಸಂತೋಷ ಕೊಣ್ಣೂರ)
  Published by:Seema R
  First published: