ನಿರುದ್ಯೋಗಿಗಳಿಗೆ ನೆರವಿನ ಹಸ್ತ: ಕೆಲಸ ಹೋದರೆ 1 ತಿಂಗಳ ಸಂಬಳ, ಉದ್ಯೋಗ ಕೊಡತ್ತೆ ಈ ಸಂಸ್ಥೆ
news18
Updated:August 22, 2018, 7:14 PM IST
news18
Updated: August 22, 2018, 7:14 PM IST
ಸೀಮಾ. ಆರ್, ನ್ಯೂಸ್ 18 ಕನ್ನಡ
ಬೆಂಗಳೂರು (ಆ.22): ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಉದ್ಯೋಗದ ಅಭದ್ರತೆ ಕಾಡದೇ ಇರದು. ಒಂದು ಕಂಪನಿಯೊಂದಿಗಿನ ಉದ್ಯೋಗ ಒಪ್ಪಂದ ಮುಗಿದರೆ ಮುಂದೇನು ಮಾಡುವುದು ಎಂಬ ಭಯ ಪ್ರತಿಯೊಬ್ಬರನ್ನೂ ಕಾಡುತ್ತದೆ. ಕೆಲಸ ಕಳೆದುಕೊಂಡ ಮೇಲೆ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಶುರುವಾಗುತ್ತದೆ. ಆದರೆ ಈ ಚಿಂತೆ ಇನ್ನುಮುಂದೆ ಇರುವುದಿಲ್ಲ. ಕಾರಣ ಬೆಂಗಳೂರಿನ ಈ ಖಾಸಗಿ ಸಂಸ್ಥೆ. ನಿರುದ್ಯೋಗ ಸಮಸ್ಯೆಗೆ ಈ ಸಂಸ್ಥೆಯಲ್ಲಿದೆ ಪರಿಹಾರ. ಇದು ಮರುಭೂಮಿಯ ಓಯೆಸಿಸ್ ಎಂದರೂ ತಪ್ಪಾಗಲಾರದು.
ಇಲ್ಲೊಂದು ಖಾಸಗಿ ಸಂಸ್ಥೆ ನೀವು ಕೆಲಸ ಕಳೆದುಕೊಂಡ ಮೇಲೆ ಒಂದು ತಿಂಗಳ ಕಾಲ ನಿಮ್ಮ ಖರ್ಚು ವೆಚ್ಚವನ್ನ ಭರಿಸಲಿದೆ. ನಿರುದ್ಯೋಗಿಗಳಿಗೆ ಅಪತ್ಭಾಂದವನಂತೆ ಕೆಲಸ ಮಾಡುತ್ತಿರುವ ಈ ಸಂಸ್ಥೆ ಯಾವುದು ಅಂತ ತಿಳಿಯುವುದಕ್ಕೆ ಈ ವರದಿ ಓದಿ.
ಖಾಸಗಿ ಕ್ಷೇತ್ರಗಳಲ್ಲಿ ಒಪ್ಪಂದದ ಮೇರೆಗೆ ಕೆಲಸ ಮಾಡುವವರೇ ಹೆಚ್ಚು. ಒಂದು ಸಂಸ್ಥೆಯಲ್ಲಿ ಒಪ್ಪಂದ ಮುಗಿದಾಕ್ಷಣ ಮತ್ತೆ ಉದ್ಯೋಗ ಬೇಟೆಯ ಭಯ ಆರಂಭವಾಗುತ್ತದೆ. ಈ ಮಧ್ಯೆ ಕೈಯಲ್ಲಿ ಬಿಡಿಗಾಸು ಇಲ್ಲದೇ ಜೀವನ ನಡೆಸುವುದು ಸುಲಭವಲ್ಲ. ಆದರೆ, ಇನ್ನು ಮುಂದೆ ನಿಮಗೆ ಕೆಲಸ ಹುಡುಕುವವರೆಗೂ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಎಲ್ಲ ಒತ್ತಡಗಳನ್ನು ನಿವಾರಿಸಿ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಕೆಲಸವನ್ನು ಕೊಡಿಸಲು ಸಹಾಯ ಮಾಡುವ ಸಂಸ್ಥೆಯೊಂದು ಆರಂಭವಾಗಿದೆ.ಬೆಂಗಳೂರಿನ ಸಂದೇಶ್ ಕಂಗೋಡ್, ಗೀತಾ ಪ್ರಭು ಎಂಬ ಯುವ ಉದ್ಯೋಗಿಗಳಿಬ್ಬರು ಶುರುಮಾಡಿರುವ Workflexi ಎಂಬ ಸಂಸ್ಥೆ ಖಾಸಗಿ ಉದ್ಯೋಗಗಳಿಗೆ ಸಹಾಯದ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ದೊಮ್ಮಲೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಖಾಸಗಿ ಉದ್ಯೋಗಿಗಳಿಗೆ ವರದಾನವಾಗಿದೆ.
ವ್ಯಕ್ತಿಯೊಬ್ಬ ಒಂದು ಸಂಸ್ಥೆಯಲ್ಲಿ ಒಪ್ಪಂದದ ಉದ್ಯೋಗ ಮಾಡಿದರೆ ಆ ಒಪ್ಪಂದ ಮುಗಿದ ಬಳಿಕ ಆತ ಮುಂದೇನು ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೇ ಮುಂದಿನ ಕೆಲಸ ಹುಡುಕುವರೆಗೂ ಖರ್ಚು ಹೇಗೆ ತೂಗಿಸುವುದು ಎಂಬ ಚಿಂತೆಗೆ ಈ ಸಂಸ್ಥೆ ಮುಕ್ತಿ ನೀಡುತ್ತದೆ. ಈ ಖಾಸಗಿ ಸಂಸ್ಥೆಯಲ್ಲಿ ಒಮ್ಮೆ ನೋಂದಣಿ ಮಾಡಿಕೊಂಡರೆ ಸಾಕು ಒಂದು ತಿಂಗಳ ಸಂಬಳ ಜೊತೆಯಲ್ಲಿ ಬೇರೆ ಸಂಸ್ಥೆಗೆ ಉದ್ಯೋಗ ಸಿಗಲು ಶಿಫಾರಸ್ಸು ಕೂಡ ಮಾಡುತ್ತದೆ.
ವರ್ಕ್ಫ್ಲೆಕ್ಸ್ ವೆಬ್ ಜಾಲತಾಣದಲ್ಲಿ ಒಮ್ಮೆ ಲಾಗಿನ್ ಆಗಿ ಅದರ ಸಬ್ಸ್ಕ್ರೈಬರ್ ಆದರೆ ಸಾಕು. ಅಲ್ಲಿ ನಿಮ್ಮ ಕೆಲಸದ ವಿವರ ದಾಖಲು ಮಾಡಬೇಕು. ಬಳಿಕ ನಿಮ್ಮ ಒಪ್ಪಂದದ ಕೆಲಸ ಮುಗಿದ ಒಂದು ತಿಂಗಳು ನಿಮ್ಮ ಸಂಬಳವನ್ನು ಈ ತಾಣ ನೀಡುತ್ತದೆ. ಅಲ್ಲದೇ, ಬೇರೆ ಕಂಪನಿಗಳಿಗೆ ನಿಮ್ಮನ್ನು ಶಿಫಾರಸ್ಸು ಮಾಡುತ್ತದೆ. ಇದರಿಂದ ನಿಮಗೆ ಉದ್ಯೋಗದ ಅಭದ್ರತೆ ಇರುವುದಿಲ್ಲ. ಅಲ್ಲದೇ ಇದಕ್ಕೆ ಸಬ್ ಸ್ಕ್ರೈಬ್ ಆಗಲು ಉದ್ಯೋಗಿ ಯಾವುದೇ ಹಣವನ್ನು ಕೂಡ ನೀಡುವ ಅವಶ್ಯಕತೆ ಇಲ್ಲ.ವರ್ಕ್ಫ್ಲೆಕ್ಸ್ ತಾಣ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 50 ಕಂಪನಿಗಳು ಈ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ 50 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೂಡ ಇದರ ಪ್ರಯೋಜನ ಪಡೆದಿದ್ದಾರೆ.
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಹೆಚ್ಚಿನ ಮಾಹಿತಿಗೆ ಈ ತಾಣಕ್ಕೆ ಭೇಟಿ ಮಾಡಿ.
https://workflexi.in/blog/index.php/read/bench-insecurity-bps-shows-the-way ಅಥವಾ https://workflexi.in/
ಬೆಂಗಳೂರು (ಆ.22): ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಉದ್ಯೋಗದ ಅಭದ್ರತೆ ಕಾಡದೇ ಇರದು. ಒಂದು ಕಂಪನಿಯೊಂದಿಗಿನ ಉದ್ಯೋಗ ಒಪ್ಪಂದ ಮುಗಿದರೆ ಮುಂದೇನು ಮಾಡುವುದು ಎಂಬ ಭಯ ಪ್ರತಿಯೊಬ್ಬರನ್ನೂ ಕಾಡುತ್ತದೆ. ಕೆಲಸ ಕಳೆದುಕೊಂಡ ಮೇಲೆ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಶುರುವಾಗುತ್ತದೆ. ಆದರೆ ಈ ಚಿಂತೆ ಇನ್ನುಮುಂದೆ ಇರುವುದಿಲ್ಲ. ಕಾರಣ ಬೆಂಗಳೂರಿನ ಈ ಖಾಸಗಿ ಸಂಸ್ಥೆ. ನಿರುದ್ಯೋಗ ಸಮಸ್ಯೆಗೆ ಈ ಸಂಸ್ಥೆಯಲ್ಲಿದೆ ಪರಿಹಾರ. ಇದು ಮರುಭೂಮಿಯ ಓಯೆಸಿಸ್ ಎಂದರೂ ತಪ್ಪಾಗಲಾರದು.
ಇಲ್ಲೊಂದು ಖಾಸಗಿ ಸಂಸ್ಥೆ ನೀವು ಕೆಲಸ ಕಳೆದುಕೊಂಡ ಮೇಲೆ ಒಂದು ತಿಂಗಳ ಕಾಲ ನಿಮ್ಮ ಖರ್ಚು ವೆಚ್ಚವನ್ನ ಭರಿಸಲಿದೆ. ನಿರುದ್ಯೋಗಿಗಳಿಗೆ ಅಪತ್ಭಾಂದವನಂತೆ ಕೆಲಸ ಮಾಡುತ್ತಿರುವ ಈ ಸಂಸ್ಥೆ ಯಾವುದು ಅಂತ ತಿಳಿಯುವುದಕ್ಕೆ ಈ ವರದಿ ಓದಿ.
ಖಾಸಗಿ ಕ್ಷೇತ್ರಗಳಲ್ಲಿ ಒಪ್ಪಂದದ ಮೇರೆಗೆ ಕೆಲಸ ಮಾಡುವವರೇ ಹೆಚ್ಚು. ಒಂದು ಸಂಸ್ಥೆಯಲ್ಲಿ ಒಪ್ಪಂದ ಮುಗಿದಾಕ್ಷಣ ಮತ್ತೆ ಉದ್ಯೋಗ ಬೇಟೆಯ ಭಯ ಆರಂಭವಾಗುತ್ತದೆ. ಈ ಮಧ್ಯೆ ಕೈಯಲ್ಲಿ ಬಿಡಿಗಾಸು ಇಲ್ಲದೇ ಜೀವನ ನಡೆಸುವುದು ಸುಲಭವಲ್ಲ. ಆದರೆ, ಇನ್ನು ಮುಂದೆ ನಿಮಗೆ ಕೆಲಸ ಹುಡುಕುವವರೆಗೂ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಎಲ್ಲ ಒತ್ತಡಗಳನ್ನು ನಿವಾರಿಸಿ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಕೆಲಸವನ್ನು ಕೊಡಿಸಲು ಸಹಾಯ ಮಾಡುವ ಸಂಸ್ಥೆಯೊಂದು ಆರಂಭವಾಗಿದೆ.ಬೆಂಗಳೂರಿನ ಸಂದೇಶ್ ಕಂಗೋಡ್, ಗೀತಾ ಪ್ರಭು ಎಂಬ ಯುವ ಉದ್ಯೋಗಿಗಳಿಬ್ಬರು ಶುರುಮಾಡಿರುವ Workflexi ಎಂಬ ಸಂಸ್ಥೆ ಖಾಸಗಿ ಉದ್ಯೋಗಗಳಿಗೆ ಸಹಾಯದ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ದೊಮ್ಮಲೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಖಾಸಗಿ ಉದ್ಯೋಗಿಗಳಿಗೆ ವರದಾನವಾಗಿದೆ.
ವ್ಯಕ್ತಿಯೊಬ್ಬ ಒಂದು ಸಂಸ್ಥೆಯಲ್ಲಿ ಒಪ್ಪಂದದ ಉದ್ಯೋಗ ಮಾಡಿದರೆ ಆ ಒಪ್ಪಂದ ಮುಗಿದ ಬಳಿಕ ಆತ ಮುಂದೇನು ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೇ ಮುಂದಿನ ಕೆಲಸ ಹುಡುಕುವರೆಗೂ ಖರ್ಚು ಹೇಗೆ ತೂಗಿಸುವುದು ಎಂಬ ಚಿಂತೆಗೆ ಈ ಸಂಸ್ಥೆ ಮುಕ್ತಿ ನೀಡುತ್ತದೆ. ಈ ಖಾಸಗಿ ಸಂಸ್ಥೆಯಲ್ಲಿ ಒಮ್ಮೆ ನೋಂದಣಿ ಮಾಡಿಕೊಂಡರೆ ಸಾಕು ಒಂದು ತಿಂಗಳ ಸಂಬಳ ಜೊತೆಯಲ್ಲಿ ಬೇರೆ ಸಂಸ್ಥೆಗೆ ಉದ್ಯೋಗ ಸಿಗಲು ಶಿಫಾರಸ್ಸು ಕೂಡ ಮಾಡುತ್ತದೆ.
ವರ್ಕ್ಫ್ಲೆಕ್ಸ್ ವೆಬ್ ಜಾಲತಾಣದಲ್ಲಿ ಒಮ್ಮೆ ಲಾಗಿನ್ ಆಗಿ ಅದರ ಸಬ್ಸ್ಕ್ರೈಬರ್ ಆದರೆ ಸಾಕು. ಅಲ್ಲಿ ನಿಮ್ಮ ಕೆಲಸದ ವಿವರ ದಾಖಲು ಮಾಡಬೇಕು. ಬಳಿಕ ನಿಮ್ಮ ಒಪ್ಪಂದದ ಕೆಲಸ ಮುಗಿದ ಒಂದು ತಿಂಗಳು ನಿಮ್ಮ ಸಂಬಳವನ್ನು ಈ ತಾಣ ನೀಡುತ್ತದೆ. ಅಲ್ಲದೇ, ಬೇರೆ ಕಂಪನಿಗಳಿಗೆ ನಿಮ್ಮನ್ನು ಶಿಫಾರಸ್ಸು ಮಾಡುತ್ತದೆ. ಇದರಿಂದ ನಿಮಗೆ ಉದ್ಯೋಗದ ಅಭದ್ರತೆ ಇರುವುದಿಲ್ಲ. ಅಲ್ಲದೇ ಇದಕ್ಕೆ ಸಬ್ ಸ್ಕ್ರೈಬ್ ಆಗಲು ಉದ್ಯೋಗಿ ಯಾವುದೇ ಹಣವನ್ನು ಕೂಡ ನೀಡುವ ಅವಶ್ಯಕತೆ ಇಲ್ಲ.
Loading...