• Home
  • »
  • News
  • »
  • state
  • »
  • ಬೇಡಿಕೆ ಈಡೇರಿಸದ ಆಡಳಿತದ ವಿರುದ್ಧ ಮತದಾನದ ಮೂಲಕ ಉತ್ತರ ನೀಡಿದ ಕುಗ್ರಾಮದ ಜನ

ಬೇಡಿಕೆ ಈಡೇರಿಸದ ಆಡಳಿತದ ವಿರುದ್ಧ ಮತದಾನದ ಮೂಲಕ ಉತ್ತರ ನೀಡಿದ ಕುಗ್ರಾಮದ ಜನ

ಸೇತುವೆ ಇಲ್ಲದೇ ಹಳ್ಳ ದಾಟುತ್ತಿರುವ ಜನರು

ಸೇತುವೆ ಇಲ್ಲದೇ ಹಳ್ಳ ದಾಟುತ್ತಿರುವ ಜನರು

  • Share this:

ಪುತ್ತೂರು(ಡಿಸೆಂಬರ್​. 31): ಭರವಸೆ ಈಡೇರಿಸದ ಪಂಚಾಯಿತಿ ವಿರುದ್ಧ ಮತದಾರರು ತಿರುಗಿ ಬಿದ್ದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಪಂಚಾಯಿತಿಯ ಒಂದನೇ ವಾರ್ಡ್ ನ ಎಲ್ಲಾ ಸ್ಥಾನಗಳೂ ಗ್ರಾಮ ಭಾರತ ತಂಡದ ಪಾಲಾಗಿದೆ. ಈ ವಾರ್ಡ್ ನ ನಾಲ್ಕೂ ಸ್ಥಾನಗಳೂ ನಿರಂತರವಾಗಿ ಬಿಜೆಪಿ ಬೆಂಬಲಿತರ ಪಾಲಾಗುತ್ತಿದ್ದು, ಈ ಬಾರಿ ಮಾತ್ರ ಈ ಎಲ್ಲಾ ವಾರ್ಡ್ ಗಳಲ್ಲಿ ಗ್ರಾಮ ಭಾರತ ತಂಡ ಜಯಗಳಿಸಿದ್ದು, ಬೇಡಿಕೆ ಈಡೇರಿಸದ ಪಂಚಾಯಿತಿ ವಿರುದ್ಧ ಈ ತಂಡ ತೊಡೆ ತಟ್ಟಿ ಜಯಭೇರಿ ಭಾರಿಸಿದೆ. ತಮ್ಮ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬರುವ ಜನ, ಅಧಿಕಾರಕ್ಕೆ ಬಂದ ಬಳಿಕ ನೀಡಿದ ಎಲ್ಲಾ ಭರವಸೆಗಳನ್ನು ಮರೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹೀಗೆ ಭರವಸೆಯ ಗೋಪುರವನ್ನೇ ಕಟ್ಟಿ ಕಳೆದ 35 ವರ್ಷಗಳಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ, ಸೇತುವೆಯ ನಿರ್ಮಾಣ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸದ ಆಡಳಿತದ ವಿರುದ್ಧ ಚುನಾವಣೆಯಲ್ಲಿ ತಾಕಕ್ಕು ತೋರಿಸುವ ಮೂಲಕ ಗ್ರಾಮಸ್ಥರು ಹೊಸ ಮುನ್ನುಡಿ ಬರೆದಿದ್ದಾರೆ.


ಈ ಹಿಂದೆ ಯಾವ ಬೇಡಿಕೆ ಈಡೇರಿಸದಿದ್ದರೂ, ಒಂದೇ ಪಕ್ಷದ ಕಡೆ ವಾಲುತ್ತಿದ್ದ ಈ ಗ್ರಾಮದ ಜನ ಈ ಬಾರಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಹುಟ್ಟಿಕೊಂಡ ಗ್ರಾಮ ಭಾರತ ಎನ್ನುವ ತಂಡದ ಜೊತೆ ನಿಂತಿದ್ದಾರೆ. ಗುತ್ತಿಗಾರು ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್ ನ ನಾಲ್ಕೂ ಸ್ಥಾನಗಳನ್ನು ಈ ತಂಡದ ಸದಸ್ಯರೇ ಗೆಲ್ಲುವ ಮೂಲಕ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಬೆಂಬಲಿತರಿಗೆ ಸೋಲಿನ ರುಚಿ ಕಾಣಿಸಿದ್ದಾರೆ.


ಬಿಜೆಪಿ ಪಕ್ಷದ ಭದ್ರಕೋಟೆಯಾಗಿರುವ ಈ ವಾರ್ಡ್ ನಲ್ಲಿ ಗ್ರಾಮ ಭಾರತ ತಂಡದ ಅಭ್ಯರ್ಥಿಗಳಾದ ಭರತ್ ಕೆ.ವಿ 517, ಲತಾ ಕುಮಾರಿ 558, ವಸಂತ ಮೊಗ್ರ 561 ಮತ್ತು ಶಾರದಾ ಎಂ.ಕೆ 596 ಮತಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.


ಇದನ್ನೂ ಓದಿ : ಗ್ರಾ.ಪಂ. ಚುನಾವಣೆ: ಮತ ಎಣಿಕೆ ವೇಳೆ ಆಘಾತಕ್ಕೊಳಗಾಗಿ ಸಾವಪ್ಪಿದ್ದ ಅಭ್ಯರ್ಥಿಗೆ ವಿಜಯಮಾಲೆ


ಈ ಭಾಗದ ಪ್ರಮುಖ ಸಮಸ್ಯೆಯಾದ ಬಳ್ಪ ಗುತ್ತಿಗಾರು ಸಂಪರ್ಕ ರಸ್ತೆಯ ಅಭಿವೃದ್ಧಿ, ಮೊಗ್ರ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಹಾಗೂ ನಿರಂತರ ಕಾಡುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಈ ಭಾಗದ ಜನ ನೀಡಿದ ಮನವಿ, ಮಾಡದ ಪ್ರತಿಭಟನೆಗಳಿಗೆ ಲೆಕ್ಕವಿಲ್ಲ.


ಪ್ರತಿಭಟನೆಗಳನ್ನು ನಡೆಸಿದ ಸಂದರ್ಭದಲ್ಲಿ ಈ ಭಾಗದ ಜನಪ್ರತಿನಿಧಿಗಳು ಇಲ್ಲಿನ ಗ್ರಾಮಸ್ಥರ ಪ್ರತಿಭಟನೆಯನ್ನು ರಾಜಕೀಯ ಗಿಮಿಕ್ ಎಂದು ಛೇಡಿಸಿದ್ದರು. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದ ಬಳಿಕ ಈ ಭಾಗದ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಮತದಾನದ ಮೂಲಕ ಹೊರ ಹಾಕಿರುವುದು ಕಂಡು ಬಂದಿದೆ.

Published by:G Hareeshkumar
First published: