ಚಿಕ್ಕಮಗಳೂರು(ನ.21): 30 ನಿಮಿಷಗಳ ಕಾಲ ಪ್ರವಾಸಿಗರಿಗೆ ವ್ಯಾಘ್ರ ವಿಭಿನ್ನವಾಗಿ ದರ್ಶನ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಪ್ರವಾಸಿಗರಿಗೆ ವ್ಯಾಘ್ರ ಮನಮೋಹಕವಾಗಿ ದರ್ಶನ ನೀಡಿದ್ದು, ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಹುಲಿರಾಯ ಪ್ರವಾಸಿಗರಿಗೆ ಸುಮಾರು ಮೂವತ್ತು ನಿಮಿಷಗಳ ಕಾಲ ದರ್ಶನ ನೀಡಿದ್ದಾನೆ. ಸಫಾರಿಗೆಂದು ನಿನ್ನೆ ಲಕ್ಕವಳ್ಳಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಗಳೂರಿನಿಂದ ಪ್ರವಾಸಿಗರು ಆಗಮಿಸಿದ್ದರು. ಈ ವೇಳೆ ಅರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಅರಣ್ಯ ರಸ್ತೆಯ ಮಧ್ಯೆ ಮುರಿದು ಬಿದ್ದಿದ್ದ ದೊಡ್ಡ ಮರದ ದಿಣ್ಣೆಯ ಮೇಲೆ ಹುಲಿರಾಯ ಆರಾಮಾಗಿ ಮಲಗಿದ್ದ. ಇದನ್ನು ಕಣ್ಣಾರೆ ಕಂಡ ಪ್ರವಾಸಿಗರು ಪುಳಕಿತಗೊಂಡಿದ್ದಾರೆ.
ಹುಲಿರಾಯ ಈ ರೀತಿ ದರ್ಶನ ಕೊಡೋದು ತುಂಬಾ ವಿರಳ. ಅಷ್ಟೆ ಅಲ್ಲದೇ, ಸಾಮಾನ್ಯವಾಗಿ ಹುಲಿಗಳು ಅರಣ್ಯದಲ್ಲಿ ಜನಸಾಮಾನ್ಯರ ಕಣ್ಣಿಗೆ ಬೀಳುವುದಿಲ್ಲ. ಬಿದ್ದರೂ ತೀರಾ ಕಡಿಮೆ. ಮನುಷ್ಯರನ್ನು ಕಂಡರೆ ಕೂಡಲೇ ಅರಣ್ಯ ಸೇರುತ್ತವೆ. ಆದರೆ ಈ ಗಂಡು ಹುಲಿರಾಯ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಕೂತಲ್ಲೇ ಕೂತು ಎಷ್ಟು ಬೇಕಾದ್ರು ನೋಡಿಕೊಳ್ಳಿ ಎಂದು ಪೋಸ್ ನೀಡಿದ್ದಾನೆ.
ಡೊನಾಲ್ಡ್ ಟ್ರಂಪ್ ಮಗನಿಗೆ ಕೊರೋನಾ ಸೋಂಕು; ಕ್ವಾರಂಟೈನ್ ಆದ ಟ್ರಂಪ್ ಜೂನಿಯರ್
ಪ್ರವಾಸಿಗರನ್ನ ಕಂಡರೂ ಎಲ್ಲೂ ಹೋಗದೆ ಕುಳಿತಲ್ಲೇ ಕೂತ ವ್ಯಾಘ್ರ ತನ್ನ ಗಾಂಭೀರ್ಯತೆಯನ್ನು ಪ್ರದರ್ಶಿಸಿದ್ದಾನೆ. ಹುಲಿಯನ್ನ ಕಂಡು ಸಫಾರಿಗೆ ಹೋದವರು ಸೂಪರ್ಬ್ ಎಂದು ಸಂತೋಷಗೊಂಡಿದ್ದಾರೆ.
ಇದೇ ವೇಳೆ ಹುಲಿರಾಯನ ಬಗೆ-ಬಗೆ ಫೋಟೋ ಹೊಡೆದುಕೊಂಡು ಸಂಭ್ರಮಿಸಿದ್ದಾರೆ. ಜೊತೆಗೆ, ಸಫಾರಿಯ ಕ್ಷಣಗಳನ್ನು ಅರಣ್ಯದ ಮಧ್ಯೆ ಕಳೆಯುವುದರ ಜೊತೆ ಪ್ರವಾಸಕ್ಕೆ ಬಂದದ್ದು ಸಾರ್ಥಕವಾಯಿತು ಎಂದು ಸಂತೋಷದಿಂದ ಹಿಂದಿರುಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ