Baby Death: ಗಣೇಶ ಹಬ್ಬದಂದೇ ಭೀಕರ ರಸ್ತೆ ಅಪಘಾತ‌, 8 ತಿಂಗಳ ಮಗು ದುರ್ಮರಣ!

ಗಣೇಶ ಹಬ್ಬ ಅಂದ್ರೆ ಸಡಗರ, ಸಂಭ್ರಮ. ಆದರೆ ಇಲ್ಲೊಂದು ಕಡೆ ಗಣೇಶ ಹಬ್ಬದಂದೇ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪರಿಣಾಮ 8 ತಿಂಗಳ ಮಗು, 35 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರುಗಳು ಹಾಗೂ ಸರ್ಕಾರಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಗಣೇಶ ಹಬ್ಬ ಅಂದ್ರೆ ಸಡಗರ, ಸಂಭ್ರಮ. ಆದರೆ ಇಲ್ಲೊಂದು ಕಡೆ ಗಣೇಶ ಹಬ್ಬದಂದೇ (Ganesha Festival) ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಪರಿಣಾಮ 8 ತಿಂಗಳ ಮಗು (8 Month Baby), 35 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರುಗಳು (Car)ಹಾಗೂ ಸರ್ಕಾರಿ ಬಸ್ (Bus) ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ (Spot out) ಅಸುನೀಗಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಬಕಡ್ಡಿ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ (Crying) ಮುಗಿಮುಟ್ಟಿದೆ. ಕಾರು ಓವರ್ ಟೇಕ್ ಮಾಡಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಆ ಕಾರು ಬಸ್​ಗೆ ಬಡಿದಿದೆ. ಪರಿಣಾಮ ದುರ್ಘಟನೆ ಸಂಭವಿಸಿದೆ.

  ಗಣೇಶ ಹಬ್ಬದಂದೇ ಭಾರೀ ದುರ್ಘಟನೆ ಸಂಭವಿಸಿದೆ. ಕಾರು-ಬಸ್​ ಡಿಕ್ಕಿಯಾಗಿ 8 ತಿಂಗಳ ಮಗು ಸಾವನ್ನಪ್ಪಿದೆ. 8 ತಿಂಗಳ ಮಗು ಮತ್ತು 35 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಮೃತರಿಬ್ಬರು ಕಲಬುರಗಿ ಮೂಲದವರು. ಕಾರಿನ ಹಿಂಬದಿ ನುಜ್ಜುಗುಜ್ಜು ಆಗಿದ್ದು, ಕಾರಿನಲ್ಲಿ ಸಿಲುಕಿದವರನ್ನು ಸ್ಥಳೀಯರು ಹೊರತೆಗೆದಿದ್ದಾರೆ.

  ಕಾರು ಓವರ್​ಟೇಕ್ ಮಾಡಲು ಹೋಗಿ ದುರಂತ!
  ಕಾರೊಂದನ್ನು ಓವರ್ ಟೇಕ್ ಮಾಡಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಬಳಿಕ ತಿರುಗಿದ ಕಾರಿಗೆ ಹಿಂಬದಿಯಿಂದ ಸರ್ಕಾರಿ  ಬಸ್ ಬಂದು ಬಡಿದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ಇದನ್ನೂ ಓದಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು!

  ಬೆಂಗಳೂರು ಬಳಿ ಫಾಲ್ಸ್​​ನಲ್ಲಿ ಜಾರಿ ಬಿದ್ದು ವಿದ್ಯಾರ್ಥಿ ಸಾವು
  ಬೆಂಗಳೂರಿನಲ್ಲಿ ಇಂದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಸಮೀಪದ ಟಿಕೆ ಫಾಲ್ಸ್​​ಗೆ ಬಿದ್ದು ವಿದ್ಯಾರ್ಥಿ ಶಬಾದ್​ ಖಾನ್ ಸಾವನ್ನಪ್ಪಿದ್ದಾನೆ. ಈತ ಆರ್ ಟಿ ನಗರದ ನಿವಾಸಿಯಾಗಿದ್ದ. ಇಂದು ಸ್ನೇಹಿತರೊಂದಿಗೆ ಟಿ ಕೆ ಫಾಲ್ಸ್ ವೀಕ್ಷಣೆಗೆ ಆಗಮಿಸಿದ್ದ. ವಿದ್ಯಾರ್ಥಿಗಳು ಫಾಲ್ಸ್ ವೀಕ್ಷಣೆಗೆ ಬಂಡೆಗಳ ಮೇಲೇರಿದ್ದರು.

  ಈ ವೇಳೆ ಕಾಲು ಜಾರಿ ಬಂಡೆಗಳ ನಡುವೆ ಶಬಾದ್ ಖಾನ್ ಬಿದ್ದಿದ್ದಾನೆ. ಸ್ಥಳದಲ್ಲೇ ಶಬಾದ್ ಖಾನ್ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ದಳ ನೆರವಿನಿಂದ ಮೃತನ ಶವ ಹೊರಕ್ಕೆ ತೆಗೆಯಲಾಯ್ತು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಕಲಬುರಗಿಯಲ್ಲಿ ಗಾಯಗೊಂಡಿದ್ದ ಗ್ರಾ.ಪಂ.ಸದಸ್ಯ ಸಾವು
  ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಣ್ಣೂರು ಗ್ರಾಮ ಪಂಚಾಯ್ತಿ ಸದಸ್ಯ ಪರಮೇಶ್ವರ (35) ಸಾವನ್ನಪ್ಪಿದ ವ್ಯಕ್ತಿ. ಚಿಕಿತ್ಸೆ ಫಲಕಾರಿಯಾಗದೇ ಸೋಲಾಪೂರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ.

  ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಹೊರವಲಯದಲ್ಲಿ ಆಗಸ್ಟ್​​ 26 ರಂದು ಬೈಕ್ ಅಪಘಾತವಾಗಿತ್ತು. ಇದರಲ್ಲಿ ಪರಮೇಶ್ವರ್ ಗಂಭೀರ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪರಮೇಶ್ವರನ್ನ ಸೋಲಾಪುರಕ್ಕೆ ಕರೆದ್ಯೊಯಲಾಗಿತ್ತು.

  ದೀರ್ಘದಂಡ ನಮಸ್ಕಾರ ಹಾಕಿದ್ದ ಮಣ್ಣೂರು ಗ್ರಾಮಸ್ಥರು
  ಆಸ್ಪತ್ರೆ ದಾಖಲಾಗಿದ್ದ ಪರಮೇಶ್ವರ್ ಬದುಕಿ ಬರಲೆಂದು ಮಣ್ಣೂರು ಗ್ರಾಮಸ್ಥರು ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರ ಹಾಕಿದ್ದರು. ಶೇಷಗಿರಿ ಗ್ರಾಮದಿಂದ ಮಣ್ಣೂರು ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದರು. ದೇವರಲ್ಲೂ ವಿಶೇಷವಾಗಿ ಪ್ರಾರ್ಥಿಸಿದ್ದರು.

  ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಜೀಪ್ ಪಲ್ಟಿ, ಮೂವರು ಗಂಭೀರ!

  ಮಾಜಿ ಡಿಸಿಎಂ ಸವದಿ ಕಾರು ಅಪಘಾತ
  ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾರು ಅಪಘಾತವಾಗಿದೆ. ಕಾರು ಅಪಘಾತದಲ್ಲಿ  ಲಕ್ಷ್ಮಣ ಸವದಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ಇಲ್ಲಿನ ಜತ್ ಜಾಂಬೋಟಿ ಅಂತಾರಾಜ್ಯ ಹೆದ್ದಾರಿಯ ಹಾರೂಗೇರಿ ಪಟ್ಟಣದ ಬಳಿ ಆಕ್ಸಿಡೆಂಟ್​ ಆಗಿದೆ.

  ಲಕ್ಷ್ಮಣ ಸವದಿಯವರ ಕಾರು ಅಥಣಿಯಿಂದ ಬೆಳಗಾವಿ ಕಡೆಗೆ ಹೊರಟಿತ್ತು. ಕಾರು ಅಪಘಾತವಾಗುತ್ತಿದಂತೆ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ನಡೆಸಿದ್ದಾರೆ. ಅಪಘಾತದಲ್ಲಿ ಲಕ್ಷ್ಮಣ ಸವದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರ ಸವದಿ ಕಾರಿಗೆ ಅಡ್ಡ ಬಂದಿದ್ದು, ಬೈಕ್ ಸವಾರನನ್ನ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.
  Published by:Thara Kemmara
  First published: