• Home
  • »
  • News
  • »
  • state
  • »
  • Vidhana Soudha: ಇಬ್ಬರು ಹುಡುಗಿಯರು ಕೈಕೊಟ್ಟಿದ್ದಕ್ಕೆ ಸರ್ಕಾರದ ಮೇಲೆ ಸಿಟ್ಟು! ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದಾರೆ ಅಂತ ಕಾಲ್ ಮಾಡಿದ ಟೆಕ್ಕಿ!

Vidhana Soudha: ಇಬ್ಬರು ಹುಡುಗಿಯರು ಕೈಕೊಟ್ಟಿದ್ದಕ್ಕೆ ಸರ್ಕಾರದ ಮೇಲೆ ಸಿಟ್ಟು! ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದಾರೆ ಅಂತ ಕಾಲ್ ಮಾಡಿದ ಟೆಕ್ಕಿ!

ವಿಧಾನಸೌಧದ ಭದ್ರತೆ (ಸಂಗ್ರಹ ಚಿತ್ರ)

ವಿಧಾನಸೌಧದ ಭದ್ರತೆ (ಸಂಗ್ರಹ ಚಿತ್ರ)

ವಿಧಾನಸೌಧಕ್ಕೆ ಬಾಂಬ್ ಇಡಲಾಗಿದೆ ಎಂದು ನಿನ್ನೆ ಮೂರು ಬಾರಿ ಫೋನ್ ಕಾಲ್ ಬಂದಿತ್ತು. ನೇರವಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಯ ಲ್ಯಾಂಡ್ ಲೈನ್ ನಂಬರ್‌ಗೆ ಪೋನ್ ಮಾಡಿ, ಬೆದರಿಕೆ ಹಾಕಲಾಗಿತ್ತು. ಕಾಲ್ ಮಾಡಿದ್ದ ಅಪರಿಚಿತ ವ್ಯಕ್ತಿ, ವಿಧಾನಸೌಧಲ್ಲಿ ಬಾಂಬ್ ಇಟ್ಟಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಳ್ಳುತ್ತೆ ಎಂದು ಕರೆ ಕಟ್ ಮಾಡಿದ್ದ!

ಮುಂದೆ ಓದಿ ...
  • Share this:

ಬೆಂಗಳೂರು: ನಿನ್ನೆ ರಾತ್ರಿ (Night) ಬಂದ ಫೋನ್ ಕಾಲ್ (Phone Call) ಒಂದು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರ (Bangalore Central Division Police) ನಿದ್ದೆ ಗೆಡಿಸಿತ್ತು. ಒಂದಲ್ಲ, ಮೂರು ಮೂರು ಬಾರಿ ಆ ಬೆದರಿಕೆ ಕಾಲ್ (threatening call) ಬಂದಿತ್ತು. ಮಧ್ಯ ರಾತ್ರಿ ಕಾಲ್ ಮಾಡಿದ ಆ ಅಪರಿಚಿತ ವ್ಯಕ್ತಿ, ವಿಧಾನಸೌಧಲ್ಲಿ (Vidhana Soudha) ಬಾಂಬ್ (Bomb) ಇಟ್ಟಿದ್ದು,ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಳ್ಳುತ್ತೆ (Blast) ಎಂದು ಕರೆ ಮಾಡಿ ಕಟ್ ಮಾಡಿದ್ದ. ಹೀಗೆ ಮೂರು ಬಾರಿ ಪೋನ್ ಮಾಡಿ ಬೆದರಿಕೆ ಹಾಕಿದ್ದವ ಸಾಫ್ಟ್‌ವೇರ್ ಇಂಜಿನಿಯರ್ (Software Engineer). ಇದೀಗ ಆತನನ್ನು ಪೊಲೀಸರು (Police) ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆ ವೇಳೆ ಆತನ ಇತಿಹಾಸ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಆತ ಈ ರೀತಿ ಬೆದರಿಕೆ ಕಾಲ್ ಮಾಡುವುದಕ್ಕೆ ಕಾರಣ ಏನು ಅಂತ ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.


ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ


ವಿಧಾನಸೌಧಕ್ಕೆ ಬಾಂಬ್ ಇಡಲಾಗಿದೆ ಎಂದು ನಿನ್ನೆ ಮೂರು ಬಾರಿ ಫೋನ್ ಕಾಲ್ ಬಂದಿತ್ತು. ನೇರವಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಯ ಲ್ಯಾಂಡ್ ಲೈನ್ ನಂಬರ್‌ಗೆ ಪೋನ್ ಮಾಡಿ, ಬೆದರಿಕೆ ಹಾಕಲಾಗಿತ್ತು. ಕಾಲ್ ಮಾಡಿದ್ದ ಅಪರಿಚಿತ ವ್ಯಕ್ತಿ, ವಿಧಾನಸೌಧಲ್ಲಿ ಬಾಂಬ್ ಇಟ್ಟಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಳ್ಳುತ್ತೆ ಎಂದು ಕರೆ ಕಟ್ ಮಾಡಿದ್ದ.


ಆರೋಪಿ ಪ್ರಶಾಂತ್


ರಾತ್ರಿಯಿಡೀ ಕಾರ್ಯಾಚರಣೆ, ಇಂದು ಆರೋಪಿ ಅರೆಸ್ಟ್


ಅಪರಿಚಿತನ ಫೋನ್ ಕಾಲ್‌ನಿಂದ ಆತಂಕಕ್ಕೆ ಒಳಗಾದ ಸಿಎಸ್‌ ಕಚೇರಿಯ ಸಿಬ್ಬಂದಿ, ಕೂಡಲೆ ವಿಧಾನಸೌಧ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೋನ್ ಕಾಲ್ ಮಾಹಿತಿ ಆಧರಿಸಿ ವಿಧಾನಸೌಧದಲ್ಲಿ ಒಂದು ವಿಶೇಷ ತಂಡದಿಂದ ಪರಿಶೀಲನೆ ನಡೆಯಿತು. ಕೇಂದ್ರ ವಿಭಾಗ ಡಿಸಿಪಿ ಸೇರಿದಂತೆ ಪೊಲೀಸ್ರೆಲ್ಲಾ ರಾತ್ರಿ ಕಾರ್ಯಾಚರಣೆ ನಡೆಸಿದ್ರು. ಕೊನೆಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಪ್ರಶಾಂತ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಕೂಡಲೇ ವಿಧಾನಸೌಧ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಇಂದು ಆತನ್ನನು ಕರೆ ತಂದಿದ್ದಾರೆ.


ಇದನ್ನೂ ಓದಿ: Harassment: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!


ಬೆದರಿಕೆ ಕರೆ ಹಾಕಿದವನು ಸಾಫ್ಟ್‌ವೇರ್ ಇಂಜಿನಿಯರ್!


ಹೀಗೆ ಮೂರು ಬಾರಿ ಪೋನ್ ಮಾಡಿ ಬೆದರಿಕೆ ಹಾಕಿದ್ದವನು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ. ಆತನ ಹೆಸರು ಪ್ರಶಾಂತ್, ಹೆಬ್ಬಗೋಡಿಯ ನಿವಾಸಿ, 41 ವರ್ಷದ ವ್ಯಕ್ತಿ. ಈತ ವಿಧಾನ ಸೌಧ ಸಿಎಸ್ ಕಚೇರಿಯ ನಂಬರ್ ಅನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ, ನಂಬರ್ ಪಡೆದು ಬೆದರಿಕೆ ಹಾಕಿದ್ದಾನೆ.


ಪ್ರೀತಿಯಲ್ಲಿ ಎರಡು ಬ್ರೇಕ್ ಅಪ್, ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ!


ಈತ ಇಬ್ಬರು ಯುವತಿಯರ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದ. ಅಲ್ಲದೇ ಮನೆಯವ್ರಿಂದಲೂ ಆತನಿಗೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈ ವೇಳೆ ನೊಂದವನಿಗೆ ಬಂದಿದ್ದು ರಾಜ್ಯದ ವ್ಯವಸ್ಥೆ ವಿರುದ್ದ ಅಸಮಾಧಾನದ ಭಾವನೆ, ವ್ಯವಸ್ಥೆಯೇ ಹೀಗೆಂದು ಕೋಪಗೊಂಡು ಈತ ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದೇನೆ ಎಂಬ ಸುಳ್ಳು ಬೆದರಿಕೆ ಕರೆ ಮಾಡಿದ್ದ. ವಿಚಾರಣೆ ವೇಳೆ ಸಮಾಜದ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.


ಇದನ್ನೂ ಓದಿ: Flipkart Delivery Boy: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್‌! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!


ಈ ಬಗ್ಗೆ ಪೊಲೀಸರು ಹೇಳಿದ್ದೇನು?


‘ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕರೆ ಮಾಡಿದ್ದ ಆರೋಪಿ, ‘ವಿಧಾನಸೌಧದಲ್ಲಿ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟಗೊಳ್ಳಲಿದೆ’ ಎಂದಿದ್ದ. ವಿಷಯ ಗೊತ್ತಾಗುತ್ತಿದ್ದಂತೆ ಪರಿಶೀಲನೆ ನಡೆಸಲಾಯಿತು. ಇದೊಂದು ಹುಸಿ ಕರೆ ಎಂಬುದು ತಿಳಿಯಿತು. ನಂತರ, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಲಾಗಿತ್ತು’ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

Published by:Annappa Achari
First published: