• Home
  • »
  • News
  • »
  • state
  • »
  • Student Suicide: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

Student Suicide: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಆತ್ಮಹತ್ಯೆಗೆ ಶರಣಾದ ಅಮೃತಾ

ಆತ್ಮಹತ್ಯೆಗೆ ಶರಣಾದ ಅಮೃತಾ

ಶಾಲೆಯಲ್ಲಿ ಟೆಸ್ಟ್‌ ನಡೆಯುತ್ತಿದ್ದ ವೇಳೆ ಅಮೃತಾ ಕಾಪಿ ಚೀಟಿ ಇಟ್ಟುಕೊಂಡು ಟೆಸ್ಟ್ ಬರೆದಿದ್ದಾಳೆ. ಇದನ್ನು ಕಂಡ ಶಾಲಾ ಶಿಕ್ಷಕಿ ಶಾಲಿನಿ ಕೋಪಗೊಂಡು ಹಿಗ್ಗಾಮುಗ್ಗಾ ಬೈದಿದ್ದಾರೆ. ಇದ್ರಿಂದ ಮನನೊಂದ ಅಮೃತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.14): ಪರೀಕ್ಷೆಯಲ್ಲಿ (Exam) ಕಾಪಿ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕಿ ನಿಂದಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ (Student Suicide) ಶರಣಾಗಿರುವ ಘಟನೆ ಬಾಣಸವಾಡಿಯ (Banasavadi) ಪಿಳ್ಳಾರೆಡ್ಡಿ ನಗರದಲ್ಲಿ ನಡೆದಿದೆ. 15 ವರ್ಷದ ಅಮೃತಾ ಡೆತ್​ ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಬಾಣಸವಾಡಿಯ ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ (SSLC) ಓದುತ್ತಿದ್ದ ಅಮೃತಾ ಪರೀಕ್ಷೆಯಲ್ಲಿ  ಕಾಪಿ ಮಾಡ್ತಿದ್ರು ಎಂದು ಶಿಕ್ಷಕಿ ಶಾಲಿನಿ (Teacher) ನಿಂದಿಸಿದ್ದರಂತೆ. ಎಲ್ಲಾ ವಿದ್ಯಾರ್ಥಿಗಳ ಮುಂದೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.


ನಿನ್ನೆ ಸಂಜೆ ಅಮೃತಾ ನೇಣಿಗೆ ಶರಣು


ಅಮೃತಾ ನಿನ್ನೆ ಸಂಜೆ ಶಾಲೆಯಿಂದ ಬಂದ ಬಳಿಕ ಸುಮಾರು 5.15ಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪಿ ಚೀಟಿ ತಂದಿದ್ದಳು ಎಂದು  ಟೀಚರ್ ಶಾಲಿನಿ ಅಮೃತಾಗೆ ಎಲ್ಲರ ಮುಂದೆ ಬೈದಿದ್ದಾರೆ. ಮರಿಯಂ ನಿಲಯ ಇಂಗ್ಲಿಷ್ ಸ್ಕೂಲ್ ನಲ್ಲಿ ಎಸ್ಎಸ್ಎಲ್​ಸಿ ಓದುತ್ತಿದ್ದ ಅಮೃತಾ ಅವಮಾನದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.


ಕಾಪಿ ಮಾಡಿದ್ದನ್ನು ಕಂಡು ಬೈಯ್ದ ಶಿಕ್ಷಕಿ


ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದ ಅಮೃತಾ ಎಲ್​ಕೆಜಿಯಿಂದ ಇದೆ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನವೆಂಬರ್ 2 ರಂದು SSLC ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಟೆಸ್ಟ್‌ ನಡೆಸಲಾಗಿತ್ತು. ಈ ವೇಳೆ ಅಮೃತಾ ಕಾಪಿ ಚೀಟಿ ಇಟ್ಟುಕೊಂಡು ಟೆಸ್ಟ್ ಬರೆದಿದ್ದಾಳೆ. ಇದನ್ನು ಕಂಡ ಶಾಲಾ ಶಿಕ್ಷಕಿ ಶಾಲಿನಿ ಕೋಪಗೊಂಡು ಹಿಗ್ಗಾಮುಗ್ಗಾ ಬೈದಿದ್ದಾರೆ.


 


ಪದೇ ಪದೇ ಅವಮಾನಿಸಿದ್ದ ಶಿಕ್ಷಕಿ


ಅಷ್ಟೇ ಅಲ್ಲದೇ ಘಟನೆ ಕಳೆದು ವಾರವಾದ್ರೂ  ಶಿಕ್ಷಕಿ ಶಾಲಿನಿ ಅವರು ಶಾಲೆಯಲ್ಲಿ ಅಮೃತಾಳನ್ನು ನೋಡಿದಾಗಲೆಲ್ಲಾ ಅವಮಾನ ಮಾಡುತ್ತಿದ್ದರಂತೆ. ಸ್ನೇಹಿತರು ಕೂಡ ಕಾಪಿ ಮಾಡಲು ಹೋಗಿ ಸಿಕ್ಕಿಕೊಂಡವಳು ಎಂದು ರೇಗಿಸುತ್ತಿದ್ದರಂತೆ ಶಾಲೆಯಲ್ಲಿ ಸ್ನೇಹಿತರ ಎದುರು ಆದ ಅವಮಾನಕ್ಕೆ ಮನನೊಂದ ಅಮೃತಾ ಡೆತ್​ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.


ಶಿಕ್ಷಕಿ ವಿರುದ್ಧ ಅಮೃತಾ ತಾಯಿ ಆಕ್ರೋಶ 


ಅಮೃತಾಳ ಸಾವಿಗೆ ನ್ಯಾಯ ಸಿಗಬೇಕೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕಿ ವಿರುದ್ಧ ಅಮೃತಾ ತಾಯಿ ಆಕ್ರೋಶ  ಹೊರಹಾಕಿದ್ದಾರೆ. ಪರೀಕ್ಷೆ ವೇಳೆ ಮತ್ತೊಂದು ಹುಡುಗಿ ಚೀಟಿ ತಂದಿದ್ದಳಂತೆ ಆದ್ರೆ ಶಿಕ್ಷಕಿ ಶಾಲಿನಿ ಅವರು ಅಮೃತಳನ್ನೇ ಟಾರ್ಗೆಟ್ ಮಾಡಿ ನಿಂದಿಸಿದ್ದಾರೆ. ಬೇರೆ ಕ್ಲಾಸ್ ರೂಂಗಳಿಗೂ ಹೋಗಿ ಅಮೃತ ಬಗ್ಗೆ ಉಲ್ಲೇಖಿಸಿ ಅವಳಿಗೆ ಅವಮಾನವಾಗುವಂತೆ ಬೈದಿದ್ದಾರೆ. ಬುಧವಾರ ಶಾಲೆಗೆ ರಜೆ ಎಂದು ಮೆಸೇಜ್​ ಬಂದಿತ್ತು. ಆದ್ರೆ ಅದೇ ದಿನ ಹಿಂದಿ ಎಕ್ಸಾಂ ಮಾಡಿದ್ದಾರೆ. ಶಾಲೆಯವ್ರು ಬೇಕಂತಲೇ ಎಕ್ಸಾಂ ತಪ್ಪಿಸಿದ್ದಾರೆ ಅಂತ ವಿದ್ಯಾರ್ಥಿನಿ ಅಮೃತ ತಾಯಿ ಆಶಾ ಆರೋಪ ಮಾಡಿದ್ದಾರೆ.


ಶಾಲೆಯ ಪ್ರಿನ್ಸಿಪಾಲ್ ಸ್ಪಷ್ಟನೆ


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮರಿಯಂ ನಿಲಯ ಶಾಲೆಯ ಪ್ರಿನ್ಸಿಪಾಲ್ ಐರಿನ್, ಶಾಲೆಯಲ್ಲಿ ಟೆಸ್ಟ್ ನಡೀತಾ ಇತ್ತು ಅದು ಕೂಡ ತುಂಬಾ ಮುಖ್ಯ,  8ನೇ ತಾರೀಖಿನವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ಟೆಸ್ಟ್ ನಡೆದಿದೆ. ಈ ವೇಳೆ ಆಕೆ ಚೀಟಿ ತಂದಿರೋದು ನಮಗೆ ಗೊತ್ತಾಗಿದೆ. ಅದಾದ ಬಳಿಕವೂ ಟೆಸ್ಟ್ ಬರಿಯೋಕೆ ಅವಕಾಶ ಕೊಟ್ಟಿದ್ದೇವೆ. ಮತ್ತೊಂದು ದಿನ ಶಾಲೆಗೆ ಲೇಟಾಗಿ ಬಂದಿದ್ದಾಳೆ. ಲೇಟಾಗಿ ಬಂದ್ರು ಆಕೆಯ ಟೈಮ್ ಗೆ ಅಜೆಸ್ಟ್ ಮಾಡಿ ಟೆಸ್ಟ್ ಕೆೊಟ್ಟಿದ್ದೇವೆ ಎಂದ್ರು.


ಇದನ್ನೂ ಓದಿ: Suicide: ಹೆಣ್ಣು ಮಗುವಾಗಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ತಂದೆ, ಕೋಲಾರದಲ್ಲೊಂದು ವಿಚಿತ್ರ ಘಟನೆ


ನಾನೇ ಎಲ್ಲಾ ಟೀಚರ್ಸ್ ಗೂ ಮೆಸೇಜ್ ಮಾಡೋದು ಬಳಿಕ ಅವರು ಪೋಷಕರಿಗೆ ಫಾರ್ವಡ್​ ಮಾಡ್ತಾರೆ. ಮಕ್ಕಳ ದಿನಾಚರಣೆ  ಬಗ್ಗೆ ಮೆಸೇಜ್ ಮಾಡಿದ್ದೇವೆ. ಟೀಚರ್ಸ್ ಯಾರೂ ಆ ತರ ಮಾಡಲ್ಲ. ಯಾವ ವಿದ್ಯಾರ್ಥಿ ತಪ್ಪು ಮಾಡಿದ್ರು ನಾವು ತಿದ್ದಿಕೊಳ್ತೀವಿ ಎಂದು ಪ್ರಿನ್ಸಿಪಾಲ್​ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: