Drunken Teacher: ಎಣ್ಣೆ ಕಿಕ್​ನಲ್ಲಿ ಶಾಲೆಗೆ ಬರ್ತಿದ್ದ ಶಿಕ್ಷಕಿ! ಮದ್ಯದ ಮತ್ತಲ್ಲೇ ಮಕ್ಕಳು, ಸಹೋದ್ಯೋಗಿಗಳ ಜೊತೆ ಕಿರಿಕ್!

ಕುಡಿದ ಮತ್ತಲ್ಲಿ ಸಹೋದ್ಯೋಗಿಗಳ ಬಳಿ ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್​ ತೆಗೆದು ಗಲಾಟೆ ಮಾಡ್ತಿದ್ರಂತೆ. ಈಕೆಯ ಕಾಟ ತಾಳಲಾಗದೇ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಇತರ ಶಿಕ್ಷಕರು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗುರು ಸಾಕ್ಷಾತ್ ಪರಬ್ರಹ್ಮ ಎಂದು ಪೂಜಿಸೋ ನಮ್ಮ ನಾಡಲ್ಲಿ ಎಂಥಾ ಶಿಕ್ಷಕರಿದ್ದಾರೆ ನೋಡಿ, ಕುಡಿದು ಶಾಲೆ ಮಕ್ಕಳಿಗೆ (School Children) ಶಿಕ್ಷಕಿ ಪಾಠ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ತುಮಕೂರು ತಾಲೂಕಿನ  ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ (Govt Primary School) ಶಿಕ್ಷಕಿಯೊಬ್ಬರು ಕುಡಿದು (Drinking Alcohol) ಶಾಲೆಗೆ ಬಂದು ಪಾಠ ಮಾಡ್ತಿದ್ದ ವಿಚಿತ್ರ ಘಟನೆ ನಡೆದಿದೆ. ಪ್ರತಿದಿನ (Daily) ಮದ್ಯಪಾನ (Alcohol) ಮಾಡಿಕೊಂಡು ಶಾಲೆಗೆ ಬರುವ ಶಿಕ್ಷಕಿ ಗಂಗಲಕ್ಷ್ಮಮ್ಮ ಮಕ್ಕಳಿಗೆ ಅದೇನು ಪಾಠ ಮಾಡ್ತಿದ್ರೋ ಗೊತ್ತಿಲ್ಲ. ಆದ್ರೆ  ಮಕ್ಕಳ ಜೊತೆಯೂ ಗಲಾಟೆ ತೆಗೆಯುತ್ತಿದ್ರಂತೆ. ಈ ಬಗ್ಗೆ ಇತರ ಶಿಕ್ಷಕರು ಅನೇಕ ಬಾರಿ ದೂರು ನೀಡಿದ್ರು ಪ್ರಯೋಜವಾಗಿಲ್ಲ. 

ಕುಡಿದ ಮತ್ತಲ್ಲಿ ಸಹೋದೋಗಿಗಳ ಜೊತೆ ಕಿರಿಕ್​

ಕಿಕ್ಕೇರಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಡ್ರಾಮಾ ಮಾಡುತ್ತಿದ್ದ ಶಿಕ್ಷಕಿ ಗಂಗಲಕ್ಷ್ಮಮ್ಮ ಪ್ರತಿದಿನ ಮತ್ತಿನಲ್ಲೇ ಇರುತ್ತಿದ್ದರಂತೆ. ಕುಡಿದ ಮತ್ತಲ್ಲಿ ಸಹೋದ್ಯೋಗಿಗಳೊಂದಿಗೆ ಪ್ರತಿದಿನ ಜಗಳವಾಡುತ್ತಿದ್ರು. ಸಹೋದ್ಯೋಗಿಗಳ ಬಳಿ ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್​ ತೆಗೆದು ಗಲಾಟೆ ಮಾಡ್ತಿದ್ರಂತೆ. ಈಕೆಯ ಕಾಟ ತಾಳಲಾಗದೇ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಇತರ ಶಿಕ್ಷಕರು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ತಿದ್ದಾರೆ.

25 ವರ್ಷದಿಂದ ಇದೇ ಶಾಲೆಯಲ್ಲಿ ಕೆಲಸ

ಕಳೆದ 25 ವರ್ಷಗಳಿಂದ  ಗಂಗಲಕ್ಷ್ಮಮ್ಮ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇದೇ ವೇಳೆ ಗಂಗಲಕ್ಷ್ಮರ ಕೊಠಡಿಯ ಕಪಾಟಿ ನಲ್ಲಿ ಮದ್ಯದ ಬಾಟಲ್​ಗಳು ಸಿಕ್ಕಿದೆ. ಒಂದು ಫುಲ್ ಬಾಟಲ್,‌ ಎರಡು ಖಾಲಿ ಬಾಟಲ್​ಗಳು ಪತ್ತೆಯಾಗಿದೆ. ಮ್ಯಾನ್ಸುನ್ ಹೌಸ್ ಬ್ರಾಂದಿ ಕುಡಿಯುವ ಗಂಗಲಕ್ಷ್ಮಮ್ಮ, ಆಕೆಯ ಟೇಬಲ್​ನ ಡ್ರಾಯರ್​ ಓಪನ್ ಮಾಡಲು ಪ್ರತಿರೋಧ ಒಡ್ಡಿದ್ದರು.

Alcohol affected amygdala oscillations differently in male and female mice hg
Alcohol affected amygdala oscillations differently in male and female mice hg


ಇದನ್ನೂ ಓದಿ: Crime News: ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ನಿ ಶವ, ಆತ್ಮಹತ್ಯೆಗೆ ಯತ್ನಿಸಿದ ಪತಿ

ಚಿಕ್ಕಸಾರಂಗಿಯ ಶಾಲೆಗೆ ಬಿಇಒ ಭೇಟಿ

ವಿಷಯ ತಿಳಿದು ಬಿ.ಇ.ಒ ಹನುಮಾ ನಾಯ್ಕ್  ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಶಿಕ್ಷಕಿಯ ಕೋಣೆ ಹಾಗೂ ಡ್ರಾ ಓಪನ್​ ಮಾಡಲು ಹೋದ ವೇಳೆ ಗಂಗಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಗ್ರಾಮಸ್ಥರು ಬಲವಂತವಾಗಿ ಕಪಾಟಿನ ಬೀಗ ಒಡೆದು ಓಪನ್ ಮಾಡಿ ನೋಡಿದ ಬಿಇಒ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

ಶಿಕ್ಷಕಿ ಕಪಾಟಿನಲ್ಲಿತ್ತು ಮದ್ಯದ ಬಾಟಲ್​

ಶಿಕ್ಷಕಿ ಡ್ರಾನಲ್ಲಿ ಮದ್ಯದ ಬಾಟಲ್​ಗಳು ಪತ್ತೆಯಾಗಿದೆ. ಮದ್ಯದ ಬಾಟಲ್ ಸೀಜ್ ಮಾಡಿದ ಪೊಲೀಸರು ಮದ್ಯದ ಬಾಟಲ್ ಪತ್ತೆಯಾಗುತ್ತಿದ್ದಂತೆ ಶಿಕ್ಷಕಿ ಗಂಗಾಲಕ್ಷ್ಮಿ ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಶಾಲೆ ಕೊಠಡಿ ಬಾಗಿಲು ಹಾಕಿಕೊಂಡು ಬೆದರಿಕೆ ಹಾಕಿದ್ದಾರೆ. ಚಿಕ್ಕಸಾರಂಗಿ ಶಾಲೆ ಮುಂದೆ ಶಿಕ್ಷಕಿ ಗಂಗಲಕ್ಷ್ಮಮ್ಮರ ಹೈಡ್ರಾಮಾ ನಡೆಯಿತು. ಸದ್ಯ ಶಿಕ್ಷಕಿ ಗಂಗಲಕ್ಷ್ಮಮ್ಮ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ಆದೇಶ ಹೊರಡಿಸಿದ್ದಾರೆ.

ಇದನ್ನೂ  ಓದಿ: Anekal: ಕರೆದಾಗ ಬರದ ಯುವಕ ಮನೆ ಮೇಲೆ ರೌಡಿ ಗ್ಯಾಂಗ್ ಅಟ್ಯಾಕ್; ವೃದ್ಧ ಸಾವು

ಕುಡಿದ ಮತ್ತಿನಲ್ಲಿ ಪತ್ನಿ ಕೊಂದ!

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಶಿವಮೊಗ್ಗದಲ್ಲಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತಿಯೋರ್ವ ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಶಿವಮೊಗ್ಗ ನಗರದ ಪ್ರಿಯಾಂಕ ಲೇಔಟ್​​ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಸಾವನ್ನಪ್ಪಿದ್ದು, ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. 30 ವರ್ಷದ ಮಂಜುಳಾ ಮೃತ ಮಹಿಳೆ. ಮಂಜುಳಾ ಪತಿ ದಿನೇಶ್ ಚಾಕುವಿನಿಂದ ಕೈ ಕುಯ್ದುಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾನೆ.
Published by:ಪಾವನ ಎಚ್ ಎಸ್
First published: