Kodagu: ಕೊಡಗಿನಲ್ಲಿ ತ್ರಿಕೋನ ಪ್ರೇಮಕಥೆ, ಇಬ್ಬರಿಗೆ ಚಾಕು ಇರಿದ ಯುವಕ!

ಯಾವುದೇ ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕ ಆಕರ್ಷಣೆಯಿಂದ ಮೂಡುವ ಅದಮ್ಯ ಭಾವನೆಯೇ ಪ್ರೇಮ. ಇದು ಎರಡು ಮನಸ್ಸುಗಳನ್ನು ಬೆಸೆಯುವ ಭಾವಬಂಧ. ಆದರೆ ಇಲ್ಲೊಂದು ತ್ರಿಕೋನ ಪ್ರೇಮಕಥೆ ನಡೆದಿದ್ದು ರೊಚ್ಚಿಗೆದ್ದ ಮತ್ತೊಬ್ಬ ಪ್ರೇಮಿ ಯುವತಿಗೆ ಚಾಕು ಇರಿದಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೀತಿ ಎಂಥಹವರನ್ನು ಬದುಕಿಸುತ್ತೆ. ಅದೇ ಪ್ರೀತಿ (Love) ಹಳಿ ತಪ್ಪಿದಾಗ ಎಂಥವರನ್ನೂ ಸಾಯಿಸುತ್ತೆ. ಪ್ರೀತಿ-ಪ್ರೇಮಕ್ಕೆ ಅಂತಹುದೊಂದು ಶಕ್ತಿಯಿದೆ. ಸಿನಿಮಾಗಳಲ್ಲೂ (Cinema) ಪ್ರೇಮಕಥೆಗಳನ್ನು (Love story) ನಾವು ನೋಡಿರ್ತೇವೆ. ತ್ರಿಕೋನ (Triangle) ಪ್ರೇಮಕಥೆಗಳು ಕೂಡ ಬಂದಿದೆ. ನಿಜ ಜೀವನದಲ್ಲಿ ಒಂದಷ್ಟು ಪ್ರೇಮಕಥೆ ಸಕ್ಸಸ್ ಆದರೆ ಇನ್ನೊಂದಷ್ಟು ಪ್ರೇಮಕಥೆಗಳು ಫೇಲ್ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮದ ಸ್ವರೂಪವೇ ಬದಲಾಗಿದೆ. ತ್ರಿಕೋನ ಪ್ರೇಮಕಥೆಗಳು ಸಾಮಾನ್ಯವಾಗಿಬಿಟ್ಟಿದೆ. ಕೊಡಗಿನಲ್ಲಿ (Kodagu) ನಡೆದ ತ್ರಿಕೋನ ಪ್ರೇಮಕಥೆಯಿಂದ ರೊಚ್ಚಿಗೆದ್ದ ಯುವಕ ಇಬ್ಬರಿಗೆ ಚಾಕು (Attack) ಇರಿದಿದ್ದಾನೆ. ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲೇ ಘಟನೆ ನಡೆದಿದೆ. ಗಾಯಗೊಂಡವರು ಕಾಲೇಜು ವಿದ್ಯಾರ್ಥಿಗಳು (Collage student) ಎನ್ನಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಯಾವುದೇ ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕ ಆಕರ್ಷಣೆಯಿಂದ ಮೂಡುವ ಅದಮ್ಯ ಭಾವನೆಯೇ ಪ್ರೇಮ. ಇದು ಎರಡು ಮನಸ್ಸುಗಳನ್ನು ಬೆಸೆಯುವ ಭಾವಬಂಧ. ಆದರೆ ಇಲ್ಲೊಂದು ತ್ರಿಕೋನ ಪ್ರೇಮಕಥೆ ನಡೆದಿದ್ದು ರೊಚ್ಚಿಗೆದ್ದ ಮತ್ತೊಬ್ಬ ಪ್ರೇಮಿ ಯುವತಿಗೆ ಚಾಕು ಇರಿದಿದ್ದಾನೆ.

ಕೊಡಗಿನ ನಿಸರ್ಗಧಾಮದಲ್ಲೇ ಅಟ್ಯಾಕ್!

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕಾವೇರಿ ನಿಸರ್ಗಧಾಮದಲ್ಲಿ ಈ ಘಟನೆ ನಡೆದಿದೆ. ಯುವಕ ಮತ್ತು ಯುವತಿ ಕಾವೇರಿ ನಿಸರ್ಗಧಾಮಕ್ಕೆ ಜೋಡಿಯಾಗಿ ಬಂದಿದ್ದರು. ಇದೇ ವೇಳೆಗೆ ಸ್ಥಳಕ್ಕೆ ಬಂದ ಮತ್ತೊಬ್ಬ ಯುವಕ ಇಬ್ಬರಿಗೂ ಚಾಕು ಇರಿದಿದ್ದಾನೆ.

A triangle love story in Kodagu young man who stabbed two people
ಚಾಕು ಇರಿದ ಆರೋಪಿ


ಇದನ್ನೂ ಓದಿ: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

ಕಾಲೇಜು ವಿದ್ಯಾರ್ಥಿಗಳೆಂಬ ಮಾಹಿತಿ

ತ್ರಿಕೋನ ಪ್ರೇಮಕಥೆಯಿಂದ ಚಾಕು ಇರಿತಕ್ಕೊಳಗಾದ ಯುವಕ ಮತ್ತು ಯುವತಿಗೆ ಗಾಯವಾಗಿದೆ. ಚಾಕು ಇರಿತಕ್ಕೊಳಗಾಗಿ ಗಾಯಗೊಂಡ ಯುವಕ ಮತ್ತು ಯುವತಿ ಇಬ್ಬರೂ ಇಲ್ಲಿನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದೆ.

ಪೆಟ್ರೋಲ್ ಬಂಕ್ ಯುವಕನಿಂದ ಕೃತ್ಯ!

ಚಾಕು ಇರಿದ ಯುವಕ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುವ ವ್ಯಕ್ತಿ ಎನ್ನುವ ಮಾಹಿತಿ ಲಭ್ಯವಾಗಿದೆ. ಈತ ನಿಸರ್ಗಧಾಮಕ್ಕೆ ಬಂದು ಜೇಬಿನಲ್ಲಿ ಚಾಕು ಇರಿಸಿಕೊಂಡು ಹೋಗುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಸರ್ಗಧಾಮಲ್ಲಿ ತುಂಬಾ ಪ್ರವಾಸಿಗರು ಓಡಾಡುತ್ತಿದ್ದರೂ ಎಲ್ಲರೆದುರೇ ಯುವಕ ಈ ಕೃತ್ಯ ಎಸಗಿದ್ದಾನೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತಾನು ಹುಡುಗಿ ಅಂತ ನಂಬಿಸಿ ಉದ್ಯಮಿಗೆ ಮೋಸ, ಬಯಲಾಯ್ತು ನವನಟನ ನವರಂಗಿ ಆಟ!

ಬೆಂಗಳೂರಿನಲ್ಲಿ ವೃದ್ಧೆಯ ಬರ್ಬರ ಕೊಲೆ!

ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಪಿಯುಸಿ ವಿದ್ಯಾರ್ಥಿಯ ಬರ್ಬರ ಹತ್ಯೆಯಾಗಿತ್ತು. ಇದರ ಬೆನ್ನಲ್ಲೇ ಇಂದು ವೃದ್ಧೆಯೊಬ್ಬರ ಬರ್ಬರ ಹತ್ಯೆಯಾಗಿದೆ. ವೃದ್ಧೆಯ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈಯ್ಯಲಾಗಿದೆ. ಎಚ್ ಎಸ್ ಆರ್ ಲೇಔಟ್​​ನ​  ಫುಡ್ ಡೇಸ್ ಸರ್ಕಲ್ ಬಳಿ ಘಟನೆ ನಡೆದಿದೆ.

60 ವರ್ಷದ ಜಯಶ್ರೀ ಕೊಲೆಯಾದ ವೃದ್ಧೆ. ಜಯಶ್ರೀ ಮನೆಯಲ್ಲಿ ಒಂಟಿಯಾಗಿಯೇ ವಾಸಿಸುತ್ತಿದ್ದರು. ಇದನ್ನೆ ನೋಡಿಕೊಂಡಿದ್ದ ಆರೋಪಿಗಳು ಚಿನ್ನಾಭರಣಕ್ಕಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ತಡರಾತ್ರಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಎಚ್ ಎಸ್ ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳಿಗೆ ತಲಾಶ್ ಮುಂದುವರಿದಿದೆ.

ವೃದ್ಧೆಗೆ ಇಬ್ಬರು ಮಕ್ಕಳಿದ್ದು ಒಬ್ಬರು ಕೆನಡಾದಲ್ಲಿ ವಾಸಿಸ್ತಿದ್ದಾರೆ. ಮತ್ತೊಬ್ಬರು ಬೆಂಗಳೂರಿನಲ್ಲಿ ಇದ್ದಾರೆ. ಇದೀಗ ಆರೋಪಿಗಳ ಪತ್ತೆಗೆ 4 ತಂಡ ರಚಿಸಲಾಗಿದೆ.

ಬೆಂಗಳೂರಿನಲ್ಲಿ ಬುದ್ಧಿಮಾಂದ್ಯ ಬಾಲಕ ನಾಪತ್ತೆ

ಚಿಕಿತ್ಸೆಗಾಗಿ ದೂರದ ಒಡಿಶಾದಿಂದ ಬೆಂಗಳೂರಿಗೆ ಕರೆತಂದಿದ್ದ ಬುದ್ಧಿಮಾಂದ್ಯ ಬಾಲಕ ನಾಪತ್ತೆಯಾಗಿದ್ದಾನೆ. ಒಡಿಶಾ ಮೂಲದ ಪ್ರಸನ್ಜೀತ್ ದಾಸ್ (12) ನಾಪತ್ತೆಯಾದ ಬಾಲಕ. ನಿಮಾನ್ಸ್ನಲ್ಲಿ ಚಿಕಿತ್ಸೆಗಾಗಿ ಪೋಷಕರು ಬೆಂಗಳೂರಿಗೆ ಕರೆತಂದಿದ್ದರು.

ಮಗನಿಗಾಗಿ ಪೋಷಕರ ಅಲೆದಾಟ

ಆಗಸ್ಟ್ 9ರಂದು ಬೆಂಗಳೂರಿಗೆ ಬಂದಿದ್ದ ಪೋಷಕರು ಸಿದ್ದಾಪುರ ಠಾಣಾ ವ್ಯಾಪ್ತಿಯ ಎಸ್.ಎಸ್.ಲಾಡ್ಜ್ನಲ್ಲಿ ರೂಮ್ ಪಡೆದಿದ್ದರು. ಆದರೆ ನಿನ್ನೆ ಸಂಜೆ ರೂಮ್​​ನಿಂದ ಬಾಲಕ ಪ್ರಸನ್ಜೀತ್ ತಪ್ಪಿಸಿಕೊಂಡಿದ್ದಾನೆ. ಮಗನ ಪತ್ತೆಗಾಗಿ ಹೆತ್ತವರು ಅಲೆದಾಡುತ್ತಿದ್ದಾರೆ.
Published by:Thara Kemmara
First published: