ಮೈಸೂರು: ಈ ಹಿಂದೆ ರಾಜಧಾನಿ ಬೆಂಗಳೂರಿನಿಂದ ಜೀವಂತ ಹೃದಯ ರವಾನಿಸಿದಂತೆ ಇದೀಗ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದಲೂ ಇದೇ ಮೊದಲ ಬಾರಿಗೆ ಜೀವಂತ ಹೃದಯ ಹಾಗೂ ಶ್ವಾಸಕೋಶವನ್ನು ಚೆನ್ನೈಗೆ ರವಾನಿಸಲಾಗಿದೆ.
ಮೈಸೂರಿನ ಅಪೋಲೊ ಆಸ್ಪತ್ರೆಯಿಂದ ಜೀವಂತ ಹೃದಯ ಹಾಗೂ ಶ್ವಾಸಕೋಶವನ್ನು ಮೈಸೂರ ನಗರ ಪೊಲೀಸರ ಸಹಕಾರದಿಂದ ಝೀರೊ ಟ್ರಾಫಿಕ್ ಮೂಲಕ ಆ್ಯಂಬುಲೆನ್ಸ್ನಲ್ಲಿ ವಿಮಾನ ನಿಲ್ದಾಣದವರೆಗೆ ಸಾಗಿಸಲಾಗಿದೆ. ಆಸ್ಪತ್ರೆಯಿಂದ ಹೊರಟ ಆ್ಯಂಬುಲೆನ್ಸ್ ಕಾಂತರಾಜ ಅರಸು ರಸ್ತೆ, ಕೆ.ಜಿ.ಕೊಪ್ಪಲು. ಬಲ್ಲಾಳ್ ವೃತ್ತ ಚಾಮುಂಡಿಪುರಂ, ಎಲೆ ತೋಟ, ಊಟಿ ರಸ್ತೆ ಮೂಲಕ ವಿಮಾನ ನಿಲ್ದಾಣವನ್ನು ಕೆಲವೇ ನಿಮಿಷಗಳಲ್ಲಿ ತಲುಪಿಸಿದೆ. ಆನಂತರ ವಿಮಾನದ ಮೂಲಕ ಜೀವಂತ ಹೃದಯ ಮತ್ತು ಶಾಸಕೋಶವನ್ನು ಚೆನೈಗೆ ಯಶಸ್ವಿಯಾಗಿ ರವಾನಿಸಲಾಯಿತು.
ಇದನ್ನು ಓದಿ: ವೈದ್ಯಲೋಕದ ಹೊಸ ಮೈಲಿಗಲ್ಲು: ಡ್ರೋನ್ ಮೂಲಕ ಅಂಗಾಂಗ ರವಾನಿಸಿ ಯಶಸ್ವಿ ಶಸ್ತ್ರಚಿಕಿತ್ಸೆ
ಮಂಡ್ಯ ಮೂಲದ ವ್ಯಕ್ತಿಯೊಬ್ಬರು ವಾಕ್ ಮಾಡುವಾಗ ಅಪಘಾತದಿಂದ ನೆನ್ನೆ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಟ್ರಮ್ಯಾಟಿಕ್ ಬ್ರೈನ್ ಇಂಜುರಿಯಿಂದ ಬಳಲುತ್ತಿದ್ದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ದೃಢಪಟ್ಟಾಗ, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಗಾಂಗಗನ್ನು ಆಸ್ಪತ್ರೆ ವೈದ್ಯರು ಪಡೆದಿದ್ದಾರೆ. ನಂತರ ಚೆನ್ನೈನ ಆಸ್ಪತ್ರೆಯಲ್ಲಿ ಹೃದಯದ ಅವಶ್ಯಕತೆ ಇರುವುದನ್ನು ಅರಿತು, ಹೃದಯ ಮತ್ತು ಶಾಸಕೋಶವನ್ನು ಚೆನ್ನೈಗೆ ರವಾನಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ