ಕುಂದಾ ನಗರಿ ವಿಶೇಷ : ಹೀಗೊಂದು ಕೋಳಿ ಪಿಳ್ಳಿ ಜಾತ್ರೆ...!

news18
Updated:August 8, 2018, 6:44 PM IST
ಕುಂದಾ ನಗರಿ ವಿಶೇಷ : ಹೀಗೊಂದು ಕೋಳಿ ಪಿಳ್ಳಿ ಜಾತ್ರೆ...!
news18
Updated: August 8, 2018, 6:44 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ 

ಬೆಳಗಾವಿ ( ಆಗಸ್ಟ್ 08) :  ದೇವರಿಗೆ ಕಾಯಿ, ಕರ್ಪೂರ ಇನ್ನೂ ಹೆಚ್ಚಂದ್ರೆ ಪ್ರಾಣಿಗಳನ್ನು ಬಲಿ ಕೊಟ್ಟು ನೈವೆದ್ಯ ನೀಡುವುದನ್ನು ನಾವು ನೋಡಿದ್ದೇವೆ. ಆದರೇ ಕುಂದಾ ನಗರಿ ಬೆಳಗಾವಿಯಲ್ಲಿ ಈ ದೇವಿಗೆ ಮಾತ್ರ ಜೀವಂತ ಕೋಳಿ ಮರಿಗಳೆ ನೈವೆದ್ಯ ಬೇಕು. ಪ್ರತಿ ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆಯಲ್ಲಿ ಭಕ್ತರು ದೇವಸ್ಥಾನದ ಮೇಲೆ ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸುತ್ತಾರೆ.

ಇಷ್ಟಕ್ಕೂ ಇಂತಹದೊಂದು ಅಪರೂಪದ ಜಾತ್ರೆ ನಡೆಯೋದು ಕುಂದಾ ನಗರಿ ಬೆಳಗಾವಿಯ ವಡಗಾವಿಯಲ್ಲಿ. ಆಷಾಢ ಮಾಸದ ಕೊನೆಯ ಮಂಗಳವಾರ ರಿಂದ ಮೂರು ದಿನಗಳ ಕಾಲ ಮಂಗಾಯಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಜನರ ಮಹಾಪೂರವೇ ಹರಿದು ಬರುತ್ತದೆ. ತಮಗೆ ಎದುರಾದ ಸಮಸ್ಯೆಗಳು ಪರಿಹರಿಸಿದರೆ ಜಾತ್ರೆಯಲ್ಲಿ ಕೋಳಿ ಅರ್ಪಿಸುವುದಾಗಿ ಹರಕೆ ಹೊತ್ತು ಕೊಳ್ಳುತ್ತಾರೆ. ಬೇಡಿಕೆ ಈಡೇರಿದರೆ ಜಾತ್ರೆಗೆ ಬಂದು ಮಂದಿರದ ಮೇಲೆ ಕೋಳಿಮರಿ ಎಸೆದು ಹರಕೆಯನ್ನು ಪೂರೈಸಿಕೊಳ್ಳುತ್ತಾರೆ. ಇನ್ನು ಕೆಲವು ಭಕ್ತರು ಕೋಳಿ, ಕುರಿ ಬಲಿ ಕೊಡುವು ದಾಗಿಯೂ ಹರಕೆ ಹೊತ್ತು ಕೊಳ್ಳುತ್ತಾರೆ.

ಮಂಗಾಯಿ ದೇವಿಗೆ ಪೂಜೆ ಸಲ್ಲಿಸಿ ದರೆ ಮಳೆ-ಬೆಳೆ ಉತ್ತಮವಾಗಿ ಆಗು ತ್ತದೆ ಎಂಬ ನಂಬಿಕೆಯಿಂದ ಸುತ್ತಮುತ್ತ ಲಿನ ರೈತರು ತಪ್ಪದೇ ಪ್ರತಿ ವರ್ಷ ಜಾತ್ರೆಗೆ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ನಿನ್ನೆಯಿಂದ ಆರಂಭವಾಗಿರುವ ಜಾತ್ರೆಯಲ್ಲಿ ಕೋಳಿಮರಿಗಳ ಭರ್ಜರಿ ವ್ಯಾಪರ ನಡೆಯುತ್ತಿದೆ. ಮತ್ತೊಂದು ಕಡೆ ಭಕ್ತರ ಕೋಳಿ ಮರಿಗಳನ್ನು ದೇವಸ್ಥಾನ ಮೇಲೆ ಹಾರಿಸಿ ತಮ್ಮ ಹರಿಸಿ ಪುನಿತರಾಗುತ್ತಿದ್ದಾರೆ.

ನಗರದಲ್ಲಿ ನಡೆಯುವ ವಿಶೇಷ ಜಾತ್ರೆಗೆ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಪ್ರತಿ ವರ್ಷ ನೂರಾರು ಭಕ್ತರು ತಪ್ಪದೇ ಜಾತ್ರೆಗೆ ಆಗಮಿಸುತ್ತಾರೆ. ಕೋಳಿ ಮರಿಯನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ. ಹೀಗೆ ಹರಕೆ ತೀರಿಸುವಾಗ ಎಸೆಯಲಾಗುವ ಕೋಳಿ ಮರಿಗಳು ಸಾವನ್ನಪ್ಪುತ್ತವೆ. ಅದಾವುದನ್ನು ಲೆಕ್ಕಿಸಿದ ಭಕ್ತರು ತಮ್ಮ ಪಾಡಿಗೆ ಕೋಳಿ ಮರಿ ಎಸೆದು ಹರಿಕೆ ತೀರಿಸಿದ ಸಂತೃಪ್ತಿಯಲ್ಲಿ ಹೊರಟು ಹೋಗುತ್ತಾರೆ. ಆದರೇ ದೇವಸ್ಥಾನದ ಮೇಲೆ ಎಸದಿರುವ ಕೋಳಿ ಮರಿಗಳನ್ನು ಸಂಗ್ರಹಿಸಿ ದೇವಸ್ಥಾನದವರು ಮತ್ತೆ ಅವುಗಳನ್ನು ಮಾರುತ್ತಾರೆ. ಹೀಗೆ ಮೂರು ದಿನಗಳ ಜಾತ್ರೆಯಲ್ಲಿ ಸಾವಿರಾರು ಕೋಳಿ ಮರಿಗಳನ್ನು ಎಸೆಯಲಾಗುತ್ತದೆ. ಇದರಿಂದ ದೇವಸ್ಥಾನಕ್ಕೆ ಉತ್ತಮ ಆದಾಯ ಜತಗೆ ವ್ಯಾಪಾರಿಗಳು ಕೈ ತುಂಬ ಹಣ ಸಂಪಾದಿಸುತ್ತಾರೆ.

ಈ ಜಾತ್ರೆ, ಅನಿಷ್ಠ ಆಚರಣೆಗಳು ಕೇವಲ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸಿಮೀತ ಎನ್ನೋದನ್ನು ನಾವು ಕೇಳಿದ್ದೇವೆ. ಅಷ್ಟೆ ಅಲ್ಲ ನಗರದ ಜನತೆ ಮೂಢನಂಬಿಕೆ ಮೊರೆ ಹೋಗೊದಿಲ್ಲ ಎಲ್ಲರೂ ಪ್ರಜ್ಞಾವಂತರು ಅಂದುಕೊಂಡಿದ್ದೇವೆ. ಆದರೇ ಈ ಜಾತ್ರೆಯಲ್ಲಿ ಮಾತ್ರ ಪ್ರಜ್ಞಾವಂತರು ಎನ್ನಿಸಿಕೊಂಡವರೇ ಕೋಳಿ ಮರಿಗಳನ್ನು ದೇವಸ್ಥಾನದ ಮೇಲೆ ಹಾರಿಸಿ ಹರಕೆ ತೀರಿಸಿ ಸಂತಸ ಪಡುತ್ತಿರುವುದು ಮಾತ್ರ ನಿಜಕ್ಕೂ ಶೋಚನಿಯ.

 
Loading...

 

 

 
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...