ಸಲಿಂಗಿಗಳ ಡೇಟಿಂಗ್ ಆ್ಯಪ್‌ಗಳಲ್ಲೇ ಬ್ಯುಸಿಯಾಗಿದ್ದ ಪತಿ: ವಿಚ್ಛೇದನ ಕೋರಿದ ಪತ್ನಿ..!

ಎರಡು ಸಲಿಂಗಿಗಳ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ತನ್ನ ಗಂಡನ ಪ್ರೊಫೈಲ್ ನೋಡಿದ ನಂತರ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ವಿಚ್ಛೇದನ ಕೋರಿದ್ದಾರೆ. ಮದುವೆಯಾಗಿ ಮೂರು ವರ್ಷಗಳಾದರೂ ಪತಿ - ಪತ್ನಿಯ ನಡುವೆ ಲೈಂಗಿಕ ಸಂಬಂಧವೇ ಇರಲಿಲ್ಲವಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ಕೆಲ ವರ್ಷಗಳಿಂದ ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿದೆ. ಪತಿ - ಪತ್ನಿ ನಡುವೆ ದಾಂಪತ್ಯ ಸಮಸ್ಯೆ, ಮುಂತಾದ ಹಲವು ಕಾರಣಗಳಿಂದ ಡಿವೋರ್ಸ್‌ ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಇದೇ ರೀತಿ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದ ಮಹಿಳಾ ಟೆಕ್ಕಿಯೊಬ್ಬರು ತಮ್ಮ ಪತಿಯಿಂದ ವಿಚ್ಛೇದನ ಕೋರಿದ್ದಾರೆ. ಆದರೆ, ಇಲ್ಲಿ ಪತ್ನಿ ವಿಚ್ಛೇದಮ ಕೋರಿರುವ ಕಾರಣವೇ ಬೇರೆ ಇದೆ. ಪ್ರಮುಖ ಖಾಸಗಿ ಬ್ಯಾಂಕಿನ ಉದ್ಯೋಗಿಯಾಗಿರುವ ಪತಿ ಡೇಟಿಂಗ್ ಅಪ್ಲಿಕೇಷನ್‌ಗಳಲ್ಲಿ, ಅದರಲ್ಲೂ ಸಲಿಂಗಿಗಳ ಆ್ಯಪ್‌ಗಳಲ್ಲಿ ಪ್ರೊಫೈಲ್‌ ಹೊಂದಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಈ ಹಿನ್ನೆಲೆ ಮಹಿಳಾ ಸಹಾಯವಾಣಿಯ ಸಹಾಯ ಪಡೆದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿಗೆ ಇದು ಎರಡನೇ ಮದುವೆಯಾಗಿದ್ದು, ಮೊದಲನೇ ಪತ್ನಿ ತನಗೆ ಮೋಸ ಮಾಡಿದಳೆಂದು ಆತ ಸದಾ ಕೊರಗುತ್ತಿದ್ದ ಎಂದೂ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ನಿ ಹೇಳಿದ್ದಾರೆ. ಅಲ್ಲದೆ, ಬೇರೆಯವರ ಎದುರು ತನ್ನನ್ನೇ ಆರೋಪಿಯನ್ನಾಗಿ ಮಾಡುತ್ತಿದ್ದರು. ಸದಾ ತನ್ನಿಂದ ದೂರವಿರುತ್ತಿದ್ದರು. ಸಾಕಷ್ಟು ವರದಕ್ಷಿಣೆ ಕೊಡಲಿಲ್ಲವೆಂದೂ ಪತಿ ಆರೋಪಿಸುತ್ತಿದ್ದರೆಂದೂ ಪತ್ನಿ ಹೇಳಿಕೊಂಡಿದ್ದಾರೆ ಎಂದು ಇಂಗ್ಲಿಷ್​ ಪತ್ರಿಕೆಯೊಂದು ವರದಿ ಮಾಡಿದೆ.

ಎರಡು ಸಲಿಂಗಿಗಳ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ತನ್ನ ಗಂಡನ ಪ್ರೊಫೈಲ್ ನೋಡಿದ ನಂತರ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ವಿಚ್ಛೇದನ ಕೋರಿದ್ದಾರೆ. ಮದುವೆಯಾಗಿ ಮೂರು ವರ್ಷಗಳಾದರೂ ಪತಿ - ಪತ್ನಿಯ ನಡುವೆ ಲೈಂಗಿಕ ಸಂಬಂಧವೇ ಇರಲಿಲ್ಲ. ತನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ಪತಿ ತನ್ನ ದಾರಿ ತಪ್ಪಿಸಿದ್ದಾರೆ. ಯಾವುದಾದರೊಂದು ಕಾರಣ ಹೇಳಿ ರಾತ್ರಿ ವೇಳೆ ತನ್ನಿಂದ ದೂರ ಇರುತ್ತಿದ್ದರು ಎಂದೂ ಪತ್ನಿ ಹೇಳಿಕೊಂಡಿದ್ದಾರೆ.

ಜೂನ್ 2018 ರಲ್ಲಿ, ಬೆಂಗಳೂರಿನ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ಪ್ರಮುಖ ಖಾಸಗಿ ಬ್ಯಾಂಕಿನ ಉದ್ಯೋಗಿಯಾಗಿರುವ ವ್ಯಕ್ತಿಯಗೆ ವಿವಾಹ ನಡೆದಿತ್ತು. 31 ವರ್ಷದ ಪತಿಗೆ ಇದು ಎರಡನೇ ವಿವಾಹವಾಗಿದ್ದು, ಪತಿ - ಪತ್ನಿಯರ ಪೋಷಕರು - ಸಂಬಂಧಿಕರೇ ನೋಡಿ ಈ ಮದುವೆಯನ್ನು ಮಾಡಿದ್ದರು.

ಇದನ್ನೂ ಓದಿ:Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್​ ವೀಕ್ ಟ್ವಿಸ್ಟ್..!

ಮದುವೆಯ ನಂತರ ದಂಪತಿ ಬೆಂಗಳೂರಿನ ಜಯನಗರದಲ್ಲಿ ವಾಸಿಸಲು ಪ್ರಾರಂಭಿಸಿದರು. ಪತಿ - ಪತ್ನಿ ಇಬ್ಬರು ಒಳ್ಳೆಯ ಕೆಲಸದಲ್ಲಿದ್ದರೂ ಮಹಿಳೆಯ ಜೀವನ ಆರಂಭದಿಂದಲೂ ಸುಖಮಯವಾಗಿರಲಿಲ್ಲ. ಏಕೆಂದರೆ ವಿಕ್ರಮ್‌ ತನ್ನ ಮೊದಲ ಹೆಂಡತಿ ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿ ಎರಡನೇ ಪತ್ನಿಯಿಂದಲೂ ಸದಾ ದೂರವಿರುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಮಹಿಳಾ ಸಹಾಯವಾಣಿಯ ಸಲಹೆಗಾರರೊಬ್ಬರು ಮಾಹಿತಿ ನೀಡಿದ್ದು, ತನ್ನನ್ನು ಮೊದಲನೇ ಪತ್ನಿ ಬಿಟ್ಟು ಹೋಗಿದ್ದಕ್ಕೆ ಎದೆಗುಂದಿದ್ದೇನೆ ಎಂದು ಹೇಳುತ್ತಿದ್ದ ಪತಿ, ಮದುವೆಯಾದ ಆರಂಭದಲ್ಲೇ ಪತ್ನಿಯಿಂದ ಹೆಚ್ಚಿನ ಸಮಯ ದೂರವಿರುತ್ತಿದ್ದರು. ಅಲ್ಲದೆ, ವಿವಾಹವಾದ ಸ್ವಲ್ಪ ಸಮಯದ ಬಳಿಕ ಹೆಚ್ಚು ವರದಕ್ಷಿಣೆ ಪಡೆಯಲಿಲ್ಲವೆಂದೂ ಪತ್ನಿಗೆ ದೂರುತ್ತಿದ್ದರು. ಹಾಗೂ, ಬೇರೆ ಬೇರೆ ಕತೆಗಳನ್ನು ಹೇಳಿ ಆಕೆಯಿಂದ ದೂರವಿರುತ್ತಿದ್ದರು ಎಂದು ತಿಳಿಸಿದ್ದಾರೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ಕಳೆದ ತಿಂಗಳು ಈ ಪ್ರಕರಣವನ್ನು ನಿರ್ವಹಿಸಿದೆ.

ಕೆಲವು ಸಂದರ್ಭಗಳಲ್ಲಿ, ಬ್ಯಾಂಕ್ ಉದ್ಯೋಗಿಯಾಗಿರುವ ಪತಿ ತನ್ನ ಪತ್ನಿಯ ಬಗ್ಗೆ ಆರೋಪಗಳನ್ನು ಮಾಡಿ ಆಕೆಯನ್ನು ದೂರ ಕಳಿಸುತ್ತಿದ್ದರು. ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ, ಪತಿ ಸೆಲ್‌ಫೋನ್‌ಗೆ ಅಂಟಿಕೊಂಡಿರುವುದನ್ನು ಪತ್ನಿ ನೋಡಿದರು ಮತ್ತು ಮೊಬೈಲ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳನ್ನು ಗುರುತಿಸಿದರು. ಕಳೆದ ವರ್ಷ ವರ್ಕ್‌ ಫ್ರಮ್ ಹೋಂ ಸಮಯದಲ್ಲಿ ಇಬ್ಬರ ನಡುವೆಯೂ ಜಗಳಗಳು ಹೆಚ್ಚಾದಂತೆ, ಮಹಿಳೆಗೆ ತನ್ನ ಗಂಡನ ಬಗ್ಗೆ ಅನುಮಾನವೂ ಹೆಚ್ಚಾಯಿತು.

ನಂತರ ಆತನ ಫೋನ್ ಚಟುವಟಿಕೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಈ ವರ್ಷದ ಲಾಕ್‌ಡೌನ್ ಸಮಯದಲ್ಲಿ, ಮಹಿಳೆ ಪತಿಯ ಮೊಬೈಲ್‌ ನೋಡಿದಾಗ ಎರಡು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪುರುಷರೊಂದಿಗೆ ಚಾಟ್ ಮಾಡುತ್ತಿರುವುದನ್ನು ಕಂಡುಕೊಂಡಿದ್ದಾರೆ.

ಅಲ್ಲದೆ, ಪತಿ ತನ್ನ ಲೈಂಗಿಕ ದೃಷ್ಟಿಕೋನವನ್ನು ಮರೆಮಾಚಲು ಅವರಿಬ್ಬರ ಕುಟುಂಬಗಳ ಮುಂದೆಯೂ ಪತ್ನಿಯ ವಿರುದ್ಧವೇ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದರು. ಪತ್ನಿಯ ಬಗ್ಗೆಯೇ ಎಲ್ಲರೂ ಅನುಮಾನ ಪಡುವಂತೆ ಕತೆ ಕಟ್ಟುತ್ತಿದ್ದರು, ಆರೋಪಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿರುವುದಾಗಿಯೂ ಕೌನ್ಸಿಲಿಂಗ್ ಸಲಹೆಗಾರರು ಹೇಳಿದ್ದಾರೆ.

ಇದನ್ನೂ ಓದಿ:ಒಟಿಟಿ ವೇದಿಕೆಯಲ್ಲಿ ಲಾಂಚ್ ಆಗಲಿದೆ​ ಹಿಂದಿ ಬಿಗ್ ಬಾಸ್​ ಸೀಸ್​ನ್​ 15: ನಿರೂಪಣೆ ಮಾಡಲಿದ್ದಾರೆ ಕರಣ್​ ಜೋಹರ್​

ಇದೆಲ್ಲರಿಂದ ಬೇಸತ್ತ ಪತ್ನಿ ಲಾಕ್‌ಡೌನ್‌ ಬಳಿಕ ಮಹಿಳಾ ಸಹಾಯವಾಣಿ ಸಂಪರ್ಕಿಸಿ ಪತಿ ವಿರುದ್ಧ ವಂಚನೆಯ ದುರು ನೀಡಿದ್ದಾರೆ. ಅಲ್ಲದೆ, ಆತನೊಂದಿಗೆ ಸಂಬಂಧವನ್ನೂ ಅಂತ್ಯಗೊಳಿಸಲು ನಿರ್ಧರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು, ಕೌನ್ಸಿಲಿಂಗ್ ಸೆಷನ್‌ನಲ್ಲಿ ಸಲಿಂಗಿಗಳ ಡೇಟಿಂಗ್ ಆ್ಯಪ್‌ಗಳಲ್ಲಿ ಪ್ರೊಫೈಲ್‌ ಇದೆ ಎಂಬುದನ್ನು ಪತಿ ಒಪ್ಪಿಕೊಂಡರೂ, ಯಾರೊಂದಿಗೂ ಸಂಬಂಧ ಹೊಂದಿಲ್ಲ ಎಂದಿದ್ದಾರೆ.
Published by:Anitha E
First published: