‘ಅಂತ’ ಸಿನಿಮಾ ದೃಶ್ಯ ನೆನಪಿಸುವ ಕ್ರೌರ್ಯ; ಎರಡನೇ ಗಂಡನ ಬರ್ಬರ ಕೊಲೆ; ಹೆಂಡತಿ ರಶ್ಮಿ ಬಂಧನ

ಗಂಡ ಸುಬ್ರಮಣ್ಯನ ಉಗುರು ಕಿತ್ತು ರಾಡ್ ನಿಂದ ಹಲ್ಲೆ ಮಾಡಿರುವ ಕಿರಾತಕರು ನಂತರ ಆತನನ್ನು ಕೊಳ್ಳೇಗಾಲದ ಮುಡಿಗುಂಡಂ ನಲ್ಲಿರುವ ಆತನ ಮನೆಗೆ ತಂದು ಬಿಟ್ಡು ಹೋಗಿದ್ದಾರೆ.

 ಕೊಲೆಯಾದ ಗಂಡ ಸುಬ್ರಮಣ್ಯ ಹಾಗೂ ಆರೋಪಿ ರಶ್ಮಿ

ಕೊಲೆಯಾದ ಗಂಡ ಸುಬ್ರಮಣ್ಯ ಹಾಗೂ ಆರೋಪಿ ರಶ್ಮಿ

  • Share this:
ಚಾಮರಾಜನಗರ( ಜ.28) : ಹಣಕಾಸಿನ ವ್ಯವಹಾರದಲ್ಲಿ ವಿವಾದ ಉಂಟಾಗಿ  ಸ್ವಂತ ಅಣ್ಣನ ಜೊತೆ ಸೇರಿ ಹೆಂಡತಿಯೊಬ್ಬಳು ತನ್ನ ಎರಡನೇ ಗಂಡನನ್ನೇ ಅಪಹರಿಸಿ ಚಿತ್ರ ಹಿಂಸೆ ನೀಡಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡಂ ನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಸಾಪ್ಟ್​​ವೇರ್​​ ಇಂಜಿನಿಯರ್ ಆಗಿದ್ದ ರಶ್ಮಿ ತನ್ನ ಮೊದಲ ಗಂಡನನ್ನು ಬಿಟ್ಟಿದ್ದಳು. ಬೆಂಗಳೂರಿನಲ್ಲಿ ಬ್ಯಾಂಕ್ ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಕೊಳ್ಳೇಗಾಲದ ಮುಡಿಗುಂಡಂ ನ ಸುಬ್ರಹ್ಮಣ್ಯ ನನ್ನು ಪ್ರೀತಿಸಿ ಮದುವೆಯಾಗಿ ನಾಲ್ಕು ವರ್ಷದಿಂದ ಒಟ್ಟಿಗೆ ಐಶಾರಾಮಿಯಾಗಿ ಜೀವಿಸುತ್ತಿದ್ದರು.

ಕಳೆದ ಒಂದು ವರ್ಷ ದ ಹಿಂದೆ ಸುಬ್ರಹ್ಮಣ್ಯನನ್ನು ತೊರೆದ ರಶ್ಮಿ ಮೊದಲ ಗಂಡನ ಜೊತೆ ಸೇರಿಕೊಂಡಿದ್ದಳು. ಜೊತೆಯಲ್ಲಿದ್ದಾಗ ತನ್ನ ಬಳಿ ಇದ್ದ ಲಕ್ಷಾಂತರ ಹಣ ಪಡೆದಿದ್ದು ಈ ಹಣವನ್ನು ವಾಪಸ್ ಕೊಡುವಂತೆ ಸುಬ್ರಮಣ್ಯ ಒತ್ತಾಯಿಸಿದ್ದಾಳೆ.

ಇದಕ್ಕೆ ಆತ ಒಪ್ಪದಿದ್ದಾಗ ಆತನನ್ನು ತನ್ನ ಅಣ್ಣ ರಾಕೇಶ್ ಹಾಗು ಆತನ ಸ್ನೇಹಿತರೊಡನೆ ಸೇರಿ ಸುಬ್ರಹ್ಮಣ್ಯ ನನ್ನು ಅಪಹರಿಸಿ ಐದು ದಿನಗಳ ಕಾಲ ಹಿಂಸೆ ನೀಡಿದ್ದಾರೆ. ಐದು ದಿನಗಳ ಕಾಲ ಗೃಹ ಬಂಧನದಲ್ಲಿಟ್ಟು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ

ಗಂಡ ಸುಬ್ರಮಣ್ಯನ ಉಗುರು ಕಿತ್ತು ರಾಡ್ ನಿಂದ ಹಲ್ಲೆ ಮಾಡಿರುವ ಕಿರಾತಕರು ನಂತರ ಆತನನ್ನು ಕೊಳ್ಳೇಗಾಲದ ಮುಡಿಗುಂಡಂ ನಲ್ಲಿರುವ ಆತನ ಮನೆಗೆ ತಂದು ಬಿಟ್ಡು ಹೋಗಿದ್ದಾರೆ.

ಹಲ್ಲೆಗೊಳಗಾಗಿ ಅಸ್ವಸ್ಥನಾಗಿದ್ದ ಸುಬ್ರಮಣ್ಯ ಮೂರು ದಿನಗಳ ಕಾಲ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತ ಪಟ್ಟಿದ್ದಾನೆ. ಇದಕ್ಕೂ ಮೊದಲು ಮೈಸೂರಿನ ವಿಜಯನಗರ ಪೋಲಿಸರ ಮುಂದೆ ರಶ್ಮಿ ತನಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ವಿವರ ನೀಡಿದ್ದಾರೆ.

ಹೆಂಡತಿ ರಶ್ಮಿ, ಸಹೋದರ ರಾಕೇಶ್, ಮುಡಿಗುಂಡದ ಪ್ರದೀಪ್, ರಾಕೇಶ್ ಪಡಗೂರು ವಿರುದ್ಧ ಪ್ರಕರಣ ದಾಖಲಾಗಿದ್ದು ಪತ್ನಿ ರಶ್ಮಿ ಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಚಟವೇ ಕೊಲೆಗೆ ಕಾರಣವಾಯ್ತಾ?

ಮೃತಪಟ್ಟ ಸುಬ್ರಹ್ಮಣ್ಯಗೆ ಕ್ರಿಕೆಟ್ ಬೆಟ್ಟಿಂಗ್ ಆಡುವ ಚಟವಿತ್ತು.  ಹೆಂಡತಿ ರಶ್ಮಿಯಿಂದ 50 ಲಕ್ಷ ಹಣವನ್ನು ಸಹ ಪಡೆದಿದ್ದ. ಬೆಟ್ಟಿಂಗ್ ನಲ್ಲಿ ಸೋತ ಹಣ ವಾಪಸ್ ಕೊಡಲು ಹಿಂದೇಟು ಹಾಕಿದ್ದ. ಇದರಿಂದ ಹೆಂಡತಿ ರಶ್ಮಿ ಹಾಗೂ ಸಹೋದರರಿಂದ ಹಣಕ್ಕಾಗಿ ಪೀಡಿಸುತ್ತಿದ್ದರು.

ಇದನ್ನೂ ಓದಿ : ಮಂತ್ರಿ ಸ್ಥಾನವೋ, ನಿಗಮ ಮಂಡಳಿಯೋ: ಕೊಟ್ಟ ಮಾತು ಉಳಿಸಿಕೊಳ್ಳಿ; ಮಹೇಶ್​ ಕುಮಟಳ್ಳಿ

 

 
First published: