ವೈರಲ್​ ವಿಡಿಯೋ| ಬೇಡವೆಂದರೂ ಸಮುದ್ರಕ್ಕಿಳಿದ ಶಾಸಕ: ಅಲೆಯ ಹೊಡೆತಕ್ಕೆ ಬಿದ್ದವರ ಪಂಚೆಯೇ ಜಾರಿತು!

news18
Updated:October 10, 2018, 10:42 PM IST
ವೈರಲ್​ ವಿಡಿಯೋ| ಬೇಡವೆಂದರೂ ಸಮುದ್ರಕ್ಕಿಳಿದ ಶಾಸಕ: ಅಲೆಯ ಹೊಡೆತಕ್ಕೆ ಬಿದ್ದವರ ಪಂಚೆಯೇ ಜಾರಿತು!
news18
Updated: October 10, 2018, 10:42 PM IST
ನ್ಯೂಸ್​ 18 ಕನ್ನಡ

ಬೈಂದೂರು(ಅ.10): ಸೋಮವಾರದಂದು ಮಹಾಲಯ ಅಮವಾಸ್ಯೆ ಆಚರಣೆ ನಡೆದಿತ್ತು. ಅಂದು ಬಹುತೇಕ ಮಂದಿ ಶಿವನ ದೇವಾಲಯಗಳಲ್ಲಿ ಬೆಳಿಗ್ಗೆನಿಂದಲೇ ಪೂಜಾ ಪುನಸ್ಕಾರಗಳನ್ನು ನಡೆಸುತ್ತಾರೆ. ಅಮವಾಸ್ಯೆಯ ಜೊತೆಯಲ್ಲಿ ಪಿತೃಪಕ್ಷವೂ ಇರುವುದರಿಂದ ಬಹುತೇಕ ಮಂದಿ ಅನ್ನ ಸಂತರ್ಪಣೆಯನ್ನೂ ನಡೆಸುತ್ತಾರೆ. ಹೀಗೆ ವಿಭಿನ್ನ ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಆದರೀಗ ಮಹಾಲಯ ಅಮವಾಸ್ಯೆಯಂದು ಪುಣ್ಯಸ್ನಾನ ಮಾಡಲು ಸಮುದ್ರಕ್ಕಿಳಿದಿದ್ದ ಬೈಂದೂರು ಶಾಸಕರ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ವೈರಲ್​ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲೇನಿದೆ ಅಂತೀರಾ? ಇಲ್ಲಿದೆ ನೋಡಿ ವಿವರ

ಬೈಂದೂರಿನಲ್ಲಿ ಮಹಾಲಯ ಅಮಾವಾಸ್ಯೆಯಂದು ಬೈಂದೂರಿನ ಶಾಸಕ ಪುಣ್ಯಸ್ನಾನಕ್ಕೆಂದು ಸಮುದ್ರಕ್ಕಿಳಿದಿದ್ದರು. ಈ ವೇಳೆ ಜೊತೆಗಿದ್ದವರು ಮುಂದೆ ಹೋಗಬೇಡಿ ಆಳವಿದೆ ಎಂದರೂ ಕೇಳದ ಶಾಸಕರು ಸಮುದ್ರದಲ್ಲಿ ನಡೆದುಕೊಂಡು ಸಾಗಿದ್ದಾರೆ. ಅಷ್ಟರಲ್ಲೇ ಬಂದ ಸಮುದ್ರದ ಅಲೆಯ ಹೊಡೆತಕ್ಕೆ ಶಾಸಕ ಸುಕುಮಾರ ಶೆಟ್ಟಿ ಜಾರಿ ಬಿದ್ದಿದ್ದಾರೆ. ಇಷ್ಟೇ ಆಗಿದ್ದರೆ ವಿಡಿಯೋ ವೈರಲ್​ ಆಗುತ್ತಿರಲಿಲ್ಲವೇನೋ ಆದರೆ ಈ ಅಲೆಯ ರಭಸಕ್ಕೆ ಶಾಸಕರ ಪಂಚೆ ಜಾರಿ ಬಿದ್ದಿರುವುದೇ ಎಲ್ಲರ ಮುಖದಲ್ಲೂ ನಗು ಮೂಡಿಸುತ್ತಿದೆ.


ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ನೋಡಿ ವೀಕ್ಷಕರು ಹೊಣ್ಣೆ ಹುಣ್ಣಾಗುವಷ್ಟು ನಗುತ್ತಿದ್ದರೆ, ಮತ್ತೊಂದೆಡೆ ಯಾರ ಮಾತನ್ನೂ ಕೇಳದೆ ಮುಂದೆ ಸಾಗುತ್ತಿದ್ದ ಶಾಸಕರಿಗೆ ತಕ್ಕ ಶಾಸಅ್ತಿಯಾಗಿದೆ ಎನ್ನುತ್ತಿದ್ದಾರೆ.
First published:October 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...