Mother: ಹೆತ್ತಮ್ಮನಿಗೆ ತುತ್ತು ಅನ್ನ ಹಾಕದ ಪಾಪಿ, ದೇವಸ್ಥಾನದಲ್ಲಿ ಬಿಟ್ಟು ಹೋದ! ಮಗನ ದಾರಿ ಕಾಯುತ್ತ ಕುಳಿತ ವೃದ್ಧ ತಾಯಿ

ಇಲ್ಲೊಬ್ಬ ಪಾಪಿ ಪುತ್ರ (Son) ಇದೇ ರೀತಿ ಮಾಡಿದ್ದಾನೆ. ವೃದ್ಧಾಪ್ಯದಲ್ಲಿದ್ದ ತಾಯಿಗೆ ತುತ್ತು ಅನ್ನ ಹಾಕಲು ಸಾಧ್ಯವಾಗದ ಬೇಜವಾಬ್ದಾರಿ ಮಗ, ಆಕೆಯನ್ನು ದೇವಸ್ಥಾನದಲ್ಲಿ (Temple) ಬಿಟ್ಟು ಹೋಗಿದ್ದಾನೆ. ಮಗ ಬರುತ್ತಾನೆ ಅಂತ ಕಾದು ಕುಳಿತ ತಾಯಿ, ಎಷ್ಟು ಹೊತ್ತಾದರೂ ಮಗ ವಾಪಸ್ ಬಾರದಿದ್ದಾಗ ಕಂಗಲಾಗಿದ್ದಾಳೆ.

ಮಗನಿಗಾಗಿ ಕಾದು ಕುಳಿತು ಕಂಗಾಲಾದ ತಾಯಿ

ಮಗನಿಗಾಗಿ ಕಾದು ಕುಳಿತು ಕಂಗಾಲಾದ ತಾಯಿ

  • Share this:
ತಾಯಿ (Mother) ಅಂದ್ರೆ ಅದೊಂದು ಬೆಚ್ಚನೆಯ ಅನುಭವ. ಕರುಣೆಯ ಸಾಗರ. ಅಪರಿಮಿತ (Unlimited) ಪ್ರೀತಿಯ (Love) ಮೂಲ ತಾಯಿ.. ಅದೆಂಥದ್ದೇ ನೋವಿದ್ರೂ ಅಮ್ಮನ ಮಡಿಲಿನಲ್ಲಿ ನೆಮ್ಮದಿ, ಶಾಂತಿ (Peace) ಸಿಗುತ್ತೆ. ತಾಯಿಗೆ ಪ್ರತ್ಯಕ್ಷ ದೈವ (God) ಅಂತಾನೂ ಕರೀತಾರೆ. ಜನನಿಯ ನೆರಳು ಸ್ವರ್ಗಕ್ಕಿಂತಲೂ (Heaven) ಮಿಗಿಲು ಅಂತಾರೆ. ಒಬ್ಬ ತಾಯಿ ಹತ್ತು ಮಕ್ಕಳನ್ನು (Children) ಸಾಕುತ್ತಾಳೆ, ಆದರೆ ಹತ್ತು ಮಕ್ಕಳಿಗೆ ಒಬ್ಬ ತಾಯಿಯನ್ನು ಸಾಕುವುದು  ಸಾಧ್ಯವಿಲ್ಲ ಅನ್ನೋದು ಅನುಭವಸ್ಥರ ಮಾತು. ಇಲ್ಲೊಬ್ಬ ಪಾಪಿ ಪುತ್ರ (Son) ಇದೇ ರೀತಿ ಮಾಡಿದ್ದಾನೆ. ವೃದ್ಧಾಪ್ಯದಲ್ಲಿದ್ದ ತಾಯಿಗೆ ತುತ್ತು ಅನ್ನ ಹಾಕಲು ಸಾಧ್ಯವಾಗದ ಬೇಜವಾಬ್ದಾರಿ ಮಗ, ಆಕೆಯನ್ನು ದೇವಸ್ಥಾನದಲ್ಲಿ (Temple) ಬಿಟ್ಟು ಹೋಗಿದ್ದಾನೆ. ಮಗ ಬರುತ್ತಾನೆ ಅಂತ ಕಾದು ಕುಳಿತ ತಾಯಿ, ಎಷ್ಟು ಹೊತ್ತಾದರೂ ಮಗ ವಾಪಸ್ ಬಾರದಿದ್ದಾಗ ಕಂಗಲಾಗಿದ್ದಾಳೆ.

ದೇವಸ್ಥಾನದಲ್ಲಿ ತಾಯಿಯನ್ನು ಬಿಟ್ಟುಹೋದ ಮಗ

ಪಾಪಿ ಪುತ್ರನೊಬ್ಬ ತನ್ನ ವದ್ಧ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು, ಮೊಬೈಲ್ ನಂಬರ್ ಅಂತ ಖಾಲಿ ಹಾಳೆ ಕೊಟ್ಟು, ಈಗ ಬರುತ್ತೀನಿ ಅಂತ ಹೊರಟು ಹೋಗಿದ್ದಾನೆ. ಇತ್ತ ಮಗನನ್ನು ಕಾಣದೇ ತಾಯಿ ಕಂಗಾಲಾಗಿದ್ದಾಳೆ. ಇಂಥದ್ದೊಂದು ಘಟನೆ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ನಡೆದಿದೆ.

ವೃದ್ಧೆ ಸಂಕಷ್ಟಕ್ಕೆ ಮಿಡಿದ ಜನರು


2 ದಿನಗಳ ಹಿಂದೆ ಬಿಟ್ಟು ಹೋದ ಮಗ

ಕಾಸೀಂಬಿ ಎಂಬ 80 ವರ್ಷ ವಯಸ್ಸಿನ ವೃದ್ಧೆಯನ್ನು ಕಳೆದ ಎರಡು ದಿನಗಳ ಹಿಂದೆ ಮಗ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ. ಈಕೆಗೆ ತಾನು ಎಲ್ಲಿಂದ ಬಂದೆ, ತನ್ನ ಮನೆ ಎಲ್ಲಿದೆ, ಮಗ ಎಲ್ಲಿ ಹೋದ ಎನ್ನುವ ಬಗ್ಗೆ ಏನೂ ಗೊತ್ತಿಲ್ಲ.

ಇದನ್ನೂ ಓದಿ: Helicopter Journey: ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ! ಅದ್ಭುತ ಗಿಫ್ಟ್ ನೋಡಿ ಅಮ್ಮನ ಕಣ್ಣಲ್ಲಿ ನೀರು

ಸಿಮ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೊಟ್ಟು ಹೋದ ಪುತ್ರ

ಇನ್ನು ಈಕೆ ತನ್ನ ಊರು ಉಜ್ಜಯಿನಿ, ತನ್ನ ಹೆಸರು ಕಾಸೀಂಬಿ ಅಂತ ಹೇಳಿಕೊಳ್ಳುತ್ತಾಳೆ. ಎರಡು ದಿನದ ಹಿಂದೆ ಈಕೆಯ ಮಗ ಹುಲಗೆಮ್ಮದೇವಿ ದೇವಸ್ಥಾನಕ್ಕೆ ಈಕೆಯನ್ನು ಕರೆ ತಂದು, ಸಿಮ್ ಇಲ್ಲದ ಖಾಲಿ‌ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ‌ ನೀಡಿ ಹೊರಟು ಹೋಗಿದ್ದಾನೆ. ಈಗ ಬರುತ್ತೇನೆ ಅಂತ ಹೇಳಿದ್ದ ಮಗ ಎಷ್ಟು ಹೊತ್ತಾದ್ರೂ ಬರದೇ ಇದ್ದಾಗ ವೃದ್ಧ ತಾಯಿ ಗಾಬರಿಯಾಗಿದ್ದಾಳೆ. ತನ್ನ ಮಗನಿಗಾಗಿ ಕಣ್ಣೀರಿಟ್ಟಿದ್ದಾಳೆ.

ವೃದ್ಧೆಯ ರಕ್ಷಣೆಗೆ ಬಂದವರು


ರಾತ್ರಿ ಅಜ್ಜಿಗೆ ಊಟ ಕೊಟ್ಟ ಊರಿನ ಜನರು

ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್‌ ಪರಿಶೀಲಿಸಿದಾಗ ಸಿಮ್‌ ಕಾರ್ಡ್‌ ಇಲ್ಲದಿರುವುದು ಬೆಳಕಿಗೆ ಬಂದಿದೆ. ಮಗನ ಮೊಬೈಲ್ ನಂಬರ್ ಅಂತ ಕೊಟ್ಟಾಗ, ಅದು ಖಾಲಿ ಹಾಳೆ, ಅದರಲ್ಲಿ ನಂಬರ್ ಬರೆದಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Mother's Death: ಮಗುವಿಗೆ ಹಾಲುಣಿಸುತ್ತಿದ್ದಾಗಲೇ ತಾಯಿ ಸಾವು! ಕ್ರೂರಿ ವಿಧಿಯೇ ನಿನಗೆ ಕರುಣೆ ಇಲ್ಲವೇ?

ಅನಾಥಾಶ್ರಮಕ್ಕೆ ಸೇರಿಸಿದ ಅಧಿಕಾರಿಗಳು

ಇನ್ನು ವೃದ್ಧೆಯನ್ನು ಮಗ ದೇವಸ್ಥಾನದಲ್ಲಿ ಬಿಟ್ಟು ಹೋಗಿರುವ ವಿಚಾರ ಸ್ಥಳೀಯರಿಗೆ ಗೊತ್ತಾಗಿದೆ. ಕೂಡಲೇ ಸ್ಥಳೀಯರು ಹಿರಿಯ ನಾಗರಿಕ ಇಲಾಖೆ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ.ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಹಿರಿಯ ನಾಗರಿಕರ ಇಲಾಖೆ ಸಿಬ್ಬಂದಿ ಅಜ್ಜಿಯ ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
Published by:Annappa Achari
First published: