Supari Killers: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ತಮ್ಮನಿಗೆ ಮುಹೂರ್ತ, ಸುಪಾರಿ ಕೊಟ್ಟು ಕೊಲ್ಲಿಸಿದ ಅಕ್ಕಂದಿರು!

ನಾಗರಾಜ್ ಮಟಮಾರಿ ಹತ್ಯೆಯ ಹಿಂದೆ ಆತನ ಅಕ್ಕಂದಿರಾದ ಅನಿತಾ ಹಾಗೂ ಮೀನಾಕ್ಷಿ ಎಂಬುವರ ಕೈವಾಡ ಇರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಈ ಇಬ್ಬರು ಸಹೋದರಿಯರು ತಮ್ಮನ ಹತ್ಯೆಗೆ 50 ಸಾವಿರ ರೂಪಾಯಿ ಹಣ ಕೊಟ್ಟಿದ್ದರು ಎನ್ನಲಾಗಿದೆ.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

  • Share this:
ಕಲಬುರಗಿ: ರಕ್ಷಾ ಬಂಧನ (Raksha Bandhan) ಇನ್ನೇನು ಹತ್ತಿರದಲ್ಲೇ ಇದೆ. ರಕ್ಷಾ ಬಂಧನ ಅಂದರೆ ಸಹೋದರ (Brother), ಸಹೋದರಿಯರ (Sister) ಬಾಂಧವ್ಯವನ್ನು (Relationship) ಸಾರುವ ಹಬ್ಬ (Festival) ಇದು. ಸಹೋದರಿ ತನ್ನ ಸಹೋದರನಿಗೆ ರಾಖಿ (Rakhi) ಕಟ್ಟಿ, ಶುಭವಾಗಲಿ ಅಂತ ಹಾರೈಸುತ್ತಾಳೆ. ರಾಖಿ ಕಟ್ಟಿಸಿಕೊಂಡ ಸಹೋದರ ನಿನ್ನ ರಕ್ಷಣೆ ಮಾಡುತ್ತೇನೆ ಅಂತ ವಾಗ್ದಾನ ಮಾಡುತ್ತಾನೆ. ಆದರೆ ಕಲಬುರಗಿಯಲ್ಲಿ (Kalaburagi) ಇಂತಹ ಪವಿತ್ರವಾದ ಅಕ್ಕ, ತಮ್ಮನ ಸಂಬಂಧಕ್ಕೆ ಮಹಿಳೆಯರಿಬ್ಬರು ಮಸಿ ಎರಚಿದ್ದಾರೆ. ತನ್ನ ತಮ್ಮನನ್ನೇ ಸುಪಾರಿ (Supari) ಕೊಟ್ಟು ಕೊಲ್ಲಿಸಿದ್ದಾರೆ. ವಿಚಾರ ತಿಳಿದು ಇಡೀ ಕಲಬುರಗಿಗೆ ಕಲಬುರಗಿಯೇ ಬೆಚ್ಚಿ ಬಿದ್ದಿದೆ.

ಮಾರಕಾಸ್ತ್ರಗಳಿಂದ ಹೊಡೆದು ಕೊಲೆ

ಕಳೆದ ತಿಂಗಳು ಜುಲೈ 29ರಂದು ಕಲಬುರಗಿ ನಗರದ ಹೊರವಲಯದ ಅಳಂದ ರಸ್ತೆಯ ಕೆರೆಭೋಸ್​ಗಾ ಕ್ರಾಸ್ ಬಳಿಯ ಜಮೀನೊಂದರ ಬಳಿ ಯುವಕನೋರ್ವ ಶವ ಬಿದ್ದಿತ್ತು. ಆತನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು,  ನಂತರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಆತನನ್ನು ಬರ್ಬರವಾಗಿ ಕೊಂದಿದ್ದ ಹಂತಕರು, ಆತ ಪ್ರಾಣ ಬಿಡುತ್ತಲೇ ಅಲ್ಲಿಂದ ಎಸ್ಕೇಪ್ ಆಗಿದ್ದರು.

ಪೊಲೀಸರಿಂದ 6 ಮಂದಿ ಹಂತಕರ ಬಂಧನ

ಈ ಬಗ್ಗೆ ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅವಿನಾಶ್, ಆಸಿಫ್, ರೋಹಿತ್, ಮೋಸಿನ್ ಹಾಗೂ ಅನಿತಾ, ಮೀನಾಕ್ಷಿ ಎಂಬ ಇಬ್ಬರು ಮಹಿಳೆಯರು ಸೇರಿ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Covid 19: ಕರ್ನಾಟಕದಲ್ಲಿ ಹೆಚ್ಚಾಗುತ್ತಾ ಕೋವಿಡ್ ಅಬ್ಬರ? 7 ರಾಜ್ಯಗಳಿಗೆ ಕೇಂದ್ರದಿಂದ ಎಚ್ಚರಿಕೆ!

ಕೊಲೆಯಾದ ವ್ಯಕ್ತಿ ಯಾರು?

ಅಷ್ಟಕ್ಕೂ ಕೊಲೆಯಾಗಿದ್ದ ವ್ಯಕ್ತಿಯನ್ನು ಗಾಜಿಪುರ ಬಡಾವಣೆಯ ನಿವಾಸಿ ನಾಗರಾಜ್ ಮಟಮಾರಿ ಅಂತ ಗುರುತಿಸಲಾಗಿದೆ. ಆತನನ್ನು ಹಂತಕರು ಕೆರೆಭೋಸ್​ಗಾ ಕ್ರಾಸ್ ಬಳಿಯ ಜಮೀನೊಂದರ ಬಳಿ ಬರ್ಬರವಾಗಿ ಕೊಂದಿದ್ದರು.

ಹಂತಕರ ಪೈಕಿ ಮೃತನ ಅಕ್ಕಂದಿರೂ ಇದ್ದರು

ಹೌದು, ನಾಗರಾಜ್ ಮಟಮಾರಿ ಹತ್ಯೆಯ ಹಿಂದೆ ಆತನ ಅಕ್ಕಂದಿರಾದ ಅನಿತಾ ಹಾಗೂ ಮೀನಾಕ್ಷಿ ಎಂಬುವರ ಕೈವಾಡ ಇರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಈ ಇಬ್ಬರು ಸಹೋದರಿಯರು ತಮ್ಮನ ಹತ್ಯೆಗೆ 50 ಸಾವಿರ ರೂಪಾಯಿ ಹಣ ಕೊಟ್ಟಿದ್ದರು ಎನ್ನಲಾಗಿದೆ. ಇವರಿಂದ ಹಣ ಪಡೆದ ಸುಪಾರಿ ಕಿಲ್ಲರ್ ಗಳಾದ ಅವಿನಾಶ್, ಆಸಿಫ್, ರೋಹಿತ್, ಮೋಸಿನ್ ಸೇರಿದಂತೆ  ನಾಗರಾಜ್‌ನನ್ನು ಹತ್ಯೆ ಮಾಡಿದ್ದಾರೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ತಮ್ಮನ ಹತ್ಯೆ

ಹೌದು, ಕೊಲೆಯಾದ ನಾಗರಾಜ್ ಮಟಮಾರಿಯ ಸಹೋದರಿಯರು ಹಲವು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟಿದ್ದು, ಸಹೋದರ ನಾಗರಾಜ್ ಮತ್ತು ಅವರ ತಾಯಿಯೊಂದಿಗೆ ಕಲಬುರಗಿ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಸಹೋದರಿಯು ಅವಿನಾಶ್ ಎಂಬುವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಅದಕ್ಕಾಗಿ ಸಹೋದರ ನಾಗರಾಜ್ ಸಹೋದರಿಗೆ ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದನು ಎನ್ನಲಾಗಿದೆ. ನಾಗರಾಜ್‌ ಹೇಳುತ್ತಿದ್ದ ಬುದ್ದಿವಾದ, ಬೈಗುಳಗಳನ್ನು ಕೇಳಿ‌ಕೇಳಿ ಕೋಪಗೊಂಡಿದ್ದ ಸಹೋದರಿಯರು ನಾಗರಾಜನಿಗೆ ಒಂದು ಗತಿ ಕಾಣಿಸಬೇಕೆಂದು ಯೋಚಿಸಿ ರೌಡಿಶೀಟರ್​ ಕೂಡ ಆಗಿದ್ದ ಅವಿನಾಶನಿಗೆ 50 ಸಾವಿರ ರೂಪಾಯಿ ನೀಡಿ ಸಹೋದರನನ್ನು ಕೊಲೆ ಮಾಡಿಸು ಎಂದು ಸೂಚನೆ ನೀಡಿದ್ದಾರೆ. ಅದರಿಂದ ತಮ್ಮ ಸ್ನೇಹಿತರ ಜೊತೆ ಸೇರಿದ ಅವಿನಾಶ್, ನಾಗರಾಜ್‌ನನ್ನು ಕೊಂದು ಮುಗಿಸಿದ್ದಾನೆ.

ಇದನ್ನೂ ಓದಿ: Ex-MLA Car Accident: ಮಾಜಿ ಶಾಸಕ ಓಡಿಸುತ್ತಿದ್ದ BMW ಕಾರು ಭೀಕರ ಅಪಘಾತ!

ಆಟೋದಲ್ಲಿ ಶವ ತಂದು ಎಸೆದು ಹೋದ ಹಂತಕರು

ಸಹೋದರಿಯರು ನೀಡಿದ ಪ್ಲಾನ್‌ನಂತೆ ಅವಿನಾಶ್ ತನ್ನ ಗ್ಯಾಂಗ್ ಜೊತೆ ಸೇರಿಕೊಂಡು ನಾಗರಾಜ್ ಹತ್ಯೆಗೆ ಯೋಜನೆಯನ್ನು ರೂಪಿಸಿದ್ದ. ಸುಪಾರಿ ಕಿಲ್ಲರ್‌ಗಳು ನಾಗರಾಜ್‌ನನ್ನು ಬಿಯರ್ ಬಾಟಲಿ ಹಾಗೂ ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. ಆಟೋರಿಕ್ಷಾದಲ್ಲಿ ಶವವನ್ನು ನಗರದ ಹೊರವಲಯದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಮರುದಿನ, ಪೊಲೀಸರು ಶವವನ್ನು ಗುರುತಿಸಿ, ವರ ಸಹೋದರಿಯರು ಮತ್ತು ಇತರರಿಗೆ ಮಾಹಿತಿ ನೀಡಿದರು. ತನಿಖೆ ವೇಳೆ ಸುಪಾರಿ ಕಿಲ್ಲರ್‌ಗಳಿಗೆ ಸಹೋದರಿಯರು ಮಾಡಿದ ದೂರವಾಣಿ ಕರೆಗಳ ಜಾಡು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Published by:Annappa Achari
First published: