ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ; ರಾತ್ರಿಯಿಡೀ ಶಾಲೆಯಲ್ಲೇ ವಾಸ್ತವ್ಯ ಹೂಡಿದ ಶಿಕ್ಷಕ

ಆಹಾರ ಧಾನ್ಯ ಕಳ್ಳರ ಪಾಲಾಗದಂತೆ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದು ಈಗ ಶಿಕ್ಷಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಶಾಲೆಯಲ್ಲಿ ಆಹಾರ ಧಾನ್ಯ ಕಾಯುತ್ತಾ ಮಲಗಿರುವ ಶಿಕ್ಷಕ

ಶಾಲೆಯಲ್ಲಿ ಆಹಾರ ಧಾನ್ಯ ಕಾಯುತ್ತಾ ಮಲಗಿರುವ ಶಿಕ್ಷಕ

  • Share this:
ಯಾದಗಿರಿ(ಜು.02): ಶಾಲಾಮಕ್ಕಳ ಆಹಾರ ಧಾನ್ಯಕ್ಕೂ ಖದೀಮರು ಕನ್ನ ಹಾಕುತ್ತಿದ್ದಾರೆ. ಕಳ್ಳರ ಕಾಟದಿಂದ ಜಿಲ್ಲೆಯಲ್ಲಿ ಶಿಕ್ಷಕರು ಬೇಸತ್ತಿದ್ದಾರೆ. ಕಳ್ಳರ ಕಾಟ ತಪ್ಪಿಸಲು ಶಿಕ್ಷಕರೇ ಈಗ ಆಹಾರ ಧಾನ್ಯಗಳಿಗೆ ಸರ್ಪಗಾವಲು ಆಗಿದ್ದಾರೆ. ಶಿಕ್ಷಕರೇ ಈಗ ಆಹಾರ ಧಾನ್ಯ ಕಾಯುವಂತಾಗಿದೆ. ಜಿಲ್ಲೆಯಲ್ಲಿ ಕಳ್ಳರ ಕಾಟಕ್ಕೆ ಬೇಸತ್ತು ಶಿಕ್ಷಕನೋರ್ವ ಬಿಸಿಯೂಟ ಆಹಾರ ಧಾನ್ಯ ಕಾಯಲು ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿ ಆಹಾರ ಧಾನ್ಯ ಕಳ್ಳತನವಾಗದಂತೆ ಸರ್ಪಗಾವಲು ಹಾಕಿಕೊಂಡಿದ್ದಾನೆ‌.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಲಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿದ್ದಣ್ಣಗೌಡ ಅವರು ಆಹಾರ ಧಾನ್ಯಗಳಿಗೆ ಶಾಲೆಯಲ್ಲಿ ವಾಸ್ತವ್ಯ ಮಾಡಿ ಆಹಾರ ಧಾನ್ಯಗಳ ರಕ್ಷಿಸಿದ್ದಾರೆ. ಸರಕಾರ ಈಗಾಗಲೇ 1 ರಿಂದ 10 ನೇ ತರಗತಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನವೆಂಬರ್ ನಿಂದ ಏಪ್ರಿಲ್ ತಿಂಗಳ ವರಗೆ 5 ತಿಂಗಳ ಆಹಾರ ಧಾನ್ಯವನ್ನು  ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಪೂರೈಕೆ ಮಾಡಿದೆ.

ಅದೆ ರೀತಿ ಮಾಲಹಳ್ಳಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ ವೆಚ್ಚದ ಆಹಾರ ಧಾನ್ಯ ಪೂರೈಕೆ ಮಾಡಲಾಗಿದೆ. ಅಕ್ಕಿ,ಗೋಧಿ, ತೊಗರಿ, ತೊಗರಿ ಬೇಳೆ, ಉಪ್ಪು, ಅಡುಗೆ ಎಣ್ಣೆ ಪೂರೈಕೆ ಮಾಡಲಾಗಿದೆ. ಲಕ್ಷಾಂತರ ಮೌಲ್ಯದ ಆಹಾರ ಧಾನ್ಯಗಳಿಗೆ ಕಳ್ಳರ ಕಾಟ ಕಾಡುತ್ತಿದೆ.

ಇದನ್ನೂ ಓದಿ:ನಾನು ಮಂತ್ರಿ ಸ್ಥಾನ ಕೇಳಿಲ್ಲ, ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗಲು ಪ್ರಯತ್ನಿಸುತ್ತೇವೆ; ಬಾಲಚಂದ್ರ ಜಾರಕಿಹೊಳಿ

ಕೆಲ ಶಾಲೆಗಳಲ್ಲಿ ರಾತ್ರಿ ದುಷ್ಕರ್ಮಿಗಳು ಶಾಲೆ ಬೀಗ ಮುರಿದು  ಮಕ್ಕಳ ಬಿಸಿಯೂಟದ ಆಹಾರ ಧಾನ್ಯ ಕಳ್ಳತನ ಮಾಡಿದ್ದಾರೆ. ಇದೇ ತಿಂಗಳ ಯಾದಗಿರಿ ಜಿಲ್ಲೆಯ ಬಲಶೆಟ್ಟಿಹಾಳ ಶಾಲೆಯಲ್ಲಿ ಕೂಡ ಖದೀಮರು ಶಾಲೆ ಬೀಗ ಮುರಿದು ಅಡುಗೆ ಎಣ್ಣೆ ಕಳ್ಳತನ ಮಾಡಿದ್ದರು. ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಆಹಾರ ಧಾನ್ಯಗಳಿಗೆ ಕಳ್ಳರು ಕಳ್ಳತನ ಮಾಡುತ್ತಿರುವದನ್ನು ಅರಿತು ಶಾಲೆ ಮುಖ್ಯ ಶಿಕ್ಷಕ ಸಿದ್ದಣ್ಣಗೌಡ ಮನೆ ಬಿಟ್ಟು ಶಾಲೆಯಲ್ಲಿ ಆಹಾರ ಧಾನ್ಯಗಳಿಗೆ ಸರ್ಪಗಾವಲು ಆಗಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ  ಅಕ್ಷರ ದಾಸೋಹ ಅಧಿಕಾರಿ ಪ್ರಭು ಕಣ್ಣನ್  ಮಾತನಾಡಿ, ಸರಕಾರ ಶಾಲೆ ಮಕ್ಕಳಿಗೆ  ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯ ವಿತರಣೆ ಮಾಡಿದೆ. ಕೆಲ ಶಾಲೆಯಲ್ಲಿ ಆಹಾರ ಧಾನ್ಯ ಕಳ್ಳತನವಾದ ಘಟನೆ ಜರುಗಿದ್ದು, ಮಾಲಹಳ್ಳಿ ಗ್ರಾಮದ ಮುಖ್ಯ ಶಿಕ್ಷಕ ಸಿದ್ದಣ್ಣಗೌಡ ಅವರು ಶಾಲೆ ಮಕ್ಕಳಿಗೆ  ಆಹಾರ ಧಾನ್ಯ ಪೂರೈಕೆ ಮಾಡಲು ಆಹಾರ ಧಾನ್ಯಗಳನ್ನು ಕಾಯ್ದು ರಕ್ಷಣೆ ಮಾಡಿದ್ದಾರೆ. ಇಂದು ಶಾಲೆ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ.  ಕೊರೋರೊನಾ ಸಂಕಷ್ಟ ಕಾಲದಲ್ಲಿ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ:Travel: ಭಾರತದಲ್ಲೇ ಭೇಟಿ ನೀಡಬಹುದಾದ 5 ಪ್ರವಾಸಿ ಸ್ಥಳಗಳು..!

ಆಹಾರ ಧಾನ್ಯ ಕಳ್ಳರ ಪಾಲಾಗದಂತೆ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದು ಈಗ ಶಿಕ್ಷಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಗ್ಗೆ ಮುಖ್ಯ ಶಿಕ್ಷಕ ಸಿದ್ದಣ್ಣಗೌಡ ನ್ಯೂಸ್ 18 ಕನ್ನಡಕ್ಕೆ ಮಾತನಾಡಿ, ಶಾಲೆ ಮಕ್ಕಳಿಗೆ ಸರಕಾರ ಪೂರೈಕೆ ಮಾಡಿದ ಆಹಾರ ಧಾನ್ಯ ಮಕ್ಕಳಿಗೆ ಸಮರ್ಪಕವಾಗಿ ಪೂರೈಕೆ ಮಾಡಲು ಆಹಾರ ಧಾನ್ಯ ಕಾಯಲು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದೇನೆ. ಇಂದು ಬೆಳಿಗ್ಗೆ ಶಾಲೆ ಮಕ್ಕಳಿಗೆ ಆಹಾರ ವಿತರಣೆ ಮಾಡುತ್ತೇವೆ ಎಂದರು.

ಇಂದು ಬೆಳಿಗ್ಗೆ ಶಾಲೆ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡಲಿದ್ದಾರೆ. ಶಾಲೆ ಮಕ್ಕಳ ಆಹಾರ ಧಾನ್ಯ ರಕ್ಷಣೆಗೆ ಈಗ ಶಿಕ್ಷಕ ಸಿದ್ದಣ್ಣಗೌಡ ಬದ್ದರಾಗಿ ರಾತ್ರಿ ವಾಸ್ತವ್ಯ ಮಾಡಿ ಕಳ್ಳರ ಪಾಲಾಗದಂತೆ ನೋಡಿಕೊಂಡಿದ್ದಾರೆ. ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Published by:Latha CG
First published: