ಬೆಂಗಳೂರು (ನ.30): ರಾಜಧಾನಿಯಲ್ಲಿ ಮತ್ತೆ ಅಪರಾಧಿ ಕೃತ್ಯಗಳು (Crime Story) ಹೆಚ್ಚುತ್ತಿದೆ. ಒಂದೊಂದು ಪ್ರಕರಣಗಳೂ ಕೂಡ ಬೆಂಗಳೂರಿಗರನ್ನು (Bengaluru) ಬೆಚ್ಚಿಬೀಳಿಸಿದೆ. ಡ್ರಾಪ್ (Drop) ಕೊಡುವ ನೆಪದಲ್ಲಿ ಮಹಿಳೆಯನ್ನು ಶಾಲಾ ಬಸ್ಸಿಗೆ ಹತ್ತಿಸಿಕೊಂಡು ಅತ್ಯಾಚಾರವೆಸಗಿರುವ (Rape) ಘಟನೆ ನಗರದ ನಾಗರಬಾವಿಯಲ್ಲಿ (Nagarabavi) ನಡೆದಿದೆ. ನಿನ್ನೆ (ನ.29) ಸಂಜೆ ಅತ್ಯಾಚಾರ ವೆಸಗಿದ ಕಾಮುಕ ಪರಾರಿಯಾಗಿದ್ದಾನೆ. ಈ ಸಂಬಂಧ ನಾಗರಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಬಸ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರ
ರಸ್ತೆಯಲ್ಲಿ ನಿಂತು ಮನೆಗೆ ಹೋಗಲು ಮಹಿಳೆ ಬಸ್ಗಾಗಿ ಕಾಯುತ್ತಿದ್ದರು. ಡ್ರಾಪ್ ಕೊಡುವುದಾಗಿ ಹೇಳಿ ಶಾಲಾ ಬಸ್ಗೆ ಮಹಿಳೆಯನ್ನ ಹತ್ತಿಸಿಕೊಂಡಿದ್ದ ಚಾಲಕ, ಬಳಿಕ ಶಾಲಾ ಬಸ್ನನ್ನು ನಾಗರಬಾವಿ ಸರ್ವಿಸ್ ರಸ್ತೆಯಲ್ಲಿ ಬಸ್ ನಿಲ್ಲಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಶಿವಕುಮಾರ್ ಎಂಬಾತನಿಂದ ಕೃತ್ಯ
ಖಾಸಗಿ ಶಾಲಾ ಬಸ್ ಚಾಲಕ ಶಿವಕುಮಾರ್ ಎಂಬ ಕಾಮುಕ ಪೈಶಾಚಿಕ ಕೃತ್ಯವೆಸಗಿದ್ದಾನೆ. ಅತ್ಯಾಚಾರ ಮಾಡಿ ಮಹಿಳೆಗೆ ಬೆದರಿಸಿ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಈ ವೇಳೆ ಮಹಿಳೆ ಬಸ್ನ ಫೋಟೋ ತೆಗೆದುಕೊಂಡಿದ್ದಾಳೆ.
ಪೊಲೀಸರಿಂದ ಆರೋಪಿ ಬಂಧನ
ಸಂತ್ರಸ್ತ ಮಹಿಳೆ ಮನೆಗೆ ಬಂದು ಮಗನಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಚಂದ್ರಲೇಔಟ್ ಪೊಲೀಸರು ಆರೋಪಿ ಚಾಲಕ ಶಿವಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.
ಬೈಕ್ ಬುಕ್ ಮಾಡಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿಯಲ್ಲೊಂದು ಪೈಶಾಚಿಕ ಕೃತ್ಯ ನಡೆದಿತ್ತು. ಕೇರಳ (Kerala) ಮೂಲದ ಯುವತಿ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮೂರು ದಿನಗಳಲ್ಲಿ ಆರೋಪಿಗಳನ್ನು (Accused) ಬಂಧಿಸಿದ್ದಾರೆ. ನವೆಂಬರ್ 25ರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಶುಕ್ರವಾರ ರಾತ್ರಿ ಬಿಟಿಎಂ ಲೇಔಟ್ (BTM Layout) ನಿಂದ ನೀಲಾದ್ರಿ ನಗರಕ್ಕೆ ರ್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಾರೆ.
ಮದ್ಯಪಾನ ಮಾಡಿದ್ದ ಯುವತಿ
ರ್ಯಾಪಿಡ್ ಬೈಕ್ (Rapido Bike) ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ನೀಲಾದ್ರಿ ನಗರ ತಲುಪುವ ಹೊತ್ತಿಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್ ಪಾಯಿಂಟ್ ತಲುಪಿಸದೇ ಸ್ನೇಹಿತನ ರೂಮ್ಗೆ ಕರೆದೊಯ್ದಿದ್ದಾನೆ.
ಸ್ನೇಹಿತನ ಜೊತೆ ಸೇರಿ ಅತ್ಯಾಚಾರ
ಬೈಕ್ ಸವಾರ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ನೀಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತನ ರೂಮ್ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ರ್ಯಾಪಿಡೋ ಬೈಕ್ ಸವಾರ ಮತ್ತು ಸ್ನೇಹಿತನಿಂದ ರೇಪ್ ಆಗಿದೆ.
ಇದನ್ನೂ ಓದಿ: Kalaburagi: ರೇಪ್ ಆಂಡ್ ಮರ್ಡರ್ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ
ಯುವತಿಗೆ ಬೆದರಿಕೆ ಹಾಕಿದ ಬೈಕ್ ಸವಾರ
ಪ್ರಜ್ಞೆ ಬಂದ ಬಳಿಕ ಯುವತಿಗೆ ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಕಳುಹಿಸಿದ್ದರು. ಘಟನೆ ಬಳಿಕ ಯುವತಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ