ಜರ್ಮನ್​​ ಮೂಲದ ಮೋಸ್ಟ್​​​ ವಾಂಟೆಡ್​​ ಕ್ರಿಮಿನಲ್​​ನನ್ನು ಬಂಧಿಸಿದ ಕರ್ನಾಟಕ ಸಿಐಡಿ

ಸಿಐಡಿ ತಂಡಕ್ಕೆ ಅಲೆಕ್ಸಾಂಡರ್​​​​ ಬೆಂಗಳೂರು ದಕ್ಷಿಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹುಲಿಮಂಗಲ ಗ್ರಾಮದಲ್ಲಿ ತಂಗಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇರೆಗೆ ಕರ್ನಾಟಕ ಸಿಐಡಿ ಪೊಲೀಸರು ಈತನನ್ನು ಬಂಧಿಸಿದರು.

ಕರ್ನಾಟಕ ಸಿಐಡಿ

ಕರ್ನಾಟಕ ಸಿಐಡಿ

 • Share this:
  ಬೆಂಗಳೂರು(ಜೂ.16): ಜರ್ಮನ್​​ ಮೂಲದ ಮೋಸ್ಟ್ ವಾಂಟೆಡ್ ಕ್ರಿಮಿನಲ್​​ ಅಲೆಕ್ಸಾಂಡರ್ ಬ್ರುನೋ ಎಂಬಾತನನ್ನು ಕರ್ನಾಟಕದ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್(ಸಿಐಡಿ) ಅಧಿಕಾರಿಗಳು ಬಂಧಿಸಿದ್ಧಾರೆ. ಸಿಐಡಿ ವಿಭಾಗದ ಡಿಎಸ್​​ಪಿ ಬದ್ರಿನಾಥ್ ನೇತೃತ್ವದಲ್ಲಿ ಪೊಲೀಸ್​​ ಇನ್ಸ್​​ಪೆಕ್ಟರ್​ಗಳಾದ​​​ ಅಮರೀಶ್​​ ಗೌಡ, ಹರೀಶ್​​​ ಕುಮಾರ್​​ ಕೆ.ಎನ್​​, ನವೀನ್​​ ಕುಮಾರ್ ತಂಡ ಈ ಕ್ರಿಮಿನಲ್​​ನನ್ನು ಅರೆಸ್ಟ್​​ ಮಾಡಿದೆ.

  ​ಸದ್ಯ ​ಬಂಧಿತ ಅಲೆಕ್ಸಾಂಡರ್​​​ ಬ್ರನೋ ವಿರುದ್ಧ ಫಾರೀನರ್ಸ್ ಆ್ಯಕ್ಟ್​​ ಅಡಿಯಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್​​ ಕೇಸ್​​ ದಾಖಲಾಗಿದೆ. ಹೆಬ್ಬಗಾಡಿ ಠಾಣಾ ಪೊಲೀಸರು ಈಗ ಬ್ರನೋನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  ಅಲೆಕ್ಸಾಂಡರ್​​ ಬ್ರನೋ 2015ರಲ್ಲಿ ಓರ್ವ ವ್ಯಕ್ತಿಯನ್ನು ಕಿಡ್ನ್ಯಾಪ್​​ ಮಾಡಿದ್ದ. ಕಿಡ್ನ್ಯಾಪ್​​ ಮಾಡಿ ಸಿಕ್ಕಿಬಿದ್ದ ನಂತರ ಜರ್ಮನ್​​ನಿಂದ ಎಸ್ಕೇಪ್​​ ಆಗಿದ್ದ. ಹೀಗಾಗಿ ಇಂಟರ್‌ ಪೋಲ್‌ ರೆಡ್‌ ಈತನಿಗೆ ಕಾರ್ನರ್‌ ನೊಟೀಸ್‌ ಜಾರಿ ಮಾಡಿತ್ತು. ಈತನನ್ನು ಬಂಧಿಸಲು ಸಿಐಡಿ ಇಂಟರ್​​ಪೋಲ್​​ ಎಡಿಜಿಪಿ ಶ್ರೀ ಬಿ. ದಯಾನಂದ ನೇತೃತ್ವದಲ್ಲಿ ಪೊಲೀಸ್​ ಅಧಿಕಾರಿಗಳ ತಂಡವೊಂದನ್ನು ರಚಿಸಲಾಗಿತ್ತು.

  ಇದನ್ನೂ ಓದಿ: ಲಡಾಖ್​ನಲ್ಲಿ ಭಾರತದ ಸೇನೆ ಮೇಲೆ ಚೀನಾ ಗುಂಡಿನ ದಾಳಿ; ಓರ್ವ ಅಧಿಕಾರಿ, ಇಬ್ಬರು ಸೈನಿಕರ ಸಾವು

  ಸಿಐಡಿ ತಂಡಕ್ಕೆ ಅಲೆಕ್ಸಾಂಡರ್​​​​ ಬೆಂಗಳೂರು ದಕ್ಷಿಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹುಲಿಮಂಗಲ ಗ್ರಾಮದಲ್ಲಿ ತಂಗಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇರೆಗೆ ಕರ್ನಾಟಕ ಸಿಐಡಿ ಪೊಲೀಸರು ಈತನನ್ನು ಬಂಧಿಸಿದರು.

  ಇನ್ನು, ಸಿಐಡಿ ವಿಭಾಗದ ಡಿಎಸ್​​ಪಿ ಬದ್ರಿನಾಥ್ ನೇತೃತ್ವದ ತಂಡದ ಕಾರ್ಯಕ್ಕೆ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ ಡಿಜಿಪಿ ಮೆಚ್ಚುಗೆ ಸೂಚಿಸಿದ್ಧಾರೆ.
  First published: