ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ; ಕುಟುಂಬದವರ ಸಾವಿಗೆ ಕಾರಣನಾದನೇ ಗಂಡ?

ಆಕೆಯ ಗಂಡ ಉಮೇಶ್​ ಮನೆ ಹೊರಗೆ ಮಲಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಕುಕನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

news18
Updated:June 18, 2019, 2:48 PM IST
ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ; ಕುಟುಂಬದವರ ಸಾವಿಗೆ ಕಾರಣನಾದನೇ ಗಂಡ?
ಸಾಂದರ್ಭಿಕ ಚಿತ್ರ
  • News18
  • Last Updated: June 18, 2019, 2:48 PM IST
  • Share this:
ಕೊಪ್ಪಳ,(ಜೂ.18): ಗೃಹಿಣಿಯೊಬ್ಬಳು ಮನನೊಂದು ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಡರಾತ್ರಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನಡೆದಿದೆ.

ಯಲ್ಲಮ್ಮ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅಕ್ಷತಾ(7), ಕಾವ್ಯ(4), ನಾಗರಾಜ್ (2) ಮೃತ ಮಕ್ಕಳು. ಯಲ್ಲಮ್ಮಳ ಗಂಡ ಉಮೇಶ್ ಬಾರಕೇರ​​ ಆಕೆಯ ಶೀಲ ಶಂಕಿಸಿ ದಿನನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಜೊತೆಗೆ ಆತ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಮನೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಗುರುವಿಗೆ ಶಿಷ್ಯನ ತಿರುಗೇಟು: ದೇವೇಗೌಡರ ವಿರುದ್ಧವೇ ಹೈಕಮಾಂಡ್​ಗೆ ದೂರು ನೀಡ್ತಾರಾ ಸಿದ್ದರಾಮಯ್ಯ?

ಗಂಡನ ಕಿರುಕುಳದಿಂದ ಬೇಸತ್ತ ಯಲ್ಲಮ್ಮ ತನ್ನ ಮೂವರು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯ ಮಗಳನ್ನು ನೀರಿನ ಕೊಳದಲ್ಲಿ ಮುಳುಗಿಸಿ, 2ನೇ ಮಗನನ್ನು ಬಕೆಟ್​​​ ನೀರಿನಲ್ಲಿ ಮುಳುಗಿಸಿ, 3ನೇ ಮಗಳನ್ನು ಪಾತ್ರೆ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಬಳಿಕ ಯಲ್ಲಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಗಂಡ ಉಮೇಶ್​ ಮನೆ ಹೊರಗೆ ಮಲಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಕುಕನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ