Murder: ಸಂಧಾನಕ್ಕೆ ಕರೆಸಿ ಮಾವನಿಗೆ ಬೆಂಕಿ ಇಟ್ಟ ಪಾಪಿ ಅಳಿಯ! ನೋಡ ನೋಡುತ್ತಲೇ ಇಬ್ಬರ ಸಜೀವ ದಹನ

ಮಾವ ಸಿದ್ರಾಮಪ್ಪನಿಗೆ ಬೆಳಿಗ್ಗೆ ಫೋನ್ ಮಾಡಿದ್ದ ಶರಣಪ್ಪ, ಮಾವ ನೀವು ಬನ್ನಿ ನಾನು ಊರಿಗೆ ಬರುತ್ತೇನೆ. ನಿಮ್ಮ ಮಗಳ ವಿಚಾರ ಇಂದು ನ್ಯಾಯ ಪಂಚಾಯತಿ ಮಾಡಿ ಮುಗಿಸೋಣವೆಂದು ಕರೆಯುತ್ತಾನೆ. ಅಳಿಯನ ಮಾತು ನಂಬಿ ಮನೆಗೆ ಬಂದಾಗ ಆಗಿದ್ದೇ ಬೇರೆ!

ಆರೋಪಿ ಶರಣಪ್ಪ

ಆರೋಪಿ ಶರಣಪ್ಪ

  • Share this:
ಯಾದಗಿರಿ: ಹೆಣ್ಣು ಕೊಟ್ಟ ಮಾವ (Father-in-Law) ಕಣ್ಣು ಕೊಟ್ಟ ದೇವರಿಗೆ (God) ಸಮಾನ ಅಂತಾರೆ. ಆದ್ರೆ ಇಲ್ಲಿ ಬುದ್ದಿ ಮಾತು ಹೇಳಿದ ಮಾವನ ಜೊತೆಗೆ  ಸಂಬಂಧಿಕರಿಗೆ (Relatives) ಪಾಪಿ ಅಳಿಯ (Son-in-Law) ಬೆಂಕಿ ಹಚ್ಚಿ ಪಾಪಿ ಕೃತ್ಯ ಎಸಗಿದ್ದಾನೆ. ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ (Narayanapur) ಗ್ರಾಮದ ಛಾಯಾ ಕಾಲೋನಿಯಲ್ಲಿ ಇಂತಹ ಅಮಾನವೀಯ ಕೃತ್ಯ ಜರುಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ ಶರಣಪ್ಪ , ತಮ್ಮ ಸಂಬಂಧಿಕಳಾದ ಹುಲಿಗೆಮ್ಮಳನ್ನು 2005 ರಲ್ಲಿ ವಿವಾಹವಾಗಿದ್ದನು. ವಿಜಯಪುರ (Vijayapur) ಜಿಲ್ಲೆಯ ಮುದ್ದೇಬಿಹಾಳನ ನಿವಾಸಿಯಾದ ಹುಲಿಗೆಮ್ಮ ಬೆಂಗಳೂರಿನಲ್ಲಿ (Bengaluru) 2005 ರಲ್ಲಿ ಬಿಎಂಟಿಸಿಯಲ್ಲಿ (BMTC) ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದಳು. ನಾರಾಯಣಪುರ ಗ್ರಾಮದ ನಿವಾಸಿ ಶರಣಪ್ಪ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ನಂತರ ತಮ್ಮ ಜಿಲ್ಲೆಗೆ ಸಮೀಪವಾಗಲಿ ಎಂದು ಶರಣಪ್ಪ ಹೆಂಡತಿ ಹುಲಿಗೆಮ್ಮ ನೌಕರಿಯನ್ನು ಲಿಂಗಸುಗೂರುಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

ಅಳಿಯನಿಗೆ ವಾಹನ ಕೊಡಿಸಿದ್ದ ಮಾವ

2017 ರಿಂದ ರಾಯಚೂರು ಜಿಲ್ಲೆಯ ಲಿಂಗಸೂಗುರು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಲಿಂಗಸುಗೂರಿನ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಹುಲಿಗೆಮ್ಮ ಕೆಲಸ ಮಾಡುತ್ತಿದ್ದಳು‌. ಶರಣಪ್ಪ ಈ ವೇಳೆ ಅಟೋ ನಡೆಸಿಕೊಂಡು ಜೀವನ ನಡೆಸುತ್ತಿದ್ದನು. ಆದರೆ, ಮಾವ ಇತ್ತೀಚೆಗೆ ಅಳಿಯನಿಗೆ ಟಾಟಾ ಎಸಿ ವಾಹನ ಕೊಡಿಸಿದ್ದನಂತೆ. ಹೆಣ್ಣು ಕೊಟ್ಟ ಮಾವ ಸಿದ್ರಾಮಪ್ಪ ಅಳಿಯನಿಗೆ ಕಷ್ಟ ಆಗಬಾರದೆಂದು ವಾಹನ ಕೊಡಿಸಿದ್ದನು.

ಗಂಡ-ಹೆಂಡತಿ ಪ್ರತ್ಯೇಕ ವಾಸ

ಹುಲಿಗೆಮ್ಮ ಹಾಗೂ ಶರಣಪ್ಪ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಮಕ್ಕಳು ಅಜ್ಜನ ಊರಾದ ಮುದ್ದೇಬಿಹಾಳನಲ್ಲಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ದಂಪತಿಗಳ ನಡುವೆ ಜಗಳ ನಡೆಯತ್ತದೆ. ಹುಲಿಗೆಮ್ಮ ಯಾರಾದರು ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಅನುಮಾನ ವ್ಯಕ್ತಪಡಿಸುತ್ತಿದ್ದನಂತೆ. ಈ ವಿಚಾರವಾಗಿ ಸಂಬಂಧಿಕರು ಬುದ್ದಿ ಮಾತು ಹೇಳಿದರು ಶರಣಪ್ಪ ಬಗ್ಗದೆ ಜಗಳ ಮಾಡುತ್ತಿದ್ದನು. ಕಳೆದ ಎರಡು ವರ್ಷಗಳಿಂದ ದಂಪತಿಗಳು ಪ್ರತ್ಯೇಕವಾಗಿ ವಾಸವಾಗಿದ್ದರು.

ಇದನ್ನೂ ಓದಿ: Yadagiri: ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಚಿಕಿತ್ಸೆಗೆ ಬರುವ ಗರ್ಭಿಣಿಯರ ಗೋಳು ಕೇಳೋರಿಲ್ಲ!

 ನ್ಯಾಯ ಪಂಚಾಯ್ತಿಗೆ ಬಂದಿದ್ದ ಶರಣಪ್ಪ

ಡಿವೋರ್ಸ್ ಬೇಕೆಂದು ಶರಣಪ್ಪ ಕೇಳುತ್ತಿದ್ದನು. ಆದರೆ, ಮಡದಿಯು ಡಿವೋರ್ಸ್ ಬೇಡ, ಇಬ್ಬರು ಮಕ್ಕಳಿದ್ದು ಸುಖವಾಗಿ ಇರೋಣ ಎನ್ನುತ್ತಿದ್ದಳು. ಆದರೆ , ಈತ ಶರಣಪ್ಪ ಮಣ್ಣೆತ್ತಿನ ಅಮಾವಾಸ್ಯೆ ದಿನ ಎನಾದರು ಒಂದು ನಿರ್ಧಾರವಾಗಲಿ ಎಂದು ತಿಳಿದು ನ್ಯಾಯ ಪಂಚಾಯತ ಮಾಡಲು ಮುಂದಾಗುತ್ತಾನೆ.

ಮಾವ ಬಾ ಎಂದು ಕರೆದು ಬೆಂಕಿ ಇಟ್ಟ

ಮಾವ ಸಿದ್ರಾಮಪ್ಪನಿಗೆ ಬೆಳಿಗ್ಗೆ ಫೋನ್ ಮಾಡಿದ್ದ ಶರಣಪ್ಪ, ಮಾವ ನೀವು ಬನ್ನಿ ನಾನು ಊರಿಗೆ ಬರುತ್ತೇನೆ. ನಿಮ್ಮ ಮಗಳ ವಿಚಾರ ಇಂದು ನ್ಯಾಯ ಪಂಚಾಯತಿ ಮಾಡಿ ಮುಗಿಸೋಣವೆಂದು ಕರೆಯುತ್ತಾನೆ.

ಬುದ್ಧಿ ಮಾತು ಕೇಳದೇ ಜಗಳವಾಡಿದ ಅಳಿಯ

ಅಳಿಯನ ಮಾತಿಗೆ ಮನ್ನಣೆ ನೀಡಿ ಸಿದ್ರಾಮಪ್ಪ ಮುರಾಳ ಅವರು,  ತನ್ನ ಸಹೋದರ ಶರಣಪ್ಪ, ಮುತ್ತಪ್ಪ ಹಾಗೂ ನಾಗಪ್ಪ ಎಂಬುವರೊಂದಿಗೆ ನಾರಾಯಣಪುರದ ಶರಣಪ್ಪನ ಮನೆಗೆ ಬರುತ್ತಾರೆ. ಈ ವೇಳೆ ನ್ಯಾಯ ಪಂಚಾಯತ ನಡೆಯುತ್ತದೆ. ಇಬ್ಬರು ಮಕ್ಕಳಿದ್ದು ಚೆನ್ನಾಗಿ ಇಬ್ಬರು ಕೂಡಿಕೊಂಡು  ಜೀವನ ನಡೆಸಬೇಕೆಂದು ಮಾವ ಬುದ್ದಿ ಮಾತು ಹೇಳುತ್ತಾನೆ. ಆದರೆ, ಬುದ್ದಿ ಮಾತಿಗೆ ಕೋಪಗೊಂಡು ಶರಣಪ್ಪ, ನನಗೆ ಡಿವೋರ್ಸ್ ಬೇಕೆಂದು ಜಗಳ ಮಾಡುತ್ತಾನಂತೆ.

ಮನೆಯಲ್ಲೇ ಕೂಡಿಹಾಕಿ ನಾಲ್ವರಿಗೂ ಬೆಂಕಿ

ನಾಲ್ವರನ್ನು ತನ್ನ ಮನೆಯಲ್ಲಿ ಕೂಡಿ ಹಾಕಿ ನಾಲ್ವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೆ. ಘಟನೆಯಲ್ಲಿ ನಾಗಪ್ಪ ಹಾಗೂ ಶರಣಪ್ಪ ಎಂಬುವರು ಮೃತಪಡುತ್ತಾರೆ. ಇನ್ನಿಬ್ಬರನ್ನು ಲಿಂಗಸೂಗುರು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Pension Golmaal: ಅಂಚೆ ಕಚೇರಿ ನೌಕರರಿಂದಲೇ 1.27 ಕೋಟಿ ರೂಪಾಯಿ ಲೂಟಿ, ಸತ್ತವರ ಹೆಸರಲ್ಲೂ ಗೋಲ್ಮಾಲ್!

ಪೊಲೀಸರಿಂದ ಆರೋಪಿ ಬಂಧನ

ಘಟನೆ ಸ್ಥಳಕ್ಕೆ ನಾರಾಯಣಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿ ಶರಣಪ್ಪನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹುಲಿಗೆಮ್ಮ ಸಂಬಂಧಿಕರು ಆಗ್ರಹಿಸಿದ್ದಾರೆ.
Published by:Annappa Achari
First published: