• Home
  • »
  • News
  • »
  • state
  • »
  • Thief: ಮಹಿಳೆಯರಂತೆ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬರ್ತಾನೆ, ಆಮೇಲೆ ಮಾಡೋದು ಖತರ್ನಾಕ್ ಕೆಲ್ಸ!

Thief: ಮಹಿಳೆಯರಂತೆ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬರ್ತಾನೆ, ಆಮೇಲೆ ಮಾಡೋದು ಖತರ್ನಾಕ್ ಕೆಲ್ಸ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಲ್ಲೊಬ್ಬ ಭೂಪ ಕಳ್ಳತನಕ್ಕೆ ಆರಿಸಿಕೊಂಡಿದ್ದು ಮಹಿಳೆಯರ ಡ್ರೆಸ್! ಹೌದು, ನಿಮಗೆ ಆಶ್ಚರ್ಯ ಆಗಬಹುದು. ಈ ಕಳ್ಳ ಲೇಡಿಸ್ ತರ ಡ್ರೆಸ್ ಮಾಡಿಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದ. ಬಳಿಕ ಅಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದ.

  • News18 Kannada
  • Last Updated :
  • Kodagu | Madikeri
  • Share this:

ಕೊಡಗು: ಜಗತ್ತಿನಲ್ಲಿ ಎಂತೆಂಥಾ ಚಿತ್ರ ವಿಚಿತ್ರ ಕಳ್ಳರು (Thief) ಇರುತ್ತಾರಪ್ಪ. ಕಳ್ಳತನಕ್ಕೆ (Theft) ಅಂತಾನೆೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಮಾನದಲ್ಲಿ (Plane) ಬರುವವರು, ರೈಲು (Rail), ಬಸ್ಸಿನಲ್ಲಿ (Bus) ಬರುವವರು, ಕಾರು (Car), ಬೈಕ್‌ನಲ್ಲಿ (Bike) ಬಂದು ಕಳ್ಳತನ ಮಾಡುವವರ ಬಗ್ಗೆ ಗೊತ್ತು. ಮೈಗೆ ಎಣ್ಣೆ (Oil) ಹಚ್ಚಿಕೊಂಡು ಹೋಗಿ, ಹಿಡಿಯಲು ಬಂದಾಗ ತಪ್ಪಿಸಿಕೊಂಡು ಬರುವ ಖದೀಮರೂ ಇದ್ದಾರೆ. ಆದರೆ ಇಲ್ಲೊಬ್ಬ ಭೂಪ ಕಳ್ಳತನಕ್ಕೆ ಆರಿಸಿಕೊಂಡಿದ್ದು ಮಹಿಳೆಯರ ಡ್ರೆಸ್ (Ladies Dress). ಹೌದು, ನಿಮಗೆ ಆಶ್ಚರ್ಯ ಆಗಬಹುದು. ಈ ಕಳ್ಳ ಲೇಡಿಸ್ ತರ ಡ್ರೆಸ್ ಮಾಡಿಕೊಂಡು ಪೂಜೆಗೆ (Worship) ಹೋಗುವವರಂತೆ ದೇವಸ್ಥಾನಕ್ಕೆ (Temple) ಹೋಗ್ತಿದ್ದ. ಬಳಿಕ ಅಲ್ಲಿ ಕಳ್ಳತನ ಮಾಡಿ ಎಸ್ಕೇಪ್ (Escape) ಆಗ್ತಿದ್ದ. ಇದೀಗ ಈ ಐನಾತಿ ಕಳ್ಳ ಪೊಲೀಸರ (Police) ಬಲೆಗೆ ಬಿದ್ದಿದ್ದಾನೆ.


ಮಡಿಕೇರಿಯಲ್ಲಿ ಸಿಕ್ಕಿಬಿದ್ದ ಐನಾತಿ ಚೋರ


ವಿಚಿತ್ರ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕೂಡುಮಂಗಳೂರು ನಿವಾಸಿ ಮಹಮ್ಮದ್ ಗೌಸ್ ಎಂದು ಗುರುತಿಸಲಾಗಿದೆ.


ದೇಗುಲದಲ್ಲಿ ಕಳ್ಳತನ ಮಾಡಿದ್ದ ಮಹಮ್ಮದ್ ಗೌಸ್


ಈ ಮಹಮ್ಮದ್ ಗೌಸ್ ಕಳೆದ ನಾಲ್ಕು ದಿನಗಳ ಹಿಂದೆ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿರುವ ಕಾಣಿಕೆ ಡಬ್ಬವನ್ನು ಹಾರೆಯಿಂದ ಮೀಟಿ ಹಣ ಕಳವು ಮಾಡಿದ್ದ. ಇದು ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಸುಳಿವಿನ‌ ಮೇರೆಗೆ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ತಂಡ ಬಂಧಿಸಿದೆ.


ಇದನ್ನೂ ಓದಿ: Anekal: ಒಂದೇ ಬಟ್ಟೆ ಹಾಕ್ತಾರೆ, ಕೈಯಲ್ಲಿ ಆಯುಧ ಹಿಡಿದಿರ್ತಾರೆ; ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್


ಮಹಿಳೆಯರ ಡ್ರೆಸ್ ತೊಟ್ಟು ದೇಗುಲಕ್ಕೆ ಹೋಗುತ್ತಿದ್ದ ಖದೀಮ


ಈ ಕಳ್ಳ ಮಹಮ್ಮದ್ ಗೌಸ್ ಕಳ್ಳತನಕ್ಕಾಗಿ ಆರಿಸಿಕೊಂಡಿದ್ದು ಮಹಿಳೆಯರ ಡ್ರೆಸ್. ಹೌದು, ತನ್ನ ವೇಷ ಮರೆಸಿಕೊಳ್ಳಲು ಈತ ಮಹಿಳೆಯರಂತೆ ಡ್ರೆಸ್ ತೊಟ್ಟು ಶ್ರೀ ಉದ್ಭವ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿದ್ದಾನೆ. ಬಳಿಕ ಅಲ್ಲಿ ತಾನು ತಂದಿದ್ದ ಕಬ್ಬಿಣದ ಹಾರೆಯಿಂದ ಕಾಣಿಕೆ ಡಬ್ಬಿ ಮೀಟಿ, ಕಾಣಿಕೆ ಹಣ ಕದ್ದಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇವೆಲ್ಲ ದೃಶ್ಯಗಳೂ ದೇಗುಲದಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಆರೋಪಿ ವಿರುದ್ಧ ಈ ಮೊದಲೇ ನಾಲ್ಕು ಪ್ರಕರಣ ದಾಖಲು


ಆರೋಪಿ ಮಹಮ್ಮದ್ ಗೌಸ್ ವಿರುದ್ಧ ಈ ಮೊದಲೇ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮತ್ತು ನಗರ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇದೀಗ ಪೊಲೀಸರಿಂದ ಬಂಧಿತನ ವಿಚಾರಣೆ ನಡೆಯುತ್ತಿದೆ.


ಫಿಲ್ಮಿ ಸ್ಟೈಲ್‌ನಲ್ಲಿ ಕಳ್ಳರ ಬಂಧನ


ಮತ್ತೊಂದೆಡೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮೂಗೂರು ತ್ರಿಪುರ ಸುಂದರಿ ದೇವಾಲಯದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳನ್ನು ಚಾಮರಾಜನಗರದಲ್ಲಿ ಬಂಧಿಸಲಾಗಿದೆ. ಮೈಸೂರಿನ ವಿಶೇಷ ತಂಡವು ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.


ಇದನ್ನೂ ಓದಿ: YouTube: ಜೈಲಿಂದ ಬಂದವ ಯೂಟ್ಯೂಬ್‌ ನೋಡಿ ಕಳ್ಳತನ ಕಲಿತ, ದುಬಾರಿ ಕಾರು ಕದ್ದು ಮತ್ತೆ ಜೈಲು ಸೇರಿದ!


ಅಲೆಮಾರಿಗಳ ವೇಷದಲ್ಲಿ ಬಂದು ಕಳ್ಳತನ


ಬಂಧಿತ ಆರೋಪಿಗಳು ಅಲೆಮಾರಿ ಜನಾಂಗದವರಂತೆ ವೇಷ ಹಾಕಿಕೊಂಡು ಬಿಸಲವಾಡಿ ಗ್ರಾಮದ ಊರ ಹೊರಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದರು. ಈ ಬಗ್ಗೆ ಖಚಿತ ಮೇರೆಗೆ ಮೈಸೂರಿನ ವಿಶೇಷ ಪೊಲೀಸ್​ ತಂಡ ದಾಳಿ ಮಾಡಿದ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆರೆ ದಂಡೆ ಹಾಗೂ ಪೊದೆಗಳಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Published by:Annappa Achari
First published: