Accident: ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಸಾವು

ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಗಂಡ, ಹೆಂಡತಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರು-ಲಾರಿ ನಡುವೆ ಭೀಕರ ಅಪಘಾತ

ಕಾರು-ಲಾರಿ ನಡುವೆ ಭೀಕರ ಅಪಘಾತ

  • Share this:
ತುಮಕೂರು (ಮೇ 3): ಕುಣಿಗಲ್ ತಾಲೂಕಿನಲ್ಲಿ ಭೀಕರ ಅಪಘಾತ (Terrible Accident) ಸಂಭವಿಸಿದ್ದು, ಒಂದೇ ಕುಟುಂಬದ (Family) ಮೂವರು ಸಾವನ್ನಪ್ಪಿದ್ದಾರೆ (3 Members Death). ​ ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಗಂಡ, ಹೆಂಡತಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ (Kunigal) ಬಿಸೇಗೌಡನ ದೊಡ್ಡಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳು ಮಗುವನ್ನ ಆದಿಚುಂಚನಗಿರಿ ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿದೆ. ದಂಪತಿಗಳು ಚನ್ನಪಟ್ಟಣದ ಮೂಲದವರಾಗಿದ್ದಾರೆ. ಹುಲಿಯೂರುದುರ್ಗ‌ ಕಡೆಯಿಂದ  ಕಾರಿನಲ್ಲಿ ಹೋಗ್ತಿದ್ದ ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳು ಭೀಕರ ಅಪಘಾತದಲ್ಲಿ ಯಮನಪಾದ ಸೇರಿದ್ದಾರೆ. ಸ್ಥಳಕ್ಕೆ ಹುಲಿಯೂರು ದುರ್ಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಂಜಾನ್​ ದಿನವೇ ಭೀಕರ ಅಪಘಾತ

ರಂಜಾನ್ ದಿನವೇ ಚನ್ನಪಟ್ಟಣ ಮೂಲದ ಸೈಯದ್ ಮೊಹಮ್ಮದ್ ನಜ್ಮಿ ಕುಟುಂಬಸ್ಥರು ಸಾವನ್ನಪ್ಪಿರೋದು ದುರಂತವೇ ಸರಿ, ಕಾರಿಗೆ ಲಾರಿ ಡಿಕ್ಕಿ ಹೊಡೆದ ಕಾರಿಗೆ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗಂಡ ಹೆಂಡತಿ ಹಾಗೂ ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚನ್ನಪಟ್ಟಣ ಮೂಲದ ಸೈಯದ್ ಮೊಹಮ್ಮದ್ ನಜ್ಮಿ (42) ನಾಜೀಯಾ (30), ಸೈಯದ್ ಹಸ್ಸಿ (8) ಮೃತರು ದುರ್ದೈವಿಗಳಾಗಿದ್ದಾರೆ. ಮತ್ತೊಂದು 6 ವರ್ಷದ ಮಗು ಖಾಸಿ ಗಂಭೀರವಾಗಿ ಗಾಯಗೊಂಡಿದ್ದು, ಮಗುವನ್ನು ಅದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಭದ್ರಾವತಿಗೆ ತೆರಳುತ್ತಿದ್ದ ಸೈಯದ್​ ಫ್ಯಾಮಿಲಿ

ಸೈಯದ್ ಮೊಹಮ್ಮದ್ ನಜ್ಮಿ, ಕುಟುಂಬ ಸಮೇತರಾಗಿ ರಂಜಾನ್ ಹಬ್ಬ ಮುಗಿಸಿಕೊಂಡು ತನ್ನ ಪತ್ನಿಯ ತವರೂರು ಭದ್ರಾವತಿಗೆ ಕಾರಿನಲ್ಲಿ ತೆರಳುತ್ತಿದ್ರು. ಈ ವೇಳೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಬಿಸೇಗೌಡನ ದೊಡ್ಡಿ ಬಳಿ‌ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ಸ್ಥಳಕ್ಕೆ ಅಮೃತೂರು ಸಿಪಿಐ ಹಾಗೂ ಹುಲಿಯೂರು ದುರ್ಗ PSI ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಲಿಯೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ

ಚಾಮರಾಜನಗರ: ರಂಜಾನ್ ಹಬ್ಬದ ದಿನವೇ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಕೊಳ್ಳೇಗಾಲ ಪಟ್ಟಣದಲ್ಲಿ ಮಾರಾಮಾರಿ ನಡೆದಿದೆ. ನಗರದ ಸಾಮಂದಗೇರಿ ಬೀದಿಯ ನಿವಾಸಿ ನಾಸೀರ್ ಷರೀಫ್ (ಬಬ್ಲು) ಹಾಗೂ ಕಿಜರ್ ಬೆಂಬಲಿಗರ ನಡುವೆ ಗಲಾಟೆಯಾದ ಪರಿಣಾಮ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಟ್ಟಿಗೆ, ಕಲ್ಲು ದೊಣ್ಣೆಯಿಂದ ಬಡಿದಾಟ

ಹಬ್ಬದ ಹಿನ್ನೆಲೆ ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ಬಂದು ಮನೆಗೆ ಹಿಂದಿರುಗುವಾಗ ಹಬ್ಬದಲ್ಲಿ ರಾಜಕೀಯ ವ್ಯಕ್ತಿಗಳು ಭಾಗಿಯಾದ ಶಂಕೆ ಹಿನ್ನೆಲೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಸಾಮಂದೇರಿ ಬೀದಿಯ ಎರಡು ಗುಂಪಿನ ಯುವಕರು ಇಟ್ಟಿಗೆ, ಕಲ್ಲು ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ. ಗಲಾಟೆ ಗುಂಪನ್ನು ನೋಡಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹೊಡೆದಾಟದಲ್ಲಿ ತೊಡಗಿದ್ದವರನ್ನು ಚದುರಿಸಿದ್ದಾರೆ.

ಬಡಿದಾಟದಲ್ಲಿ ಪೆಟ್ಟು ತಿಂದು ಕಿಜರ್ ಹಾಗೂ ನಾಸೀರ್ ಷರೀಫ್ ಸೇರಿದಂತೆ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಕೆಲ ಮುಸ್ಲಿಂ ಯುವಕರು ನ್ಯಾಯಬೇಕೆಂದು ಒತ್ತಾಯಿಸಿ ಆಸ್ಪತ್ರೆ ಆವರಣದಲ್ಲಿ ಧರಣಿ ಕೂರಲು ಮುಂದಾದ ವೇಳೆ ಪಿ.ಎಸ್.ಐ ಚೇತನ್ ಮಧ್ಯ ಪ್ರವೇಶಿಸಿ ಯುವಕರನ್ನು ಮನವೊಲಿಸಿದ್ದು, ತಪ್ಪಿತಸ್ಥರನ್ನು ಕಾನೂನು ರೀತಿ ಶಿಕ್ಷೆಗೆ ಒಳಪಡಿಸೋಣ ಎಂದಿದ್ದಾರೆ.

ಪೊಲೀಸ್ ಠಾಣೆಯಲ್ಲಿ ರಂಜಾನ್​ ಆಚರಣೆ
 ಯಾದಗಿರಿ: ಶಾಂತಿ ಸೌಹಾರ್ದತೆ ಸಾರುವ ರಂಜಾನ್ ಹಬ್ಬವನ್ನು ಕೋವಿಡ್‌ನಿಂದ ಎರಡು ವರ್ಷಗಳಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈ ಸಲ ಕೋವಿಡ್ ಪರಿಣಾಮವಿಲ್ಲ. ಎಲ್ಲೆಡೆ ಮುಸ್ಲಿಂರು ಒಗ್ಗಟ್ಟಾಗಿ ಹಬ್ಬ ಆಚರಿಸುತ್ತಿರುವುದು ವಿಶೇಷ. ಜಿಲ್ಲೆಯ ಯರಗೋಳ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ವಿಶಿಷ್ಟವಾಗಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ಆಚರಿಸಿದರೆ, ಬಸವ ಭಕ್ತರು ಮುಸ್ಲಿಂ ಬಾಂಧವರಿಗೆ ಹೂಗುಚ್ಛ ನೀಡಿ ರಂಜಾನ್ ಶುಭಾಶಯ ತಿಳಿಸಿದರು.
Published by:Pavana HS
First published: