ಮಂಗಳೂರು(ಜೂ.21): ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸಮುದ್ರಕ್ಕೆ ಉರುಳಿ ಬಿದ್ದಿರುವ ಘಟನೆ ನವಮಂಗಳೂರು ಬಂದರಿನ 14ನೇ ಬರ್ತ್ನಲ್ಲಿ ನಡೆದಿದೆ. ಟ್ರಕ್ನಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರೂ ಸಮುದ್ರದ ಪಾಲಾಗಿದ್ದಾರೆ. ಟ್ರಕ್ ಡ್ರೈವರ್ ರಾಜೇಸಾಬ(26) ಮೃತದೇಹ ಪತ್ತೆಯಾಗಿದೆ. ಆದರೆ ಕ್ಲೀನರ್ ಭೀಮಪ್ಪನ(22) ಮೃತದೇಹ ಇನ್ನೂ ಸಿಕಿಲ್ಲ. ಭೀಮಪ್ಪನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಟ್ರಕ್ ಸಮುದ್ರಕ್ಕೆ ಉರುಳಿ ಬಿದ್ದಾಗ ಖಾಲಿ ಇತ್ತು ಎಂದು ತಿಳಿದು ಬಂದಿದೆ. ಕಬ್ಬಿಣದ ಅದಿರನ್ನು ಹಡಗಿನಿಂದ ಸ್ಥಳಾಂತರಿಸಲು ಟ್ರಕ್ ಸಮುದ್ರದ ಬಳಿ ಬರುತ್ತಿತ್ತು ಎನ್ನಲಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ನಡೆದಿದೆ. KA- 22 C 8257 ನಂಬರ್ ನ ಡೆಲ್ಟಾ ಕಂಪನಿಯ ಟ್ರಕ್ ಇದಾಗಿದೆ. ಸಿ.ಐ.ಎಸ್.ಎಫ್ ಮತ್ತು ಗಸ್ತು ದೋಣಿಗಳಿಂದ ಭೀಮಪ್ಪನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಟ್ರಕ್ ಸಮುದ್ರಕ್ಕೆ ಉರುಳಿ ಬಿದ್ದಾಗ, ಅಲ್ಲೇ ಹಾದು ಹೋಗುತ್ತಿದ್ದ ಗಸ್ತು ದೋಣಿಯ ನಾವಿಕ ವಿಟಿಎಂಎಸ್ಗೆ ಮಾಹಿತಿ ನೀಡಿದರು. ಕೂಡಲೇ ವಿಟಿಎಂಎಸ್ ಸಿಸ್ಪ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿತು. ಸಿಐಎಸ್ಎಫ್ ಮತ್ತು ಗಸ್ತು ದೋಣಿಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆಗ ಟ್ರಕ್ನ ಡ್ರೈವರ್ ರಾಜೇಸಾಬ ಅವರು ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ರಾಜೇಸಾಬ ಮೃತಪಟ್ಟಿದ್ದರು.
ಇನ್ನೂ ಸಹ ಕ್ಲೀನರ್ ಮೃತದೇಹ ಸಿಕ್ಕಿಲ್ಲ. ಹೀಗಾಗಿ ರಕ್ಷಣಾ ಸಿಬ್ಬಂದಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ