ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ; ಲಾರಿ ಅಡಿ ಸಿಲುಕಿ ಮೂವರ ದುರ್ಮರಣ

ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿದೆ. ಈ ವೇಳೆ ಅಂಗಡಿಯಲ್ಲಿ ಟೀ ಕುಡಿಯಲು ಆಗಮಿಸಿದ್ದವರು ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಾಗಲಕೋಟೆ (ಮಾರ್ಚ್ 17); ಭೀಕರ ಲಾರಿ ಅಪಘಾತಕ್ಕೆ ಮೂವರು ಮೃತಪಟ್ಟಿರುವ ಧಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿದೆ. ಈ ವೇಳೆ ಅಂಗಡಿಯಲ್ಲಿ ಟೀ ಕುಡಿಯಲು ಆಗಮಿಸಿದ್ದವರು ಲಾರಿ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂವರು ಮೃತದೇಹವನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಗಾಯಗೊಂಡವರನ್ನು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟವರ ವಿವರ ತಿಳಿದುಬಂದಿಲ್ಲ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

(ವರದಿ - ರಾಚಪ್ಪ ಬನ್ನಿದನ್ನಿ)

ಇದನ್ನೂ ಓದಿ : ಉಪಲೋಕಾಯುಕ್ತರ ಬಲ ಹೆಚ್ಚಿಸುವ ತಿದ್ದುಪಡಿ ವಿಧೇಯಕ ಮಂಡನೆ; ಕೆಲಸಕ್ಕೆ ಬಾರದ ಶಾಸನ ಎಂದು ರಮೇಶ್ ಕುಮಾರ್ ಆಕ್ಷೇಪ
First published: