HOME » NEWS » State » A STUDENT COMMIT TO SUICIDE AT RAICHUR SBR LG

Crime News: ಕಾಲೇಜಿಗೆ ಸರಿಯಾಗಿ ಹೋಗು ಎಂದಿದ್ದೆ ತಪ್ಪಾಯ್ತು; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ನಾಲ್ಕೈದು ದಿನಗಳಿಂದ ಕಾಲೇಜು ಬಿಟ್ಟು ಮನೆಯಲ್ಲಿದ್ದ ವಿದ್ಯಾರ್ಥಿಗೆ, ತಾಯಿ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಮಾತು ಹೇಳಿದ್ಕೆ ದುಡುಕಿದ ಆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

news18-kannada
Updated:March 16, 2021, 2:23 PM IST
Crime News: ಕಾಲೇಜಿಗೆ ಸರಿಯಾಗಿ ಹೋಗು ಎಂದಿದ್ದೆ ತಪ್ಪಾಯ್ತು; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಮಾ.16): ಬಾಲ್ಯ ಹಾಗೂ ಪ್ರೌಢಾವಸ್ಥೆಯಲ್ಲಿರುವಾಗ ಮಕ್ಕಳಿಗೆ ಗದರಿಸುವುದು, ಬೈಯುವುದು, ಒಂದೆರಡು ಏಟು ಹಾಕುವುದು ಸಹಜ. ಆದರೆ ಇಲ್ಲೊಬ್ಬ ವಿದ್ಯಾರ್ಥಿಗೆ ತಂದೆ ತಾಯಿ ಬೈಯ್ದರು ಎಂಬ ಒಂದೇ ಕಾರಣಕ್ಕೆ ಜೀವ ಕಳೆದುಕೊಂಡಿದ್ದಾನೆ. ಮನೆಯಿಂದ ಹಾಸ್ಟೆಲ್ ಗೆ ಬರುವ ಮುನ್ನವೇ ವಿಷ ಕುಡಿದಿದ್ದಾನೆ. ಬೆಳೆಯುವ ಮಗ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬಸ್ಥರ ನೋವು, ಆಕ್ರಂದನ ಮುಗಿಲು ಮುಟ್ಟಿದೆ.

ಹೈಸ್ಕೂಲ್ ಮುಗಿಸಿ, ಪದವಿ ಪೂರ್ವ ಶಿಕ್ಷಣ ಮುಗಿಸಿ ಓದಿನಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಹಾಗು ಪ್ರತಿಭಾವಂತನಾಗಿರುವ ವಿದ್ಯಾರ್ಥಿಯು  ಪದವಿ ಮೊದಲನೇ ವರ್ಷದಲ್ಲಿ ಅಭ್ಯಾಸ ಮಾಡ್ತಿದ್ದ ವಿದ್ಯಾರ್ಥಿ. ನಾಲ್ಕೈದು ದಿನಗಳಿಂದ ಕಾಲೇಜು ಬಿಟ್ಟು ಮನೆಯಲ್ಲಿದ್ದ ವಿದ್ಯಾರ್ಥಿಗೆ, ತಾಯಿ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಮಾತು ಹೇಳಿದ್ಕೆ ದುಡುಕಿದ ಆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿ ಮನೆಗೆ ಬಂದಿದ್ದಕ್ಕೆ ಎಷ್ಟು ದಿನ ಮನೇಲೇ ಇರ್ತೀಯಾ ಎಂದು ಬೈದು ಬುದ್ದಿ ಮಾತು ಹೇಳಿದ್ದ ತಾಯಿಯ ಮಾತನ್ನೇ ಮನಸಿಗೆ ಹಚ್ಚಿಕೊಂಡ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದಿದೆ. ಲಿಂಗಸಗೂರು ತಾಲೂಕಿನ ಗುಂತಗೋಳ ಗ್ರಾಮದ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿರೋ ದುರ್ದೈವಿ.

ಆನೇಕಲ್: ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯಾದ ರೈತ ಸಂತೆ

ಬಿಎ ಮೊದಲನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ ಮಂಜುನಾಥ ಲಿಂಗಸಗೂರಿನ ಎಸ್ಟಿ ಹಾಸ್ಟೇಲ್ ನಲ್ಲಿದ್ದ. ರಜೆ ಹಿನ್ನೆಲೆ ಸ್ವಗ್ರಾಮಕ್ಕೆ ಹೋಗಿದ್ದ ಮಂಜುನಾಥ ವಾಪಾಸ್ ಕಾಲೇಜಿಗೆ ಹೋಗಿರಲಿಲ್ಲ. ಬದಲಾಗಿ ಊರಲ್ಲೇ ಖಾಲಿ ತಿರುಗಾಡ್ತಿದ್ದ ಮಂಜುನಾಥನಿಗೆ ಚೆನ್ನಾಗಿ ಓದು ಎಂದು ಬೈದು ಬಿದ್ದಿ ಹೇಳಿ, ಹಾಸ್ಟೇಲ್ ಗೆ ಹೋಗುವಂತೆ ಹೇಳಿದ್ದಾಳೆ. ಇದನ್ನೇ ನೆಪವಾಗಿಟ್ಕೊಂಡ ರಂಗನಾಥ ಹಾಸ್ಟೆಲ್ ಗೆ ಹೋಗುವಾಗಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಾಸ್ಟೆಲ್ ಗೆ ಬರುವ ಮುನ್ನವೇ ಮಂಜುನಾಥ್ ವಿಷ ಸೇವಿಸಿ ಹಾಸ್ಟೆಲ್ ಗೆ ಎಂಟ್ರಿ ಕೊಟ್ಟಿದ್ದ. ಹಾಸ್ಟೆಲ್ ಗೆ ಬಂದಾಗ ಅದಾಗಲೇ ಅಸ್ವಸ್ಥಗೊಂಡಿದ್ದ ಮಂಜುನಾಥನ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೂ ಯಾರಿಗೂ ಹೇಳಿರಲಿಲ್ಲ ಅಸ್ವಸ್ಥನಂತ ಕಂಡಿದ್ದರಿಂದ ಸ್ನೇಹಿತರು ಕೇಳಿದ್ದಾರೆ, ಮೊದಲು ಹೇಳಿಲ್ಲ ಕೊನೆಗೆ ಸ್ನೇಹಿತರು ಒತ್ತಾಯಿಸಿದಾಗ ತನ್ನದೇ ರೂಮ್ ನಲ್ಲಿದ್ದ ಸ್ನೇಹಿತರಿಗೆ ವಿಷ ಸೇವಿಸಿರೋ ವಿಚಾರವನ್ನ ತಿಳಿಸಿದ್ದಾನೆ. ಕೂಡಲೇ ಹಾಸ್ಟೆಲ್ ಸ್ನೇಹಿತರು ರಂಗನಾಥನನ್ನ ಲಿಂಗಸಗೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪರಿಸ್ಥಿತಿ ಚಿಂತಾಜನಕವಾಗಿದ್ರಿಂದ ರಾಯಚೂರಿನ ರೀಮ್ಸ್ ಗೆ ಕರೆತರುವಾಗ ಮಾರ್ಗಮಧ್ಯೆಯೇ ಮಂಜುನಾಥ್ ಕೊನೆಯುಸಿರೆಳೆದಿದ್ದಾನೆ. ಈ ಘಟನೆ ಇಡೀ ಹಾಸ್ಟೇಲ್ ನಲ್ಲಿನ ವಿದ್ಯಾರ್ಥಿಗಳಿಗೆ ದಿಗಿಲು ಬಡಿದಂತಾಗಿದೆ. ತನ್ನ ಮಗ ಓದಿ ಉತ್ತಮ ಸಮಾಜ ನಿರ್ಮಾತೃನಾಗಬೇಕೆಂದು ಕನಸು ಕಟ್ಟಿದ್ದ ಆ ತಾಯಿ ಕನಸು ನುಚ್ಚು ನೂರಾಗಿದೆ.

ಓದೋಕೆ ಹೋಗು ಅಂತಾ ಬುದ್ದಿ ಮಾತು ಹೇಳಿದ್ರಿಂದ ದುಡುಕಿದ ಮಂಜುನಾಥ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದು ಮಾತ್ರ ದುರಂತವೇ ಸರಿ. ಇಂದಿನ ದಿನಗಳಲ್ಲಿ ಯುವಕರು, ಮಕ್ಕಳ ಮನಸ್ಸು ಎಷ್ಟು ಸೂಕ್ಷವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ, ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಗಿದೆ
Published by: Latha CG
First published: March 16, 2021, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories