ಮಕ್ಕಳಿಗೆ ಬಾಸುಂಡೆ ಬರೋ ಹಾಗೆ ಬಾರಿಸೋದಾ?; ಬೆಳಗಾವಿ ಶಿಕ್ಷಕಿಯ ಕಠೋರ ವರ್ತನೆ

9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕಿ ಅರ್ಚನಾ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದ ಕಾರಣ, ಮಕ್ಕಳನ್ನು ಹೊರಗೆ ಕರೆತಂದು ಅಮಾನವೀಯವಾಗಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಿಕ್ಷಕಿಯ ರಾಕ್ಷಸಿ ವರ್ತನೆಯಿಂದ ಭಯಭೀತರಾದ ಮಕ್ಕಳು ನಮಗೆ ಈ ಟೀಚರ್ ಬೇಡ ಎಂದು ಕಣ್ಣೀರು ಸುರಿಸುತ್ತಿದ್ದಾರೆ. 

ಶಿಕ್ಷಕಿ ಅರ್ಚನಾ

ಶಿಕ್ಷಕಿ ಅರ್ಚನಾ

  • Share this:
ಬೆಳಗಾವಿ(ಡಿ.13): ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರಾದವರು ತಿದ್ದಿ ಬುದ್ದಿ ಹೇಳುತ್ತಾರೆ. ಒಳ್ಳೆಯ  ಮಾತಿನಿಂದಲೇ ಮಕ್ಕಳನ್ನು ಸರಿದಾರಿಗೆ ತರುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ರಾಕ್ಷಸಿ ವರ್ತನೆ ತೋರಿದ್ದಾರೆ. 

ಬೆಳಗಾವಿ ಜಿಲ್ಲೆ ಹುಕ್ಕೇರಿಯ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅರ್ಚನಾ ಎಂಬ ವಿಜ್ಞಾನ ಶಿಕ್ಷಕಿ ಮಕ್ಕಳ ಮೇಲೆ ದರ್ಪ ತೋರಿದ್ದಾರೆ. ತರಗತಿಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದರೆಂದು ಕೋಲಿನಿಂದ ಬಾಸುಂಡೆ ಬರುವ ಹಾಗೆ ಬಾರಿಸಿದ್ದಾರೆ.

ಮೈಸೂರಿನ ಬಿಷಪ್ ವಿಲಿಯಮ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಉಲ್ಟಾ ಹೊಡೆದು ಪೇಚಿಗೆ ಸಿಲುಕಿದ ಸಂತ್ರಸ್ತೆ

9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕಿ ಅರ್ಚನಾ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದ ಕಾರಣ, ಮಕ್ಕಳನ್ನು ಹೊರಗೆ ಕರೆತಂದು ಅಮಾನವೀಯವಾಗಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಿಕ್ಷಕಿಯ ರಾಕ್ಷಸಿ ವರ್ತನೆಯಿಂದ ಭಯಭೀತರಾದ ಮಕ್ಕಳು ನಮಗೆ ಈ ಟೀಚರ್ ಬೇಡ ಎಂದು ಕಣ್ಣೀರು ಸುರಿಸುತ್ತಿದ್ದಾರೆ.

ಈ  ಶಾಲೆಯಲ್ಲಿ ಒಟ್ಟು 230 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅರ್ಚನಾ ಶಾಲೆಗೆ ನೇಮಕವಾಗಿ ಬಂದಾಗಿನಿಂದ ಇದೇ ರೀತಿ ದರ್ಪ ತೋರುತ್ತಿದ್ದಾರೆ ಎನ್ನಲಾಗಿದೆ. ಶಾಲೆಯಲ್ಲಿ ಸರಿಯಾಗಿ ಪಾಠ ಮಾಡದೆ ಮೊಬೈಲ್ ಫೋನ್‍ನಲ್ಲಿ ಕಾಲಹರಣ ಮಾಡುತ್ತಾರೆ. ಪಾಠ ಮಾಡದೆ ಉತ್ತರ ಹೇಳಿ ಎಂದು ಗದರಿಸುವುದು ಹೊಡೆಯುವುದು ಮಾಡುತ್ತಾರೆ ಎಂದು ಶಾಲಾ ಮಕ್ಕಳು ಆರೋಪಿಸಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ; ಯಾವುದೇ ಆದೇಶ ನೀಡದೆ 7 ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದ ಸುಪ್ರೀಂ

ಹೀಗಾಗಿ ಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಲಾ ಸುಧಾರಣಾ ಸಮಿತಿಯವರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ವರ್ತಿಸಿರುವ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.

ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಪ್ರಚಾರವಾದ ಬಳಿಕ ಎಚ್ಚೆತ್ತುಕೊಂಡ ಡಿಡಿಪಿಐ ಶಿಕ್ಷಕಿ ಅರ್ಚನಾಗೆ ವರ್ಗಾವಣೆ ಶಿಕ್ಷೆ ನೀಡಿದೆ.   

 
Published by:Latha CG
First published: