ಕೆಸರು ಗದ್ದೆಯಾದ ರಸ್ತೆ : ಆಕ್ರೋಶಗೊಂಡ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ

ದೊಡ್ಡ ದೊಡ್ಡ ಗುಂಡಿಗಳೊಂದಿಗೆ ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ವಾಹನವಿರಲಿ ಪಾದಚಾರಿಗಳೂ ನಡೆದಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು

G Hareeshkumar | news18-kannada
Updated:September 13, 2019, 3:00 PM IST
ಕೆಸರು ಗದ್ದೆಯಾದ ರಸ್ತೆ : ಆಕ್ರೋಶಗೊಂಡ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ
ರಸ್ತೆಯಲ್ಲಿ ನಾಟಿ ಮಾಡುತ್ತಿರುವ ಗ್ರಾಮಸ್ಥರು
  • Share this:
ಹಾಸನ (ಸೆ. 13) : ರಸ್ತೆ ರಿಪೇರಿ ಮಾಡಿಸದಕ್ಕೆ ಅರಕಲಗೋಡು ತಾಲೂಕಿನ ಅಲ್ಲಾಪಟ್ಟಣದ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿನೂತನವಾಗಿ  ಪ್ರತಿಭಟನೆ ನಡೆಸಿದರು.

ರಸ್ತೆ ಸರಿ ಮಾಡಿಸಿ ಎಂದು ಹಲವು ಗ್ರಾಮದ ಜನರು ಬಾರಿ ಮನವಿ ಮಾಡಿದ್ರು ಅಧಿಕಾರಿಗಳು ಯಾವುದಕ್ಕೂ ಕೇರ್​ ಮಾಡುತ್ತಿರಲಿಲ್ಲ. ರಸ್ತೆಯ ತುಂಬೆಲ್ಲಾ ಗುಂಡಿಗಳದ್ದೇ ಕಾರುಬಾರು. ನಾಲ್ಕೈದು ಜನರು ಗುಂಡಿ ಬಿದ್ದ ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ನರಕ ದರ್ಶನ ದಿಂದ ಗ್ರಾಮದ ಜನರಿಗೆ ಸಾಕಾಗಿ ಹೋಗಿದೆ.

ಅಲ್ಲಾಪಟ್ಟಣದ ಗ್ರಾಮದಿಂದ  ಹೋಗುವ ಅರ್ಧ ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲವೆಂದು ದೂರಿದರು. ಕಳೆದ ಒಂದು ತಿಂಗಳಿಂದ ರಸ್ತೆ ಕೆಸರು ಗದ್ದೆಯಾಗಿದೆ. ಇದರಿಂದ ಗ್ರಾಮದ ಜನರು ಕೆಸರು ರಸ್ತೆಯಿಂದ ರೋಸಿ ಹೋಗಿ ರಸ್ತೆಯಲ್ಲಿ ನಾಟಿ ಮಾಡಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ : ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ

ದೊಡ್ಡ ದೊಡ್ಡ ಗುಂಡಿಗಳೊಂದಿಗೆ ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ವಾಹನವಿರಲಿ ಪಾದಚಾರಿಗಳೂ ನಡೆದಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ  ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading