ಬೆಂಗಳೂರಿನಲ್ಲಿ ಕಳ್ಳತನ ಮಾಡಲು ಹೋದವನಿಗೆ ಮನೆಯೊಡತಿಯಿಂದ ಸರ್​ಪ್ರೈಸ್​ ಗಿಫ್ಟ್​​

ಈ ಘಟನೆ ಡಿಸೆಂಬರ್​​ 5ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.  ಅಂದು ವೈಟ್​​ಫೀಲ್ಡ್​​​ನ ಬಾಲಾಜಿ ಸರೋವರ ಅಪಾರ್ಟ್​​ಮೆಂಟ್​​​​ಗೆ ಕಳ್ಳನೊಬ್ಬ ನುಗ್ಗಿದ್ದ. ಮಹಿಳೆ ಡೋರ್​ ಲಾಕ್​ ಮಾಡದೇ ಇರುವುದನ್ನು ಗಮನಿಸಿದ್ದ ಕಳ್ಳ, ಮನೆಯೊಳಗೆ ಯಾರೂ ಇಲ್ಲ ಎಂದು ಭಾವಿಸಿದ್ದ. ಆದರೆ ಮಹಿಳೆ ಅಡುಗೆ ಮನೆಯಲ್ಲಿದ್ದರೆ, ಆಕೆಯ ಮಗ ರೂಂನಲ್ಲಿದ್ದ. 

ಆರೋಪಿ

ಆರೋಪಿ

  • Share this:
ಬೆಂಗಳೂರು(ಡಿ.13): ಮನೆಗೆ ನುಗ್ಗಿದ ಕಳ್ಳನನ್ನು ಮನೆಯೊಡತಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಿಲಿಕಾನ್​ ಸಿಟಿ ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿ  ನಡೆದಿದೆ.

ಈ ಘಟನೆ ಡಿಸೆಂಬರ್​​ 5ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.  ಅಂದು ವೈಟ್​​ಫೀಲ್ಡ್​​​ನ ಬಾಲಾಜಿ ಸರೋವರ ಅಪಾರ್ಟ್​​ಮೆಂಟ್​​​​ಗೆ ಕಳ್ಳನೊಬ್ಬ ನುಗ್ಗಿದ್ದ. ಮಹಿಳೆ ಡೋರ್​ ಲಾಕ್​ ಮಾಡದೇ ಇರುವುದನ್ನು ಗಮನಿಸಿದ್ದ ಕಳ್ಳ, ಮನೆಯೊಳಗೆ ಯಾರೂ ಇಲ್ಲ ಎಂದು ಭಾವಿಸಿದ್ದ. ಆದರೆ ಮಹಿಳೆ ಅಡುಗೆ ಮನೆಯಲ್ಲಿದ್ದರೆ, ಆಕೆಯ ಮಗ ರೂಂನಲ್ಲಿದ್ದ.

ಕಾಂಗ್ರೆಸ್ ನಿರಂತರ​ ಸೋಲಿಗೆ ರಾಹುಲ್​ ಗಾಂಧಿಯೇ ಕಾರಣ; ಮಾಜಿ‌ ಸಚಿವ ಆನಂದ್ ಅಸ್ನೋಟಿಕರ್

ಇದನ್ನರಿಯದ ಕಳ್ಳ ಮನೆಯಲ್ಲಿ ಯಾರೂ ಇಲ್ಲವೆಂದು ತನ್ನ ಕೈಚಳಕ ತೋರಲು ಮುಂದಾಗಿದ್ದ. ಕಬೋರ್ಡ್​​​ನಲ್ಲಿ ಹಣ ಹಾಗೂ ಚಿನ್ನ ಕದಿಯಲು ಯತ್ನಿಸಿದ್ದ. ಈ ವೇಳೆ ಏನೋ ಶಬ್ಧವಾಯಿತೆಂದು ಮಹಿಳೆ ಅಡುಗೆ ಮನೆಯಿಂದ ಹೊರ ಬಂದಿದ್ದಾಳೆ. ಆಗ ಮನೆಯೊಡತಿಯನ್ನು ಕಂಡ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಳಿಕ ಅಪಾರ್ಟ್ ಮೆಂಟ್ ಮೊದಲನೇ ಮಹಡಿಯ ಚಪ್ಪಲಿ ಸ್ಟಾಂಡ್ ಹಿಂದೆ ಅವಿತು ಕುಳಿತಿದ್ದಾನೆ. ಬೆಂಬಿಡದ ಮಹಿಳೆ ಕಳ್ಳನನ್ನು ಬೆನ್ನತ್ತಿ ಹಿಡಿದಿದ್ದಾಳೆ. ಆರೋಪಿಯನ್ನು ವೆಂಕಟಸ್ವಾಮಿ ಎಂದು ಗುರುತಿಸಲಾಗಿದೆ. ಮಹಿಳೆ ಕಳ್ಳನನ್ನು ಬೆನ್ನತ್ತಿ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಸದ್ಯ ಅಪಾರ್ಟ್​​​ಮೆಂಟ್ ನಿವಾಸಿಗಳು ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ; ಯಾವುದೇ ಆದೇಶ ನೀಡದೆ 7 ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದ ಸುಪ್ರೀಂ
Published by:Latha CG
First published: