ಪಕ್ಕೆಲುಬು ಪದ ತಪ್ಪು ಉಚ್ಛಾರಣೆ; ವಿದ್ಯಾರ್ಥಿ ವಿಡಿಯೋ ಹರಿಬಿಟ್ಟಿದ್ದ ಶಿಕ್ಷಕ ಸಸ್ಪೆಂಡ್​​

ಸದ್ಯ ಈ ವಿಡಿಯೋ ಮಾಡಿರುವುದು ಶಿಕ್ಷಕ ಟಿ.ಚಂದ್ರಶೇಖರ್​ ಎಂಬುದು ಖಚಿತವಾಗಿದ್ದು, ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡಿದೆ. 

news18-kannada
Updated:January 11, 2020, 11:22 AM IST
ಪಕ್ಕೆಲುಬು ಪದ ತಪ್ಪು ಉಚ್ಛಾರಣೆ; ವಿದ್ಯಾರ್ಥಿ ವಿಡಿಯೋ ಹರಿಬಿಟ್ಟಿದ್ದ ಶಿಕ್ಷಕ ಸಸ್ಪೆಂಡ್​​
ವಿದ್ಯಾರ್ಥಿ- ಅಮಾನತುಗೊಂಡ ಶಿಕ್ಷಕ ಚಂದ್ರಶೇಖರ್
  • Share this:
ಬಳ್ಳಾರಿ(ಜ.11): ಕೆಲವು ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ 'ಪಕ್ಕೆಲುಬು' ಪದದ ತಪ್ಪು ಉಚ್ಛಾರಣೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್​ ಆಗಿತ್ತು. ಈಗ ಆ ವಿಡಿಯೋ ಹರಿಬಿಟ್ಟಿದ್ದ  ಶಿಕ್ಷಕನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಸರ್ಕಾರಿ ಶಾಲೆಯ  ಟಿ.  ಚಂದ್ರಶೇಖರ್​​ ಸಸ್ಪೆಂಡ್​ ಆಗಿರುವ ಶಿಕ್ಷಕ.  ಬಾಲಕನ ವಿಡಿಯೋ ವೈರಲ್​ ಆದ ಬಳಿಕ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದರು.

ಶಿಕ್ಷಕನೋರ್ವ ಶಾಲೆಯಲ್ಲಿ ನಲಿ-ಕಲಿ ಪಾಠ ಬೋಧಿಸುವಾಗ ಬಾಲಕನನ್ನು ತರಗತಿಯಲ್ಲಿ ಕೂರಿಸಿಕೊಂಡು ಪಕ್ಕೆಲುಬು ಪದವನ್ನು ಉಚ್ಛಾರ ಮಾಡುವಂತೆ ಹೇಳಿದ್ದರು. ಆದರೆ ಆ ಬಾಲಕ ಎಷ್ಟೇ ಪ್ರಯತ್ನಿಸಿದರೂ ಪಕ್ಕೆಲುಬು ಪದವನ್ನು ಉಚ್ಚಾರ ಮಾಡಲು ಸಾಧ್ಯವಾಗಿರಲಿಲ್ಲ. ಕೆಲವು ಬಾರಿ ತಾಳ್ಮೆ ಕಳೆದುಕೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಬಾಲಕನನ್ನು ಬೆದರಿಸಿ ಪಕ್ಕೆಲುಬು ಪದ ಉಚ್ಚಾರಣೆ ಮಾಡುವಂತೆ ಬಲವಂತ ಮಾಡಿದ್ದರು.

ಪಕ್ಕೆಲುಬು ಪದ ತಪ್ಪು ಉಚ್ಚಾರಣೆ ಮಾಡುವ ಬಾಲಕನ ವಿಡಿಯೋ ವೈರಲ್; ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ

ಆದರೆ, ಮೊದಲೇ ಹೆದರಿದ್ದ ವಿದ್ಯಾರ್ಥಿ ಅಳುತ್ತಾ, ಪಕ್ಕೆಲುಬು ಪದವನ್ನು ತಪ್ಪಾಗಿ ಉಚ್ಚಾರಣೆ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಸದ್ಯ ಈ ವಿಡಿಯೋ ಮಾಡಿರುವುದು ಶಿಕ್ಷಕ ಟಿ.ಚಂದ್ರಶೇಖರ್​ ಎಂಬುದು ಖಚಿತವಾಗಿದ್ದು, ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡಿದೆ.

ಈ ವಿಡಿಯೋ ನೋಡಿದ್ದ ಸಚಿವ ಸುರೇಶ್ ಕುಮಾರ್, "ಮಕ್ಕಳಿಗೆ ಶಿಕ್ಷಕರು ಸರಿಯಾಗಿ ಉಚ್ಛಾರ ಮಾಡುವುದನ್ನು ಕಲಿಸಬೇಕು. ಆದರೆ ಅದನ್ನೇ ದೊಡ್ಡ ಅಪರಾಧವೆಂದು ಬಿಂಬಿಸಿ, ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಅಪರಾಧ. ತಕ್ಷಣ ಈ ಕೃತ್ಯ ಯಾವ ಶಾಲೆಯಲ್ಲಿ ನಡೆದಿದೆ ಮತ್ತು ಯಾವ ಶಿಕ್ಷಕರು ಈ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಈ ಬಗ್ಗೆ ಸೈಬರ್ ಕ್ರೈಮ್ ಗೆ ದೂರು ನೀಡಬೇಕು. ಹಾಗೂ ಆ ಶಿಕ್ಷಕರು, ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ಸೂಚನೆ ನೀಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು.

ಸದ್ಯದಲ್ಲೇ ಸಂಪುಟ ವಿಸ್ತರಣೆ: ಜ.17ಕ್ಕೆ ರಾಜ್ಯಕ್ಕೆ ಅಮಿತ್​​ ಶಾ ಆಗಮನ; ಸಿಎಂ ಬಿಎಸ್​​​ವೈ ಜತೆ ಮಹತ್ವದ ಚರ್ಚೆ 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ