ತಮಿಳುನಾಡಿನ ರಾಮೇಶ್ವರಂ ಬೀಚ್​ನಲ್ಲಿ ಚಿತ್ರದುರ್ಗದ ವಿದ್ಯಾರ್ಥಿ ಮುಳುಗಿ ಸಾವು

ಸದ್ಯ ತಮಿಳುನಾಡು ಪೊಲೀಸರು ಹಾಗೂ ಈಜುತಜ್ಞರು ಪ್ರಜ್ವಲ್​ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ದಿನ ಕಳೆದರೂ ಇನ್ನೂ ಸಹ ಮೃತದೇಹ ಸಿಕ್ಕಿಲ್ಲ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಚಿತ್ರದುರ್ಗ(ಡಿ.30): ತಮಿಳುನಾಡಿಗೆ ಶಾಲಾ ಪ್ರವಾಸ ತೆರಳಿದ್ದ ಚಿತ್ರದುರ್ಗದ ವಿದ್ಯಾರ್ಥಿ ಅಲ್ಲಿನ ರಾಮೇಶ್ವರಂ ಬೀಚ್​​ನಲ್ಲಿ ಈಜುವ ವೇಳೆ ಮುಳುಗಿ ಸತ್ತಿರುವ ಘಟನೆ ಭಾನುವಾರ ನಡೆದಿದೆ. 

  ಪ್ರಜ್ವಲ್​​(19) ಮೃತಪಟ್ಟ ವಿದ್ಯಾರ್ಥಿ. ಈತ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ. ಭಾನುವಾರ ಕಾಲೇಜಿನಿಂದ ತಮಿಳುನಾಡಿನ ರಾಮೇಶ್ವರಂ ಬೀಚ್​​ಗೆ ಶೈಕ್ಷಣಿಕ ಪ್ರವಾಸ ತೆರಳಿದ್ದರು. ಈ ವೇಳೆ ಪ್ರಜ್ವಲ್ ಈಜಾಡಲು​​​​​ ತನ್ನ ಗೆಳೆಯರ ಜೊತೆ ಸಮುದ್ರಕ್ಕೆ ಇಳಿದಿದ್ದ. ಆದರೆ ಅಲೆಗಳಿಗೆ ಸಿಲುಕಿದ ಪ್ರಜ್ವಲ್ ಸಮುದ್ರದಿಂದ​ ವಾಪಸ್​ ಬರಲೇ ಇಲ್ಲ.

  ಮರಾಠಿಗನ್ನು ಭಾವನಾತ್ಮಕವಾಗಿ ಹಿಡಿದಿಡಲು ಉದ್ಧವ್​​​​​ ಠಾಕ್ರೆ ಗಡಿ ಅಸ್ತ್ರ ಪ್ರಯೋಗ..!

  ಭಯಭೀತರಾದ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ತಮಿಳುನಾಡು ಪೊಲೀಸರು ಹಾಗೂ ಈಜುತಜ್ಞರು ಪ್ರಜ್ವಲ್​ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ದಿನ ಕಳೆದರೂ ಇನ್ನೂ ಸಹ ಮೃತದೇಹ ಸಿಕ್ಕಿಲ್ಲ. 

  ಚಿತ್ರದುರ್ಗ ಜಿಲ್ಲೆಯ ಆದ್ರಿಕಟ್ಟೆ ಗ್ರಾಮದ ರವಿ, ಸುಮಾ ದಂಪತಿ ಪುತ್ರ ಪ್ರಜ್ವಲ್.  ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಶಾಕ್​ ಆಗಿದ್ದಾರೆ. ಕೂಡಲೇ ಪ್ರವಾಸ ತೆರಳಿದ್ದ ಉಪನ್ಯಾಸಕರು ಮತ್ತು ಮಗನ ಗೆಳೆಯರಿಗೆ ಫೋನ್ ಮಾಡಿದ್ದಾರೆ. ಆದರೆ ಅವರ ಫೋನ್​ಗಳು ಸ್ವಿಚ್​​ ಆಫ್​ ಆಗಿವೆ. ಇದರಿಂದ ಇನ್ನೂ ಭಯಭೀತರಾದ ಪೋಷಕರು ಹಾಗೂ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿದ್ಧಾರೆ ಎಂದು ತಿಳಿದು ಬಂದಿದೆ.

  ದೆಹಲಿಯಲ್ಲಿ ಕವಿದ ದಟ್ಟ ಮಂಜು; 30 ರೈಲು, 50 ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವಿಳಂಬ
  Published by:Latha CG
  First published: