ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಡದೇ ಕಾಡುತ್ತಿವೆ ಅನಾಮದೇಯ ಪತ್ರಗಳು..!

ಮುರುಘಾಮಠದ ಪೀಠತ್ಯಾಗ ಮಾಡಿದ ಹಳೆದ ಸ್ವಾಮಿಜಿ ಶಿವಯೋಗಿ ಹೆಸರಲ್ಲಿ ಮತ್ತೆ ಅನಾಮದೇಯ ಪತ್ರಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಈ ಅನಾಮದೇಯ ಪತ್ರಗಳು ಪ್ರಾರಂಭವಾಗಿವೆ

G Hareeshkumar | news18
Updated:February 11, 2019, 9:57 PM IST
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಡದೇ ಕಾಡುತ್ತಿವೆ ಅನಾಮದೇಯ ಪತ್ರಗಳು..!
ಸಾಂದರ್ಭಿಕ ಚಿತ್ರ
  • News18
  • Last Updated: February 11, 2019, 9:57 PM IST
  • Share this:
 - ಮಂಜುನಾಥ್ ಯಡಳ್ಳಿ

ಧಾರವಾಡ (ಫೆ.11) : ಚುನಾವಣೆ ಹತ್ತಿರವಾಗುತ್ತಿದ್ದಂತೆ ಅನಾಮದೇಯ ಪತ್ರಗಳು ಜಿಲ್ಲೆಯಲ್ಲಿ ಹರಿದಾಡಲು ಪ್ರಾರಂಭವಾಗುತ್ತವೆ. ಆದರೆ ಈ ಪತ್ರಗಳು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಡದ ನಂಟು ಎಂಬಂತೆ ಇದೆ. ಒಂದಲ್ಲ ಒಂದು ರೀತಿಯಲ್ಲಿ ಮಾಜಿ ಸಚಿವರ ಹೆಸರು ತಳುಕು ಹಾಕಿಕೊಳ್ಳುತ್ತವೆ.

ಧಾರವಾಡ ಜಿಲ್ಲೆಯಲ್ಲಿ ಅನಮಾದೇಯ ಪತ್ರಗಳ ಹಾವಳಿ ಇಂದು ನಿನ್ನೆಯದಲ್ಲ, ಇದು ಕಳೆದ ನಾಲ್ಕು-ಐದು ವರ್ಷಗಳಿಂದ ನಡೆಯುತ್ತ ಬಂದಿರುವುದು. ಆದರೆ ಈ ಅನಾಮದೇಯ ಪತ್ರಗಳು ಒಂದಲ್ಲ ಒಂದು ಅವಾಂತರವನ್ನ ಸೃಷ್ಠಿ ಮಾಡುತ್ತಲ್ಲೇ ಬಂದಿವೆ. ಈ ಅನಾಮದೇಯ ಪತ್ರಗಳ ಬಗ್ಗೆ ಯಾರು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.

 ಯೋಗೇಶ ಗೌಡ ಕುಟುಂಬಕ್ಕೆ ಬೆದರಿಕೆ ಪತ್ರಗಳು

ಅನಾಮದೇಯ ಪತ್ರ


ಕಳೆದ ಒಂದು ವರ್ಷದಿಂದ ಈ ಅನಾಮದೇಯ ಪತ್ರ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸುತ್ತ ಸುತ್ತುತ್ತಿವೆ. ಮೊದಲು ಮಾಜಿ ಜಿಪಂ ಸದಸ್ಯ ಯೋಗಿಶಗೌಡ ಅವರ ಹತ್ಯೆ ಬಳಿಕ ಅವರ ಕುಟುಂಬಕ್ಕೆ ಬೆದರಿಕೆ ಪತ್ರಗಳು ಮಾಜಿ  ಸಚಿವ ವಿನಯ್ ಕುಲಕರ್ಣಿ ಅವರ ಹೆಸರಲ್ಲಿ ಹೊರಡಲು ಪ್ರಾರಂಭಿಸಿದವು. ಈ ಬಗ್ಗೆ ಮೃತ ಯೋಗಿಶ್ ಗೌಡ ಅವರ ಪತ್ನಿ ಮಲ್ಲಮ್ಮ ಗೌಡರ್ ಧಾರವಾಡದ ಡಿಎಸ್.ಪಿ ಅವರಿಗೆ ಲಿಖಿತ ದೂರು ನೀಡಿ ಅನಾಮದೇಯ ಪತ್ರಗಳನ್ನು ಬರೆಯುವರ ಪತ್ತೆಗೆ ಒತ್ತಾಯ ಮಾಡಿದ್ದಾರೆ.

ಅನಾಮದೇಯ ಪತ್ರ
ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ಹಾಗೂ ಅವರ ಹೆಸರನ್ನು ಹಾಳು ಮಾಡಲು ಬಳಕೆ ಮಾಡಿ ಕೊಳ್ಳಲಾಗಿತ್ತು. ಇದನ್ನ ಅರಿತ ವಿನಯ ಕುಲಕರ್ಣಿ ಅನಾಮದೇಯ ಪತ್ರಗಳು ಎಲ್ಲಿಂದ, ಯಾರು ಬರೆಯುತ್ತಾರೆ ಎಂದು ಪತ್ತೆ ಹಚ್ಚುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಗೆ ಮೌಖಿಕವಾಗಿ ಹೇಳಿದರು.

ಅನಾಮದೇಯ ಪತ್ರಗಳ ಹಿಂದೆ ಬಿಜೆಪಿಯವರ ಕೈವಾಡ

ಈಗ ಮುರುಘಾಮಠದ ಪೀಠತ್ಯಾಗ ಮಾಡಿದ ಹಳೆದ ಸ್ವಾಮಿಜಿ ಶಿವಯೋಗಿ ಹೆಸರಲ್ಲಿ ಮತ್ತೆ ಅನಾಮದೇಯ ಪತ್ರಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಈ ಅನಾಮದೇಯ ಪತ್ರಗಳು ಪ್ರಾರಂಭವಾಗಿವೆ. ಈ ಬಗ್ಗೆ ಸ್ವತಃ ನಾನೇ ದೂರು ನೀಡಿ ತನಿಖೆ ಮಾಡುವಂತೆ ಒತ್ತಾಯ ಮಾಡುತ್ತೆನೆ, ಆದರೆ ಈ ಅನಾಮದೇಯ ಪತ್ರಗಳ ಹಿಂದೆ ಬಿಜೆಪಿಯವರ ಕೈವಾಡ ಇದೆ ಎಂದು ಮಾಜಿ ಸಚಿವ ಸಚಿವರು ಆರೋಪ ಮಾಡುತ್ತಾರೆ.

ಅನಾಮದೇಯ ಪತ್ರ


ಈಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ತೇಜೊವದೆ ಮಾಡಲು ಕೆಲವರು ಅನಾಮದೆಯ ಪತ್ರ ಬರೆಯುತ್ತಿದ್ದಾರೆ. ಇದಕ್ಕೆ ಕಾರಣ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದಾರೆ. ಧಾರವಾಡದ ಮುರುಘಾಮಠದ ಪೀಠತ್ಯಾಗ ಮಾಡಿದ ಹಳೆಯ ಶಿವಯೋಗಿ ಸ್ವಾಮೀಜಿ ಹೆಸರಲ್ಲಿ ಗೂಂಡಾ ರಾಜಕಾರಣಿ ವಿನಯ್ ಕುಲಕರ್ಣಿ ಹಾಗೂ ಅವರ ಬೆಂಬಲಿಗರು ಮಠದಿಂದ ಹೊರಹಾಕಿದ್ದಾರೆ ಎಂದು ಅನಾಮದೇಯ ಪತ್ರ ಬರೆಯಲಾಗಿದೆ.

ಇದನ್ನೂ ಓದಿ :  ಅವನ್ಯಾವನೋ ರೇಣುಕಾಚಾರ್ಯ 420, ಅವನ ಮಾತಿಗೆಲ್ಲಾ ನಾನ್ಯಾಕೆ ಉತ್ತರಿಸಲಿ ; ಸಚಿವ ರೇವಣ್ಣ

ಈ ಅನಾಮದೇಯ ಪತ್ರಗಳನ್ನು ಯಾರು ಬರೆಯುತ್ತಿದ್ದಾರೆ ಎಂಬುದನ್ನ ಪತ್ತೆ ಹಚ್ಚಲು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಧಾರವಾಡ ನಗರ ಪೊಲೀಸ ಠಾಣೆಯಲ್ಲಿ ದೂರು ನೀಡಲಾಗಿದೆ.

ಏನೇ ಆಗಲಿ ಅನಾಮದೇಯ ಪತ್ರಗಳ ಹಾವಳಿಯಿಂದ ನಗರದ ಜನರಲ್ಲಿ ಹಲವು ಅನುಮಾನಗಳು ಹಾಗೂ ಆತಂಕವನ್ನು ಸಹ ಮೂಡಿಸಿವೆ. ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅನಾಮದೇಯ ಪತ್ರಗಳನ್ನ ಯಾರು ಬರೆಯುತ್ತಿದ್ದಾರೆ ಎಂಬುದನ್ನ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ತಲೆನೋವಾಗಿದ್ದು ಮಾತ್ರ ಸತ್ಯ.

First published: February 11, 2019, 9:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading