ಜಿಎಸ್​​ಟಿ ಬಗ್ಗೆ ಅಪಪ್ರಚಾರ ಬೇಡ, ಸುಭದ್ರ ಸರ್ಕಾರಕ್ಕೆ ಜಿಎಸ್ ಟಿ ಬೇಕು ; ಸಂಸದೆ ಶೋಭಾ ಕರಂದ್ಲಾಜೆ

25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಇದೆ. ಚುನಾವಾಣಾ ಫಲಿತಾಂಶಕ್ಕೆ ಕೆಲ ಗಂಟೆಗಳಷ್ಟೇ ಬಾಕಿ ಉಳಿದಿದೆ. ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರಕಾರ ಮತ್ತಷ್ಟು ಗಟ್ಟಿಯಾಗುತ್ತದೆ  ಎಂದು ಹೇಳಿದರು

news18-kannada
Updated:December 7, 2019, 8:11 PM IST
ಜಿಎಸ್​​ಟಿ ಬಗ್ಗೆ ಅಪಪ್ರಚಾರ ಬೇಡ, ಸುಭದ್ರ ಸರ್ಕಾರಕ್ಕೆ ಜಿಎಸ್ ಟಿ ಬೇಕು ; ಸಂಸದೆ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
  • Share this:
ವಿಜಯನಗರ(ಡಿ.07) : ಜಿಎಸ್​​ಟಿ ಬಂದ ಮೇಲೆ ಹಲವರಿಂದ ಅಪಪ್ರಚಾರ ನಡೆಯುತ್ತಿದೆ. ಜಿ.ಎಸ್.ಟಿ ಅನುಷ್ಠಾನ ಆಗಲು ಮೂರ್ನಾಲ್ಕು ವರ್ಷ ಸಮಯ ಬೇಕು. ತೆರಿಗೆ ಸಂಗ್ರಹದಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಮುಂಬರುವ ದಿನಗಳಲ್ಲಿ ಸುಭದ್ರ ಸರಕಾರ ನಿರ್ಮಾಣ ಮಾಡಲು ಜಿ.ಎಸ್.ಟಿ ಅನುಕೂಲವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ  ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಸ್ಥಿರವಾದ ಹಾಗೂ ಅಭಿವೃದ್ದಿಗೆ ಪೂರಕವಾದ ಸರಕಾರ ಬೇಕು ಎಂಬುದು ಜನರ ಬಯಕೆಯಾಗಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಜಾತಿ ಜಾತಿಗಳ ಮದ್ಯೆ ಒಡೆಯುವ ಪ್ರಯತ್ನ ಮಾಡಿದರು. ಈ ಚುನಾವಣೆ ಸಿಎಂ ಯಡಿಯೂರಪ್ಪ ನವರನ್ನು ಗಟ್ಟಿಗೊಳಿಸುವ ಚುನಾವಣೆ. ಫಲಿತಾಂಶದ ಬಳಿಕ ಬಿಜೆಪಿ ಮತ್ತಷ್ಟು ಭದ್ರ ಸರಕಾರವಾಗಿ ನಿರ್ಮಾಣವಾಗಲಿದೆ ಎಂದರು.

ಅಧಿಕಾರ ಮುಗಿದ ಬಳಿಕ ಮತ್ತೆ 14 ತಿಂಗಳುಗಳ ಕಾಲ ಮತ್ತೆ ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿ ಮತ್ತೆ ಸರಕಾರ ನಡೆಸಿದರು. ತಾನಾಗಿಯೇ ಕೆಲ ಶಾಸಕರು ರಾಜೀನಾಮೆ ಸಲ್ಲಿಸಿದರು ಚುನಾವಣಾ ಘೋಷಣೆಯಾದ ಬಳಿಕ ರಾಜೀನಾಮೆ ಕೊಟ್ಟ ಅಭ್ಯರ್ಥಿಗಳನ್ನು ಬಿಜೆಪಿಗೆ ಸೇರಿಸಿಕೊಂಡು ಟಿಕೇಟ್ ನೀಡಿದೆವು ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಒಂದೇ ಸರಕಾರ ಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಇದೆ. ಚುನಾವಾಣಾ ಫಲಿತಾಂಶಕ್ಕೆ ಕೆಲ ಗಂಟೆಗಳಷ್ಟೇ ಬಾಕಿ ಉಳಿದಿದೆ. ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರಕಾರ ಮತ್ತಷ್ಟು ಗಟ್ಟಿಯಾಗುತ್ತದೆ  ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ನೀರು ಕೂಡಾ ರೈತರ ಹೊಲಗಳಿಗೆ ಹರಿಯಬೇಕಿದೆ. ನಮ್ಮ ನೀರನ್ನು ನಾವು ಬಲಸಲು ಸರಕಾರದ ಇಚ್ಚಾಶಕ್ತಿ ಬೇಕಿದೆ. ಮುಂಬರುವ ದಿನಗಳಲ್ಲಿ ಯಡಿಯೂರಪ್ಪ ನವರು ಈ ಬೇಡಿಕೆಯನ್ನು ಈಡೇರಿಸುತ್ತಾರೆ ಎಂದರು

ಅನರ್ಹ ಶಾಸಕರ ವಿಚಾರ ಪ್ರತಿಕ್ರಿಯಿಸಿದ ಅವರು, ಅವರ ಕುರಿತು ಯಾರೇ ನಮ್ಮವರು ಹೇಳಿಕೆ ಕೊಟ್ಟರೆ ಅದು ಅವರ ವೈಯಕ್ತಿಕ ವಿಚಾರ. ಅನರ್ಹ ಶಾಸಕರನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಯಡಿಯೂರಪ್ಪನವರು ಮಾಡಿದ್ದಾರೆ. ಅವರು ಗೆಲ್ಲದಿದ್ದರೆ ಮುಂದೆನೂ ಎಂಬುದು ಕೂಡಾ ಈಗಾಗಲೇ ನಿಶ್ಚಯಿಸಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೆ ಕೈ ಬಿಡುವ ಪ್ರಶ್ನೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.

ಇದನ್ನೂ ಓದಿ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ಅಲ್ಲ ; ಸಚಿವ ಶ್ರೀರಾಮುಲುಈರುಳ್ಳಿ ಬೆಳೆದ ಜಾಗದಲ್ಲಿ ಪ್ರವಾಹ ಬಂದು ಸಂಪೂರ್ಣವಾಗಿ ಈರುಳ್ಳಿ ಬೆಳೆ ಹಾಳಾಗಿ ಹೋಗಿದೆ. ಇಂತಹ ಪರಿಸ್ಥಿತಿಯ ದುರ್ಲಾಭವನ್ನು ವರ್ತಕರು ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಾಗಲೇ ಸೂಚನೆ ನೀಡಿದೆ. ಯಾವ ಗೋಡಾನ್ ಗಳಲ್ಲಿ ಈರುಳ್ಳಿ ಸ್ಟಾಕ್ ಇಟ್ಕೊಂಡಿದ್ದಾರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

 
First published: December 7, 2019, 8:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading