‘ಮಹಾನಟಿ’ (Mahanati) ಕೀರ್ತಿ ಸುರೇಶ್ (Keerthi Suresh) ಯಾರಿಗೆ ಗೊತ್ತಿಲ್ಲ ಹೇಳಿ! ತಮ್ಮ ಅಭಿನಯದಿಂದ (Acting) ಸಿನಿ ಪ್ರೇಕ್ಷಕರ ಹೃದಯ ಗೆದ್ದ ಕೀರ್ತಿ ಸುರೇಶ್, ತಮ್ಮ ಸೌಂದರ್ಯದಿಂದಲೂ (beauty) ಪಡ್ಡೆ ಹುಡುಗರ ನಿದ್ದೆ ಕದ್ದವರು! ಅಂತಹ ಕೀರ್ತಿ ಸುರೇಶ್, ಖುದ್ದು ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ (Facebook Friends Request) ಕಳಿಸಿ, ಚಾಟ್ (Chat) ಮಾಡೋಕೆ ಶುರು ಮಾಡಿದ್ರೆ ಆ ಹುಡುಗನ ಜೀವ ಅಂದ್ಹೆಂಗೆ ತಡ್ಕೋಬೇಕು ಹೇಳಿ. ಆದ್ರೆ ವಿಚಿತ್ರ ಅಂದ್ರೆ ಆ ಹುಡುಗನಿಗೆ ಅದು ಕೀರ್ತಿ ಸುರೇಶ್ ಫೋಟೋ ಅಂತ ಗೊತ್ತಾಗಿಲ್ಲ, ಚಾಟ್ ಮಾಡ್ತಿರೋ ಹುಡುಗಿಯೇ ಕೀರ್ತಿ ಸುರೇಶ್ ಅಷ್ಟು ಸುಂದರಿ ಅಂದುಕೊಂಡು ಮನಸ್ಸಲ್ಲೇ ಮಂಡಿಗೆ ತಿಂದಿದ್ದ! ಹೀಗೆ ಅವಳು ಆತನಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಳು, ಅವಳ ಫೇಸ್ ಬುಕ್ ಫೋಟೋ ನೋಡಿ ಅವಳೊಂದಿಗೆ ಮುಂದೆ ಚಾಟಿಂಗ್ ಮಾಡಲು ಕೂಡಾ ಆರಂಭಿಸಿದ. ಇವರ ಚಾಟಿಂಗ್ ಎಷ್ಟರ ಮಟ್ಟಿಗೆ ಮುಂದುವರೆಯಿತು ಎಂದರೆ ಮದುವೆಯಾಗುವ ಹಂತಕ್ಕೂ ಹೋಯಿತು! ಇಷ್ಟರಲ್ಲಿ ಆತನಿಂದ 40 ಲಕ್ಷ ಪಡೆದು ವಂಚಿಸಿದ್ದಾಳೆ! ವಿಚಾರಣೆ ವೇಳೆ ಆಕೆ ಹಲವು ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾಳೆ!
ವಿಜಯಪುರ ಹುಡುಗನಿಗೆ ದೋಖಾ!
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ ಎಂಬಾತ ಹೈದ್ರಾಬಾದ್ ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ, ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ.
ಆನ್ಲೈನ್ನಲ್ಲಿ ಪರಿಚಯ, ಪ್ರೀತಿ!
ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಅವಳ ಫೇಸ್ ಬುಕ್ ಡಿಪಿ ನೋಡಿ ಮಾರುಹೋಗಿದ್ದ. ಅಂದಹಾಗೆ ಅಲ್ಲಿ ಇದ್ದಿದ್ದು ನಟಿ ಕೀರ್ತಿ ಸುರೇಶ್ ಅವರ ಫೋಟೋ! ಈ ಹುಡುಗನಿಗೆ ಅದು ನಟಿ ಫೋಟೋ ಅಂತ ಗೊತ್ತಿರಲಿಲ್ಲ, ತನ್ನ ಹುಡುಗಿಯೇ ನಟಿಯಂತಿದ್ದಾಳೆ ಅಂತ ಸಂಭ್ರಮಿಸಿದ್ದ!
ಇದನ್ನೂ ಓದಿ: Bengaluru: ಬಿಜೆಪಿ ಮುಖಂಡನ ಪುತ್ರನಿಂದ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ; 15 ಮಂದಿ ವಿರುದ್ಧ ದೂರು
ಬೆತ್ತಲೆ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ
ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ನಗದು ಹಣ, ಒಂದು ಪ್ಲಾಟ್ ಸೇರಿದಂತೆ ಅವಳ ಓದಿಗಾಗಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಆದರೆ ಸುಮಾರು 40 ಲಕ್ಷ ದಷ್ಟು ಹಣ ಕಳಿಸಿದರೂ ಅವಳಿಗೆ ಆತ ಭೇಟಿ ಆಗಿರಲಿಲ್ಲ, ಮತ್ತೆ ಹಣ ಕೇಳಲು ಮುಂದಾದ ಆಕೆ ಈತ ಸ್ನಾನ ಮಾಡುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಅದನ್ನು ರಿಕಾರ್ಡ ಮಾಡಿಕೊಂಡಿದ್ದಳು.
ಯುವತಿ ವಿರುದ್ಧ ದೂರು
ಬಳಿಕ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೆಲ್ ಮಾಡಲು ಮುಂದಾದಳು. ಇದರಿಂದ ರೋಸಿ ಹೋದ ಯುವಕ ತನಗೆ ಆಗಿರುವ ಮೋಸದ ಕುರಿತು ದಿನಾಂಕ 15.11.2022 ರಂದು ದೂರು ಸಿಂದಗಿ ಠಾಣೆಯಲ್ಲಿ ದೂರು ನೀಡಿದ. ಅದರಲ್ಲಿ ಅವನಿಗಾದ ಮೋಸದ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಮೋಸ ಹೋಗಿರುವ ಯುವಕ ತನ್ನ ಮೊಬೈಲ್ ಮೂಲಕ ತನ್ನ ಅಕೌಂಟ್ ನಿಂದ ಫೋನ್ ಪೇ ಮಾಡಿರುವುದಾಗಿ ದೂರು ನೀಡಿದ್ದ...
ಆಕೆ ಕೀರ್ತಿ ಸುರೇಶ್ ಅಲ್ಲ, ಹಾಸನದ ಮಂಜುಳಾ!
ಈತ ದೂರು ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಆನಂದಕುಮಾರ, ವಿಶೇಷ ತಂಡವೊಂದನ್ನು ರಚಿಸಿ ಆರೋಪಿ ಮಂಜುಳಾಳನ್ನು ಬಂಧಿಸಿದ್ದಾರೆ. ಆಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಳ್ಳಿ ಗ್ರಾಮದವಳು. ಪೋಲಿಸರು ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಎಸ್ಕೇಪ್ ಆಗಿದ್ದಾನೆ. ಇನ್ನೂ ಈ ಮಂಜುಳಾಗೆ ಮಕ್ಕಳು ಸಹ ಇವೆಯಂತೆ. ಈಕೆ ನಟಿ ಕೀರ್ತಿ ಸುರೇಶ್ ಫೋಟೋವನ್ನೇ ತನ್ನ ಫೋಟೋ ಅಂತ ಆ ಯುವಕನನ್ನು ನಂಬಿಸಿ, ವಂಚಿಸಿದ್ದಾಳೆ.
ಇದನ್ನೂ ಓದಿ: Bengaluru: ಡ್ರಾಪ್ ಕೊಡುವ ನೆಪದಲ್ಲಿ ಶಾಲಾ ಬಸ್ನಲ್ಲೇ ಮಹಿಳೆ ಮೇಲೆ ಅತ್ಯಾಚಾರ!
ಯುವಕನ ಹಣದಲ್ಲಿ ಮಹಿಳೆಯ ಮಜಾ!
ಈತನ ಹಣದಲ್ಲಿ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಾಳೆ, ಜೊತೆಗೆ ಊರಲ್ಲಿ ಮನೆಯನ್ನು ಕೂಡಾ ಕಟ್ಟುತ್ತಿದ್ದಾಳೆ. ಇನ್ನೂ ಮಂಜುಳಾ ಈ ಮೋಸದಾಟಕ್ಕೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದು ಈಕೆಯ ಗಂಡ ಎನ್ನುವುದು ಇದೀಗ ಬೆಳಕಿಗೆ ಬಂದಿದೆ. ಸದ್ಯ ಆತ ಕೂಡಾ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.
(ವರದಿ: ಗುರುರಾಜ್, ನ್ಯೂಸ್ 18, ವಿಜಯಪುರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ