ಆಸ್ತಿಗಾಗಿ ತಂದೆಯ ಕಣ್ಣನೇ ಕಿತ್ತ ಕಿರಾತಕ ಮಗ!

news18
Updated:August 28, 2018, 4:48 PM IST
ಆಸ್ತಿಗಾಗಿ ತಂದೆಯ ಕಣ್ಣನೇ ಕಿತ್ತ ಕಿರಾತಕ ಮಗ!
ತಂದೆಯ ಕಣ್ಣು ಕಿತ್ತ ಮಗ ಚೇತನ್​ ಅಭೀಷೇಕ್​​
news18
Updated: August 28, 2018, 4:48 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು,(ಆ.28): ಹೆಣ್ಣು, ಹೊನ್ನು, ಮಣ್ಣು ಎಂದರೆ ಜನ ಎಂತಹ ಹೇಯ ಕೃತ್ಯ ಎಸಗಲು ಹಿಂಜರಿಯುವುದಿಲ್ಲ. ಒಂದು ಹೆಣ್ಣಿಗಾಗಿ  ಹೊಡೆದಾಡಿಕೊಂಡ ಗಂಡಸರು ಅದೆಷ್ಟೋ. ಇಂತಹ ಅನೇಕ  ಚಿತ್ರಣಗಳು ನಮ್ಮ ಕಣ್ಣಮುಂದೆ ಕಾಣಸಿಗುತ್ತವೆ. ಅದರಲ್ಲೂ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅಣ್ಣ-ತಮ್ಮ, ಅಪ್ಪ-ಮಗ, ತಾಯಿ-ಮಕ್ಕಳ ನಡುವೆ ಜಗಳಗಳು ನಡೆದು ಕೊಲೆಯಲ್ಲೇ ಅಂತ್ಯವಾಗಿರುವ ಅನೇಕ ಘಟನೆಗಳನ್ನು ನಾವು ದಿನನಿತ್ಯ ನೋಡುತ್ತಿರುತೇವೆ. ಇಂತಹ ಘಟನೆಗಳಿಗೆ ನಿದರ್ಶನವೆಂಬಂತೆ ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ.

ಕೀಚಕ ಮಗನೊಬ್ಬ ಆಸ್ತಿಗಾಗಿ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿದ್ದಾನೆ. ಹೌದು, ಇಂತಹ ದುರ್ಘಟನೆ ಜರುಗಿರುವುದು ಬೆಂಗಳೂರಿನ ಜೆಪಿನಗರದ ಶಾಕಾಂಬರಿ ನಗರದಲ್ಲಿ. ಚೇತನ್ ಅಭಿಷೇಕ್​​​​ ಎಂಬಾತ ತನ್ನ ತಂದೆ ಪರಮೇಶ್​(65) ಅವರ ಕಣ್ಣು ಕಿತ್ತ ಕಿರಾತಕ ಮಗ.ಆಸ್ತಿ ವಿಚಾರಕ್ಕಾಗಿ ಮನೆಯಲ್ಲಿ ತಂದೆ-ಮಗನ ನಡುವೆ ಆಗ್ಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಚೇತನ್​ ತಂದೆ ಪರಮೇಶ್​ ನಿವೃತ್ತ ಸರ್ಕಾರಿ ನೌಕರರಾಗಿದ್ದರು. ಪದೇ ಪದೇ ಆಸ್ತಿ ವಿಚಾರಕ್ಕಾಗಿ ತಂದೆಯ ಜೊತೆ ಜಗಳ ಮಾಡುತ್ತಿದ್ದ. ಕಳೆದ ತಿಂಗಳಷ್ಟೇ ಪರಮೇಶ್​ ಪತ್ನಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಆಸ್ತಿ ವಿಚಾರದ ಜಗಳ ತಾರಕಕ್ಕೇರಿತ್ತು. ಇಂದು ಮನೆಗೆ ಬಂದವನೇ ಏಕಾಏಕಿ ತಂದೆಯ ಕಣ್ಣು ಕಿತ್ತು ಹಾಕಿದ್ದ. ಗಾಯಗೊಂಡ ಪರಮೇಶ್​ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ತಂದೆ ಪರಮೇಶ್ವರ್​ಗೆ ಮೂವರು ಮಕ್ಕಳು. ದೊಡ್ಡ ಮಗ ಅಭಿಷೇಕ್ ಚೇತನ್ , ಎರಡನೇ ಮಗ ಮೈಸೂರಿನ ಚಂದನ್, ಮೂರನೇಯವರು ಹೆಣ್ಣು ಮಗಳು. ಪರಮೇಶ್ವರ್​ ತನ್ನ ಮೂರು ಮಕ್ಕಳಿಗೂ ಆಸ್ತಿ ಹಂಚಿಕೆ ಮಾಡಿದ್ದರು.  ಅಭಿಷೇಕ್ ​ಚೇತನ್​ಗೂ ಎರಡು ಸೈಟ್​ ನೀಡಿದ್ದರು. ಜೆಪಿ ನಗರದ ನಿವಾಸದ ಮೊದಲನೇ ಮಹಡಿಯಲ್ಲಿ ಚೇತನ್​​ ವಾಸವಾಗಿದ್ದ. ​​ನೆಲಮಹಡಿಯಲ್ಲಿ ಪರಮೇಶ್ವರ್ ಮತ್ತು ಅವರ ಪತ್ನಿ ವಸಂತ ಕುಮಾರಿ ವಾಸವಾಗಿದ್ದರು.

ಜೆಪಿ ನಗರದ ಮನೆ ಪರಮೇಶ್ವರ್ ಮತ್ತು ಅವರ ಪತ್ನಿ ವಸಂತ ಹೆಸರಿನಲ್ಲಿ ಜಂಟಿಯಾಗಿತ್ತು. ತಾಯಿ ನಿಧನಕ್ಕೂ ಮುನ್ನ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ. ತಾಯಿ ವಸಂತಕುಮಾರಿ ಕಳೆದ ಒಂದು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ತಂದೆಯನ್ನು ಮನೆಯಿಂದ ಹೊರಹಾಕಲು ಸಜ್ಜಾಗಿದ್ದ. ಮನೆಯ ವಿಚಾರಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಎನ್ನಲಾಗಿದೆ.
Loading...

ಚೇತನ್​ಗೆ ಹುಡುಗಿಯರ ಶೋಕಿ ಹೆಚ್ಚಾಗಿತ್ತು. ಅಪ್ಪ ಚೆನ್ನಾಗಿ ಸಂಪಾದಿಸಿದ ಹಣದಲ್ಲೇ ಶೋಕಿ ಮಾಡುತ್ತಿದ್ದ. ಗಾಂಜಾ ವ್ಯಸನಿಯೂ ಆಗಿದ್ದ ಎನ್ನಲಾಗಿದೆ. ಮಗನ ದುಶ್ಚಟಗಳಿಂದ ಬೇಸತ್ತಿದ್ದ ತಂದೆ ಮಗನನ್ನು ಮನೆಗೆ ಸೇರಿಸುತ್ತಿರಲಿಲ್ಲ. ಇಂದು ಮನೆಗೆ ಏಕಾಏಕಿ ನುಗ್ಗಿದ ಚೇತನ್ ತನ್ನ ಎರಡು ಕೈ ಬೆರಳನ್ನು ಕಣ್ಣಿಗೆ ತುರುಕಿ ಕಣ್ಣು ಕಿತ್ತಿದ್ದಾನೆ.

ಪ್ರಕರಣ ಸಂಬಂಧ ಜೆ.ಪಿ.ನಗರ ಪೊಲೀಸರು ಆರೋಪಿ ಚೇತನ್​ನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ