Viral Video: ಕಚೇರಿಯಲ್ಲೇ ಪಂಚಾಯತ್ ಸದಸ್ಯ, ಮಹಿಳಾ ಪಿಡಿಒ ಕಿಸ್ಸಿಂಗ್! ಎಲ್ಲರ ಮೊಬೈಲ್‌ಗಳಲ್ಲೂ ಈಗ ಇವ್ರದ್ದೇ ವಿಡಿಯೋ
ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ಹಾಗೂ ಪಿಡಿಓ ನಡುವಿನ ಪಲ್ಲಂಗಡ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ತುಮಕೂರು: ಆತ ಗ್ರಾಮ ಪಂಚಾಯ್ತಿ ಸದಸ್ಯ (Gram Panchayat Member), ಜನರಿಂದ ನೇರವಾಗಿ ಆಯ್ಕೆಯಾಗಿ ಬಂದಿದ್ದು, ಜನರ ಸಂಕಷ್ಟ ಕೇಳಿ, ಅದನ್ನು ಪರಿಹರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವಾತ. ಆಕೆ ಮಹಿಳಾ ಪಿಡಿಒ (Lady PDO), ಗ್ರಾಮ ಪಂಚಾಯ್ತಿ ಆಡಳಿತ (Administration) ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿ (Lady Officer). ಆದರೆ ಅವರಿಬ್ಬರು ಸೇರಿ ಜವಾಬ್ದಾರಿ ಮರೆತು, ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ (Office) ಅಸಭ್ಯವಾಗಿ ವರ್ತಿಸುತ್ತಾ ಇದ್ದರಂತೆ. ಇದೀಗ ಅವರಿಬ್ಬರ ಪಲ್ಲಂಗ ಪುರಾಣದ ವಿಡಿಯೋ (Video) ಆ ಗ್ರಾಮದ ಎಲ್ಲರ ಮೊಬೈಲ್‌ಗಳಲ್ಲಿ (Mobile) ಓಡಾಡುತ್ತಿದೆ. ಇದನ್ನು ನೋಡಿ ಅಸಹ್ಯಪಟ್ಟುಕೊಂಡ ಜನ ಇಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಅಸಭ್ಯ ವರ್ತನೆ
ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ಹಾಗೂ ಪಿಡಿಓ ನಡುವಿನ ಪಲ್ಲಂಗಡ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಪಂಚಾಯ್ತಿ ಸದಸ್ಯ ಮತ್ತು ಮಹಿಳಾ ಪಿಡಿಒ ಇಬ್ಬರೂ ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಅಸಭ್ಯವಾಗಿ ವರ್ತಿಸಿದ್ದು, ಅವರ ಅಸಹ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚುಂಬನದ ದೃಶ್ಯಗಳು ವೈರಲ್
ಸಚಿವ ಮಾಧುಸ್ವಾಮಿ ಬೆಂಬಲಿಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ಪ್ರಸನ್ನ ಕುಮಾರ್, ಜೆಸಿ ಪುರ ಪಿಡಿಓ ಕೋಕಿಲಾ ಇಬ್ಬರು ಏಕಾಂತದಲ್ಲಿರುವ ಅಸಹ್ಯ ವಿಡಿಯೋ ಈಗ ಎಲ್ಲರ ಮೊಬೈಲ್‌ಗಳಲ್ಲಿ ಓಡಾಡುತ್ತಿದೆ. ಪ್ರಸನ್ನ ಕುಮಾರ್ ಪಿಡಿಒ ಕೋಕಿಲಾ ಬಳಿ ಪದೇ ಪದೇ ಹೋಗಿ ಚುಂಬಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಆ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಸದಸ್ಯ ಪ್ರಸನ್ನ ಕುಮಾರ್ ಪಿಡಿಓ ಕೋಕಿಲಾಗೆ ಕಿಸ್ ಕೊಟ್ಟಿದ್ದಾನೆ. ಆತ ಬಲವಂತವಾಗಿ ಪಿಡಿಓ ಕೋಕಿಲರನ್ನ ತಬ್ಬಿಕೊಂಡು ಮುದ್ದಾಡಿದ್ದಾನೆ ಎನ್ನಲಾಗಿದೆ. ಜೂನ್ 4 ರಂದು ನಡೆದ ಇಬ್ಬರ ನಡುವಿನ ಚುಂಬನದ ವಿಡಿಯೋ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಇಬ್ಬರ ನಡುವಿನ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಪಿಡಿಒ ವಿರುದ್ಧ ಭ್ರಷ್ಟಾಚಾರದ ಆರೋಪ
ಸದಸ್ಯನ ಜೊತೆ ಕಾಮ ಪುರಾಣದ ಜೊತೆಗೆ ಮಹಿಳಾ ಪಿಡಿಒ ಲಂಚ ಬಾಕತನದ ಆಡಿಯೋ ಕೂಡ ವೈರಲ್ ಆಗಿದೆ. ಕಚೇರಿ ನೌಕರರ ಸಂಬಳ ನೀಡಲು ಐದು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನನಗೆ 5000 ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ಸಹ ವೈರಲ್ ಆಗಿದೆ.
ಪಂಚಾಯ್ತಿ ಸದಸ್ಯ ಹಾಗೂ ಪಿಜಿಒ ಅಸಭ್ಯ ವರ್ತನೆಗೆ ಸಾರ್ವಜನಿಕರ ಆಕ್ರೋಶ
ಇನ್ನು ಇವರ ಚುಂಬನದ ಆಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಸದಸ್ಯತ್ವ ರದ್ದು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ